ಶಾಸಕ ಕೆ.ರಾಘವೇಂದ್ರ ಹಿಟ್ನಾಳರ 44ನೇ ಹುಟ್ಟು ಹಬ್ಬ : ಹುಲಿಗೆಮ್ಮ ದೇವಿಗೆ ವಿಶೇಷ ಪೂಜೆ
ಕೊಪ್ಪಳ,: ಕೊಪ್ಪಳ ವಿಧಾನಸಭಾ ಕ್ಷೇತ್ರದ ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳ ಅವರ 44ನೇ ಹುಟ್ಟು ಹಬ್ಬದ ಪ್ರಯುಕ್ತ ಕ್ಷೇತ್ರದ ಯುವಕರು ಈ ಭಾಗದ ಆರಾಧ್ಯದೇವಿ ಶ್ರೀಹುಲಿಗೆಮ್ಮ ದೇವಿಗೆ ವಿಶೇಷವಾದ ಪೂಜೆ ಸಲ್ಲಿಸಿದರು.
ಈ ವೇಳೆ ಕೊಪ್ಪಳ ಕ್ಷೇತ್ರದ ಮುತ್ತುರಾಜ್ ಹಾಲವರ್ತಿ, ವಿಜಯಕುಮಾರ ಹುಲಿಗಿ, ಬಸವರಾಜ ಹುಳ್ಳಿ, ಹಾಲೇಶ, ಮಲ್ಲಿಕಾರ್ಜುನ, ಮಂಜುನಾಥ, ನಾಗರಾಜ ಸೇರಿದಂತೆ ಅಭಿಮಾನಿ ಬಳಗ ಪೂಜೆ ಸಲ್ಲಿಸಿದರು.
ವರದಿ : ಶಿವಕುಮಾರ ಹಿರೇಮಠ