ಧ್ರುವ ಸರ್ಜಾ ನಟನೆಯ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ಮಾರ್ಟಿನ್ ಟೀಸರ್ ಬಿಡುಗಡೆ ಆಗಿದೆ. ಕನ್ನಡದಿಂದ ಮತ್ತೊಂದು ಅದ್ಭುತ ಆಕ್ಷನ್ ಸಿನಿಮಾ ಹೊರಬರುತ್ತಿರುವ ನಿರೀಕ್ಷೆಯನ್ನು ಟೀಸರ್ ಮೂಡಿಸಿದೆ. ಭರ್ಜರಿ ಮೈಕಟ್ಟಿನ ಧ್ರುವ ಸರ್ಜಾ ವೈರಿಗಳನ್ನು ಕುಟ್ಟಿ ಪುಡಿಮಾಡುತ್ತಿರುವ ದೃಶ್ಯಗಳು ಟೀಸರ್ ತುಂಬ ಇದ್ದು, ಅಭಿಮಾನಿಗಳಲ್ಲಿ ಥ್ರಿಲ್ ಆಗಲು ಸಾಕಷ್ಟು ಸರಕನ್ನು ಟೀಸರ್ ಮೂಲಕ ನಿರ್ದೇಶಕ ಎಪಿ ಅರ್ಜುನ್ ನೀಡಿದ್ದಾರೆ.
ಧ್ರುವ ಸರ್ಜಾ (Dhruva Sarja) ನಟನೆಯ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ (Pan India) ಸಿನಿಮಾ ಮಾರ್ಟಿನ್ ಟೀಸರ್ (Martin Teaser) ಬಿಡುಗಡೆ ಆಗಿದೆ. ಕನ್ನಡದಿಂದ ಮತ್ತೊಂದು ಅದ್ಭುತ ಆಕ್ಷನ್ ಸಿನಿಮಾ ಹೊರಬರುತ್ತಿರುವ ನಿರೀಕ್ಷೆಯನ್ನು ಟೀಸರ್ ಮೂಡಿಸಿದೆ. ಭರ್ಜರಿ ಮೈಕಟ್ಟಿನ ಧ್ರುವ ಸರ್ಜಾ ವೈರಿಗಳನ್ನು ಕುಟ್ಟಿ ಪುಡಿಮಾಡುತ್ತಿರುವ ದೃಶ್ಯಗಳು ಟೀಸರ್ ತುಂಬ ಇದ್ದು, ಅಭಿಮಾನಿಗಳಲ್ಲಿ ಥ್ರಿಲ್ ಆಗಲು ಸಾಕಷ್ಟು ಸರಕನ್ನು ಟೀಸರ್ ಮೂಲಕ ನಿರ್ದೇಶಕ ಎಪಿ ಅರ್ಜುನ್ ನೀಡಿದ್ದಾರೆ.
ಧ್ರುವ ಸರ್ಜಾ ಅಂತೂ ಟೀಸರ್ನಲ್ಲಿಯೇ ಭರ್ಜರಿಯಾಗಿ ಅಬ್ಬರಿಸಿದ್ದಾರೆ. ಟೀಸರ್ನಲ್ಲಿ ಬರುವ ಪಾತ್ರವೊಂದು ಹೇಳುವಂತೆ ಅತ್ಯಂತ ಕ್ರೂರಿ ಈ ಮಾರ್ಟಿನ್. ಅಂತೆಯೇ ಧ್ರುವ ಸರ್ಜಾ ಸಹ ಕ್ರೂರ ಮ್ಯಾನರಿಸಂ ಹಾಗೂ ಬೆಟ್ಟದಂಥಹಾ ದೇಹದೊಟ್ಟಿಗೆ ಭೀತಿ ಹುಟ್ಟಿಸುವಂತೆ ಟೀಸರ್ನಲ್ಲಿ ಕಾಣಿಸಿಕೊಂಡಿದ್ದಾರೆ.
READ ALSO : Kampli :ಮಾರ್ಚ್ 01 ಕ್ಕೆ ರಾಜ್ಯ ಸರ್ಕಾರಿ ನೌಕರರ ಮುಷ್ಕರ
ಟೀಸರ್ನಲ್ಲಿ ಬಂದೂಕು, ಬಾಂಬುಗಳು ಭರ್ಜರಿಯಾಗಿ ಅಬ್ಬರಿಸಿವೆ. ಜೊತೆಗೆ ಹೈಟೆನ್ಶನ್ ಕಾರ್ ಚೇಸ್ಗಳು ಸಹ ಇವೆ. ಟೀಸರ್ನಲ್ಲಿ ಹೀಗೆ ಕಂಡು ಮರೆಯಾಗುವ ಆಕ್ಷನ್ ದೃಶ್ಯಗಳು ಸಿನಿಮಾದಲ್ಲಿ ಅಭಿಮಾನಿಗಳಲ್ಲಿ ಥ್ರಿಲ್ ಮೂಡಿಸುವುದು ಪಕ್ಕಾ.
ಧ್ರುವ ಸರ್ಜಾರ ಈ ಹಿಂದಿನ ಸಿನಿಮಾ ಪೊಗರುನಲ್ಲಿ ಕಾಯ್ ಗ್ರೀನ್ ಸೇರಿದಂತೆ ವಿದೇಶಿ ದೈತ್ಯ ಬಾಡಿ ಬಿಲ್ಡರ್ಗಳ ಜೊತೆ ಸೆಣೆಸಾಡಿದಂತೆಯೇ ಈ ಸಿನಿಮಾದಲ್ಲಿಯೂ ದೈತ್ಯ ಬಾಡಿಬಿಲ್ಡರ್ಗಳ ಜೊತೆ ಸೆಣೆಸಾಡಿದ್ದಾರೆ ಧ್ರುವ ಸರ್ಜಾ. ಒಟ್ಟಾರೆಯಾಗಿ ಟೀಸರ್ ಭಾರಿ ನಿರೀಕ್ಷೆ ಮೂಡಿಸಿದ್ದು, ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ಟೀಸರ್ ಬಿಡುಗಡೆ ಕಂಡಿದೆ.
ಇಂದು (ಫೆಬ್ರವರಿ 23) ಮಧ್ಯಾಹ್ನವೇ ವೀರೇಶ್ ಚಿತ್ರಮಂದಿರದಲ್ಲಿ ಅಭಿಮಾನಿಗಳಿಗಾಗಿ ಮಾರ್ಟಿನ್ ಟೀಸರ್ ಅನ್ನು ಎಕ್ಸ್ಕ್ಲೂಸಿವ್ ಆಗಿ ಪ್ರದರ್ಶನ ಮಾಡಲಾಗಿತ್ತು. ಇದೀಗ ಲಹರಿ ಯೂಟ್ಯೂಬ್ ಚಾನೆಲ್ನಲ್ಲಿ ಅಧಿಕೃತವಾಗಿ ಎಲ್ಲರ ವೀಕ್ಷಣೆಗೆಂದು ಬಿಡುಗಡೆ ಮಾಡಲಾಗಿದೆ.