ನಂಜನಗೂಡು:
ಮಾಜಿ ಸಂಸದ ಧ್ರುವನಾರಾಯಣ್, ಮಾಜಿ ಸಚಿವ ಹೆಚ್‌ಸಿ ಮಹದೇವಪ್ಪ ನಾಪತ್ತೆಯಾಗಿದ್ದಾರೆ.
ನಂಜನಗೂಡಿನಲ್ಲಿ ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ವ್ಯಂಗ್ಯ.
ನಂಜನಗೂಡು ಉಪಚುನಾವಣೆಯಲ್ಲಿ ಆರ್ಭಟಿಸಿದ್ದ ಧ್ರುವನಾರಾಯಣ ಮತ್ತು ಮಾಜಿ ಮಂತ್ರಿ ಹೆಚ್ ಸಿ ಮಹದೇವಪ್ಪ ಕಣ್ಮರೆಯಾಗಿದ್ದಾರೆ.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಆರ್.ಧ್ರುವನಾರಾಯಣ್ , ಎಚ್. ಸಿ ಮಹದೇವಪ್ಪ ರವರನ್ನು ಕಟುವಾಗಿ ಟೀಕಿಸಿದ ಸಂಸದ ವಿ. ಶ್ರೀನಿವಾಸ್ ಪ್ರಸಾದ್.
ಸಂಸದ ವಿ. ಶ್ರೀನಿವಾಸ್ ಪ್ರಸಾದ್‌ರನ್ನು ನಿದ್ರೆಗೆಡಿಸಿದ ನಂಜನಗೂಡಿನ ಉಪಚುನಾವಣೆಯ ಸೋಲು..!
ನಂಜನಗೂಡಿಗೆ ಭೇಟಿ ನೀಡಿದಾಗಲೆಲ್ಲ ಉಪಚುನಾವಣೆಯ ಸೋಲನ್ನು ನೆನಪಿಸಿಕೊಳ್ಳುತ್ತಿರುವ ಸಂಸದ.
ನಂಜನಗೂಡಿನ ಮಿನಿ ವಿಧಾನಸೌಧದಲ್ಲಿ ಹೇಳಿಕೆ.
ನಂಜನಗೂಡಿನ ವಿವಿಧ ಜನಾಂಗದ ಸಮುದಾಯ ಭವನದ ಹಕ್ಕುಪತ್ರ ವಿತರಣೆ ಸಂದರ್ಭದಲ್ಲಿ ಸಂಸದ ಪ್ರಸಾದ್ ಹೇಳಿಕೆ.
ಮೊನ್ನೆ ಮಾಜಿ ಶಾಸಕ ಕೇಶವಮೂರ್ತಿ ವಿರುದ್ಧ ವಾಗ್ದಾಳಿ ನಡೆಸಿದ ಸಂಸದ ಪ್ರಸಾದ್
ರಾಜಕೀಯದಲ್ಲಿ ನನಗೆ ಸರಿಸಮಾನನಲ್ಲದ ಕೇಶವಮೂರ್ತಿ ಗೆಲುವಿಗೆ ಕಾಂಗ್ರೆಸ್ ನಾಯಕರು ಟೊಂಕ ಕಟ್ಟಿ ನಿಂತರು
ನಂಜನಗೂಡು ಉಪಚುನಾವಣೆಯಲ್ಲಿ ನನ್ನ ವಿರುದ್ಧ ಗೆಲುವು ಸಾಧಿಸಿದ ಕೇಶವಮೂರ್ತಿ ಇಂದು ದನ ಕಾಯೋಕೋಗಿರಬೇಕು ಎಂದು ಲೇವಡಿ ಮಾಡಿದ್ದ ಪ್ರಸಾದ್.
ನಂಜನಗೂಡಿನಲ್ಲಿ ಸಂಸದನಾಗಿ ನಾನು ಮತ್ತು ಶಾಸಕ ಹರ್ಷವರ್ಧನ್ ಸಾಕಷ್ಟು ಅಭಿವೃದ್ಧಿ ಮಾಡಿದ್ದೇವೆ.
ನಂಜನಗೂಡು ಪಟ್ಟಣದಲ್ಲಿ ಎಲ್ಲಾ ವರ್ಗದ ಜನರಿಗೆ ಸರಿಸಮಾನವಾಗಿ ಸಮುದಾಯ ಭವನಗಳನ್ನು ನಿರ್ಮಾಣ ಮಾಡಿದ್ದೇವೆ
ಆ ಸಮುದಾಯ ಭವನದ ನಿವೇಶನಗಳಿಗೆ ಇಂದು ತಹಸೀಲ್ದಾರ್ ಸಮ್ಮುಖದಲ್ಲಿ ಹಕ್ಕುಪತ್ರ ವಿತರಣೆ ಮಾಡಲಾಗುತ್ತಿದೆ.
Tags
ರಾಜಕೀಯ