ವಿಜಯನಗರ :
ಯಡಿಯಾಪೂರ್ ಬೆದವಟ್ಟಿ ಹತ್ತಿರದ ವಿಜಯನಗರ ದಲ್ಲಿ ಇಂದು ಬೆಳಿಗ್ಗೆ 11 ಗಂಟೆಯ ಸುಮಾರಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿದ ಕಾರಣದಿಂದಾಗಿ 5 ಜನ ರೈತರಾದ(1) ದೊಡ್ಡ ಈರಪ್ಪ ಕಲಬುರ್ಗಿ(2)ಈರಪ್ಪ.ಯಲ್ಲಪ್ಪ ಕಲಬುರ್ಗಿ (3)ಲಕ್ಷ್ಮಣ ಬಾಲಪ್ಪ ಕಲಬುರ್ಗಿ (4)ಈರಣ್ಣ ಕಲ್ಲಪ್ಪ ಈಳಗೇರ್(5)ಈರಪ್ಪ ಫಕೀರಪ್ಪ ಹುಲ್ಲೂರ ಇವರ ಹೊಟ್ಟು ಮೇವಿನ ಬಣವೆಗಳು ಸುಟ್ಟು ನಾಶವಾಗಿವೆ.
ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ನಂದಿಸಲು ಪ್ರಯತ್ನಿಸಿದರಾದರೂ ಅಗ್ನಿ ಶಾಮಕ ಗಾಡಿಯು ತಡವಾಗಿ ಬಂದದ್ದರಿಂದ ಬಣವೆಗಳು ಭಸ್ಮವಾಗಿರುವ ಘಟನೆ ನಡೆದಿದೆ. ಹತ್ತಿರದಲ್ಲಿದ್ದ ಇನ್ನುಳಿದ ಒಂದೆರಡು ಬಣವೆಗಳು ಸುಡುವುದನ್ನು ನಿಯಂತ್ರಿಸಿ ರಕ್ಷಣೆ ಮಾಡಿದ್ದಾರೆ.
ಸ್ಥಳ ಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸರ್ಕಾರದ ವತಿಯಿಂದ ರೈತರಿಗೆ
ಹೊಟ್ಟು ಮೇವು ಕೊಳ್ಳಲು ಪರಿಹಾರ ಒದಗಿಸಿ ಕೊಟ್ಟರೆ ತುಂಬಾ ಒಳ್ಳೆಯದಾಗುತ್ತದೆ ಎಂದು ವ್ಯಕ್ತಪಡಿಸಿ ಗ್ರಾಮಸ್ಥರ ಪರವಾಗಿ ಅಗ್ನಿ ಶಾಮಕ ಇಲಾಖೆಯ ಸಿಬ್ಬಂದಿಗೆ ಅಭಿನಂದನೆ ತಿಳಿಸಿದ್ದಾರೆ.
ಮಲ್ಲಿಕಾರ್ಜುನ ಹುಲ್ಲೂರ
ವಿಜಯನಗರ.