*ಹೌದು*:- ಪಟ್ಟಣದಲ್ಲಿ ವಾಲ್ಮೀಕಿ ವೃತ್ತದಿಂದ ಆರಂಭವಾದ ಶಿವಾಜ ಮಹಾರಾಜರ ಮೂರ್ತಿ ಮೆರವಣಿಗೆಗೆ ಪಟ್ಟಣದ ನೂರಾರು ಯುವಕರು ಭಾಗಿಯಾದರು.ಪ್ರಮುಖ ಬೀದಿಗಳಲ್ಲಿ ಸಾಗಿದ ಮೆರವಣಿಗೆ ಯುವಕರು ಡಿಜೆ ಸದ್ದಿಗೆ ಕುಣಿದು ಕುಪ್ಪಳಿಸಿದರು. ಸುಂಕಲಮ್ಮ ಕಟ್ಟೆ.ಬಸನಿಲ್ದಾಣ ಮಾರ್ಗವಾಗಿ ಮೆರವಣಿಗೆ ಮರಳಿ ವಾಲ್ಮೀಕಿ ವೃತ್ತ ತಲುಪಿತು. ಮೆರವಣಿಗೆಯಲ್ಲಿ ಯುವಕರು ಶಿವಾಜಿ ಮಹಾರಾಜರ ಘೋಷಣೆಗಳನ್ನು ಕೂಗುತ್ತಾ ಹೆಜ್ಜೆ ಹಾಕಿದರು.
ಈ ಸಂದರ್ಭದಲ್ಲಿ ಬಿಜೆಪಿ ಯುವ ಮುಖಂಡ ಪ್ರಸನ್ ಪಾಟೀಲ್,ಸಿದ್ದೇಶ್ವರ ಗುರಿಕಾರ್.
ಶಿವಪುತ್ರಪ್ಪ ಅರಳಹಳ್ಳಿ,ಚನ್ನಬಸವ ದೇಸಾಯಿ, ಪಂಪಾರೆಡ್ಡಿ ಕುಲಕರ್ಣಿ,ಶಂಕ್ರಯ್ಯ ಹಿರೇಮಠ,
ರಾಮಚಂದ್ರಬೇರ್ಗಿ, ಸುಖಮುನಿ,ಮತ್ತು ಭಜರಂಗ ದಳದ ಮುಖಂಡರು ಹಾಗೂ ಕಾರ್ಯಕರ್ತರು ಇದ್ದರು.
ರಿಪೋರ್ಟರ್:-* ಮೆಹಬೂಬ ಮೋಮಿನ
Tags
ರಾಜ್ಯ