ಕೊಪ್ಪಳ,ಮಾ.5 : ಓಜನಹಳ್ಳಿ ಗ್ರಾಮದಲ್ಲಿ ಕಿತ್ತೂರು ಚೆನ್ನಮ್ಮ ಪುತ್ಥಳಿ ಅನಾವರಣ

ಕೊಪ್ಪಳ,: ಓಜನಹಳ್ಳಿ ಗ್ರಾಮದಲ್ಲಿ ಮಾ.5 ರಂದು ರವಿವಾರ ಸಂಜೆ 5 ಗಂಟೆಗೆ ವೀರರಾಣಿ ಕಿತ್ತೂರು ಚೆನ್ನಮ್ಮಳ ಪುತ್ಥಳಿ ಅನಾವರಣ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದಲ್ಲಿ ಪಂಚಮಸಾಲಿ ಹರಿಹರ ಪೀಠದ ವಚನಾನಂದ ಸ್ವಾಮೀಜಿ, ಕೊಪ್ಪಳದ ಅಭಿನವ ಗವಿದ್ಧೇಶ್ವರ ಸ್ವಾಮೀಜಿ, ಕೂಡಲಸಂಗಮದ ಬಸವಜಯ ಮೃತ್ಯುಂಜಯ ಸ್ವಾಮೀಜಿಗಳು ದಿವ್ಯ ಸಾನಿಧ್ಯ ವಹಿಸುವರು. ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ ನಿರಾಣಿ ಉದ್ಘಾಟಿಸುವರು. ಸಂಸದ ಸಂಗಣ್ಣ ಕರಡಿ ಅಧ್ಯಕ್ಷತೆಯನ್ನು ವಹಿಸುವರು. ಸಚಿವ ಸಿ.ಸಿ ಪಾಟೀಲ ಜ್ಯೋತಿ ಬೆಳಗಿಸುವರು. ಮುಖ್ಯ ಅತಿಥಿಗಳಾಗಿ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್, ಸಚಿವರಾದ ಗೋವಿಂದ ಕಾರಜೋಳ, ಶಂಕರ ಪಾಟೀಲ ಮನೇನಕೊಪ್ಪ, ಆನಂದ ಸಿಂಗ್, ಹಾಲಪ್ಪ ಆಚಾರ್, ಬಿ.ಶ್ರೀರಾಮುಲು, ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ ರಾಘವೇಂದ್ರ, ಬಸವರಾಜ ಪಾಟೀಲ ಯತ್ನಾಳ, ಶಾಸಕರಾದ ರಾಘವೇಂದ್ರ ಹಿಟ್ನಾಳ, ಪರಣ್ಣ ಮುನವಳ್ಳಿ, ಅಮರೇಗೌಡ ಬಯ್ಯಾಪೂರ, ಬಸವರಾಜ ದಡೇಸೂಗುರು ಸೇರಿದಂತೆ ಅನೇಕ ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದು ತಾಲೂಕ ಪಂಚಮಸಾಲಿ ಸಮಾಜದ ಅಧ್ಯಕ್ಷ ಕರಿಯಪ್ಪ ಮೇಟಿ, ಮುಖಂಡರಾದಗವಿಸಿದ್ದಪ್ಪ ಚಿನ್ನೂರು, ಬಸವನಗೌಡ ತೊಂಡಿಹಾಳ, ವೀರಪ್ಪ ಅಣ್ಣಿಗೇರಿ, ದೇವರಾಜ ಹಾಲಸಮುದ್ರ ಅವರು ತಿಳಿಸಿದ್ದಾರೆ.
Previous Post Next Post

AD

 


Contact For News&Ads

Siddi TV

Contact Form

f="https://unpkg.com/video.js/dist/video-js.css" rel="stylesheet">