ಬಿ.ಬಿ.ತಾಂಡ: ಛಾವಣಿ ಮುರಿದು ಕಳ್ಳತನ- ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು,ಶಿವಪುರ ಗ್ರಾಮ ಪಂಚಾಯ್ತಿ ಹಾಗೂ ಕೂಡ್ಲಿಗಿ ಪೋಲೀಸ್ ಠಾಣೆ ವ್ಯಾಪ್ತಿಯ. ಬಂಡೇಬಸಾಪುರ ತಾಂಡ(ಬಿ.ಬಿ.ತಾಂಡ)ಗ್ರಾಮದಲ್ಲಿ, ಫೆ22ರಂದು ಮಧ್ಯರಾತ್ರಿ ಸಮಯದಲ್ಲಿ. ಗ್ರಾಮದ ಮುಸ್ಲೀಂ ಓಣಿಯಲ್ಲಿನ ಹೆಂಚಿನ ಛಾಚಣೆ ಹೊದಕೆಯ ಎರೆಡು ಮನೆಗಳಲ್ಲಿ, ಯಾರೋ ಕಳ್ಳರು ಕಳ್ಳತನ ಮಾಡಿದ್ದಾರೆಂದು ತಿಳಿದುಬಂದಿದೆ. ಗ್ರಾಮದ ದೊಡ್ಡಮೌಲಾಸಾಬ್ ಹಾಗೂ ಮದರ್ಸಾ ಎಂಬುವವರಿಗೆ ಸೇರಿದ, ಹೆಂಚಿನ ಛಾವಣೆ ಹೊಂದಿದ್ದ 2ಮನೆಗಳಿಗೆ ಕಳ್ಳರು ಹೆಂಚನ್ನು ಮುರಿದು ಪ್ರವೇಶಿಸಿ ಕಳ್ಳತನ ಮಾಡಿದ್ದಾರೆಂದು ತಿಳಿದು ಬಂದಿದೆ. ಮನೆಯವರು ಕಬ್ಬು ಕಡಿಯುವ ಕೂಲಿಯನ್ನು ಅವಲಂಬಿಸಿದ್ದು, ದುಡಿಯಲಿಕ್ಕಾಗಿ ಕೆಲಸ ಅರಸಿ ಮೈಲಾರ ಕಡೆ ಗುಳೇ ಹೋಗಿದ್ದು. ಮನೆಯಲ್ಲಿ ಸದ್ಯ ವೃದ್ಧೆ ಹಾಗು ಮಕ್ಕಳು ಉಳಿದು ಕೊಂಡಿದ್ದು, ಅವರು ನಿತ್ಯ ಅನತಿ ದೂರದ ತಮ್ಮ ಸಂಬಂಧಿಕರ ಮನೆಯಲ್ಲಿ ಮಲಗುತ್ತಿದ್ದಾರೆ. ಮನೆಯಲ್ಲಿ ಯಾರೂ ಇಲ್ಲದನ್ನರಿತ ಕಳ್ಳರು, ಫೆ22ರಂದು ಮಧ್ಯ ರಾತ್ರಿ ಹೆಂಚು ಹಾಗೂ ಸಿಮೆಂಟ್ ಶೀಟ್ ಹೊಂದಿರುವ ಚಾವಣೆ ಹೊದಿಕೆಯನ್ನ ಮುರಿದು. ಎರೆಡು ಮನೆಗಳಲ್ಲಿನ ಬೀರ್ವಾಗಳನ್ನು ಮುರಿದು, ಅದರಲ್ಲಿರಿಸಲಾಗಿದೆ ಎನ್ನಲಾಗುತ್ತಿರುವ. ಚಿನ್ನದ ಹಾಗೂ ಬೆಳ್ಳಿ ಒಡವೆಗಳನ್ನು. ಟಿವಿ ಮತ್ತು ಇತರೆ ದುಬಾರಿ ಸಾಮಾಗ್ರಿಗಳನ್ನು ಕಳ್ಳರು ಕಳ್ಳತ ಮಾಡಿದ್ದಾರೆಂದು ಗ್ರಾಮಸ್ಥರು ತಿಳಿಸಿದ್ದಾರೆ. ಎಲ್ಲವೂ ಸೇರಿ ಒಟ್ಟು ಅಂದಾಜು 3ಲಕ್ಷ ರೂ ಮೌಲ್ಯದ ಒಡವೆಗಳು, ದುಬಾರಿ ಬೆಲೆಯ ಇತರೆ ಸಾಮಾಗ್ರಿಗಳನ್ನು ಕದ್ದಿರುವುದಾಗಿ ತಿಳಿದು ಬಂದಿದೆ.
Tags
ಟಾಪ್ ನ್ಯೂಸ್