ಪಟ್ಟಣದ ವಾಸವಿ ಮಂದಿರದಲ್ಲಿ ಆಲ್ಫಾ ಪಿಯು ಕಾಲೇಜ್ ವತಿಯಿಂದ ಸಂಸ್ಕೃತಿಕ ಮತ್ತು ಗೌರವಾನ್ವಿತ ಕಾರ್ಯಕ್ರಮ.
ಕೃಷ್ಣರಾಜನಗರ : ಪಟ್ಟಣದ ಪ್ರತಿಷ್ಠಿತ ಪಿಯು ಕಾಲೇಜ್ ಆಗಿರುವ ಆಲ್ಫಾ ಕಾಲೇಜ್ ವತಿಯಿಂದ ಪಟ್ಟಣದ ವಾಸವಿ ಮಂದಿರದಲ್ಲಿ ಸಾಂಸ್ಕೃತಿಕ ಮತ್ತು ಗೌರವಾನ್ವಿತ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು ಈ ಕಾರ್ಯಕ್ರಮವನ್ನು ಶಾಸಕರಾದ ಸಾರಾ ಮಹೇಶ್ ಅವರು ಸೇರಿದಂತೆ ಕಾಲೇಜಿನ ಆಡಳಿತ ಮಂಡಳಿ ಮತ್ತು ಪ್ರಾಂಶುಪಾಲರು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಸಾರಾ ಮಹೇಶ್ ಶೈಕ್ಷಣಿಕ ವಿಚಾರದಲ್ಲಿ ಕ್ಷೇತ್ರದ ಮುಂದೆ ಇದೆ ಶೈಕ್ಷಣಿಕ ವಿಚಾರದಲ್ಲಿ ಎಲ್ಲ ರೀತಿಯ ಸೌಲಭ್ಯ ಮತ್ತು ಸಹಕಾರ ನೀಡಲು ನಾನು ಬದ್ಧನಿದ್ದೇನೆ ಎಂದರು. ಈ ಒಂದು ಕಾರ್ಯಕ್ರಮದಲ್ಲಿ ಸಂಸ್ಥೆಯ ಕಾರ್ಯದರ್ಶಿ ಸುಬ್ರಹ್ಮಣ್ಯ ಸಂಸ್ಥೆಯ ಅಧ್ಯಕ್ಷರಾದ ರವಿಕುಮಾರ್ ಪ್ರಾಂಶುಪಾಲರಾದ ನವೀನ್ ಮತ್ತು ಪ್ರತಿಭಾ ಹಾಗೂ ವೈದ್ಯರಾದ ದಿವ್ಯತ ಸೇರಿದಂತೆ ಉಪನ್ಯಾಸಕರ ವರ್ಗ ಮತ್ತು ಶಾಲಾ ವಿದ್ಯಾರ್ಥಿಗಳು ಹಾಗೂ ಪೋಷಕರು ಹಾಜರಿದ್ದರು.
Tags
ರಾಜ್ಯ