ಮಾ.19, ಜಗದ್ಗುರು ಶ್ರೀ ರೇಣುಕಾಚಾರ್ಯರ ಜಯಂತೋತ್ಸವ
ಕೊಪ್ಪಳ,: ವೀರಶೈವ ಧರ್ಮದ ಮೂಲ ಸಂಸ್ಥಾಪಕರಾದ ಶ್ರೀಜಗದ್ಗುರು ರೇಣುಕಾಚಾರ್ಯರ ಜಯಂತೋತ್ಸವವನ್ನು ಮಾ.19 ರವಿವಾರ
ವೀರಮಾಹೇಶ್ವರ ಕ್ಷೇಮಾಭಿವೃದ್ಧಿ ಸಂಘ ಹಾಗೂ ಕೊಪ್ಪಳ ಜಿಲ್ಲಾಡಳಿತದ ವತಿಯಿಂದ ಕೊಪ್ಪಳ ನಗರದಲ್ಲಿ ವಿಜೃಂಭಣೆಯಿಂದ ಜರುಗಲಿದೆ ಎಂದು ಹಿರಿಯ ವಕೀಲ ಹಾಗೂ ಜಂಗಮ ಸಮಾಜ ಮುಖಂಡ ವಿ.ಎಸ್ ಭೂಸನೂರಮಠ ಹೇಳಿದರು.
ಶುಕ್ರವಾರ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿ,ಪ್ರಸ್ತುತ ಜಯಂತಿಯಲ್ಲಿ ಜಂಗಮ ವಟುಗಳ ಆಯ್ಯಾಚಾರ, ಲಿಂಗದೀಕ್ಷೆ ಸೇರಿದಂತೆ ಇತರೆ ಸಾಂಪ್ರದಾಯಿಕ ವಿಧಿ ವಿಧಾನಗಳು ಜರುಗುವವು. ರೇಣುಕಾಚಾರ್ಯರ ಭಾವಚಿತ್ರದೊಂದಿಗೆ ಮೆರವಣಿಗೆ ಹಾಗೂ 'ಸಾರೋಟ'ದಲ್ಲಿ ಉಜ್ಜಯಿನಿ ಶ್ರೀಗಳು ಭಾಗವಹಿಸುವರು ಎಂದರು. ಸಮಾಜದ ಮುಖಂಡ ವೀರೇಶ ಮಹಾಂತಯ್ಯನಮಠ ಮಾತನಾಡಿ, ರವಿವಾರ ಬೆಳಿಗ್ಗೆ 8 ಘಂಟೆಗೆ ಕುಂಭ, ಕಳಸ, ಸಕಲ ವಾದ್ಯಗಳೊಂದಿಗೆ ಕೋಟೆಯ ರಸ್ತೆಯಲ್ಲಿರುವ ಶ್ರೀಮಹೇಶ್ವರ ದೇವಸ್ಥಾನದಿಂದ ಆರಂಭವಾಗುವ ಮೆರವಣಿಗೆಯು ಗಡಿಯಾರ ಕಂಬದ ಮುಖಾಂತರ ಜವಾಹರ ರಸ್ತೆ, ಅಶೋಕ ಸರ್ಕಲ್ ಮೂಲಕ ಮಹಾಂತಯ್ಯನಮಠ ಕಲ್ಯಾಣ ಮಂಟಪದಲ್ಲಿ ಸಂಪನ್ನವಾಗುತ್ತದೆ. ನಂತರದಲ್ಲಿ ಬೆಳಗ್ಗೆ 11 ಗಂಟೆಗೆ
ಧಾರ್ಮಿಕ ಚಿಂತನಾಗೋಷ್ಠಿಗಳು ಜರುಗುವವು. ಉಜ್ಜಯಿನಿ ಶ್ರೀಸಿದ್ಧಲಿಂಗ ರಾಜದೇಶಿಕೇಂದ್ರ ಮಹಾಸ್ವಾಮೀಜಿ, ಅಭಿನವ ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳು ದಿವ್ಯ ಸಾನಿಧ್ಯವನ್ನು ವಹಿಸಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರು, ರಾಜ್ಯ ಸಚಿವರು, ಸಂಸದರು, ಶಾಸಕರು ಸೇರಿದಂತೆ ಅನೇಕ ಜನಪ್ರತಿನಿಧಿ, ಅಧಿಕಾರಿಗಳು ಮತ್ತು ವೀರಮಹೇಶ್ವರ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ಉಪಸ್ಥಿತರಿರುವರು. ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ಸಿದ್ದಯ್ಯ ಹಿರೇಮಠ, ನೀಲಕಂಠಯ್ಯ ಹಿರೇಮಠ, ವೀರುಪಾಕ್ಷಯ್ಯ ಗದಗಿನಮಠ, ಅಜ್ಜಯ್ಯ ಹಿರೇಮಠ, ನಾಗಭೂಷಣ ಸಾಲಿಮಠ, ಬಸಯ್ಯ ಹೆಚ್.ಎಂ, ಕೊಟ್ರುಬಸಯ್ಯ, ಭರತ್ ಗದಗಿನಮಠ, ಕಲ್ಲಯ್ಯ, ಪಂಪಯ್ಯ ಹಿರೇಮಠ, ಬಸವಲಿಂಗಯ್ಯ ಗದಗಿನಮಠ ಸೇರಿದಂತೆ ಇತರರು ಇದ್ದರು.
ವರದಿ : ಶಿವಕುಮಾರ ಹಿರೇಮಠ
Mar. 19, Jayanthotsava of Jagadguru Sri Renukacharya
Koppala: Jayanthotsava of Srijagadguru Renukacharya, the original founder of Veerashaivism, will be celebrated on Sunday, March 19.
Senior lawyer and Jangam Samaj leader VS Bhusanuramath said that the Veermaheshwar Welfare Association and the Koppal district administration will be held with a flourish in Koppal city.
Friday at the press house in the city, He held a press conference and said,On the current Jayanthi, other traditional rites such as Ayachara of Jangam Vatu, Lingadiksha are performed. Ujjain Sri will participate in the procession and 'Sarota' with Renukacharya's portrait, he said. Community leader Veeresh Mahanthaiyanamatha said that Sunday morning at 8 o'clock, the procession will start from Srimaheshwara temple on Kote road with kumbha, kalasa and all instruments and end at Mahanthaiyanamatha Kalyana Mandap through Jawahar Road, Ashoka Circle in front of the clock pillar. Later at 11 am
Religious gatherings are held. Ujjain Srisiddhalinga Rajadeshikendra Mahaswamiji, Abhinava Sri Gavisiddheswara Mahaswami will perform the Divine Sanidhya. District In-charge Minister, State Minister, MPs, MLAs and many representatives, officers and office bearers of Veermaheshwar Welfare Development Association will be present. District President Siddaiah Hiremath, Neelkanthaiah Hiremath, Veerupakshaiah Gadaginamath, Ajjaiah Hiremath, Nagabhushan Salimath, Basaiah HM, Kotrubasaiah, Bharat Gadaginamath, Kallaiah, Pampaiah Hiremath, Basavalingaiah Gadaginamath and others were present in the press conference.
Report : Shivakumar Hiremath