ಕಳೆದ ಹಲವಾರು ವರ್ಷಗಳಿಂದ ಗ್ರಾಮೀಣ ಕ್ಷೇತ್ರದಲ್ಲಿ ಸೇವೆ ಮಾಡಿರುವೆ. ಬಳ್ಳಾರಿ ಗ್ರಾಮೀಣ ಭಾಗದಿಂದ ಸ್ಪರ್ಧೆ ಮಾಡಿರೋ ನಾಲ್ಕು ಬಾರಿಯಲ್ಲಿ ( ಒಮ್ಮೆ ಬಳ್ಳಾರಿ ಎಂಪಿ ಕ್ಷೇತ್ರ ) ಒಮ್ಮೆಯೂ ಅಲ್ಲಿ ಸೋತಿಲ್ಲ. ಕಾರಣಾಂತದಿಂದ ಮತ್ತು ಹೈಕಮೆಂಡ್ ನಿರ್ಧಾರದ ಹಿನ್ನಲೆ ಕಳೆದ ಚುನಾವಣೆಯಲ್ಲಿ ಮೊಳಕಾಲ್ಮೂರು ಮತ್ತು ಬಾದಾಮಿಯಿಂದ ಸ್ಪರ್ಧೆ ಮಾಡಿದ್ದೇ ಆದ್ರೇ, ಈ ಬಾರಿ ಮತ್ತೊಮ್ಮೆ ನನ್ನ ಸ್ವಕ್ಷೇತ್ರಕ್ಕೆ ಮರಳುತ್ತಿರುವೆ. ಈ ಬಗ್ಗೆ ಹೈ ಕಮಾಂಡ್ ಗೂ ತಿಳಿಸಿದ್ದು, ಬಹುತೇಕ ಎಲ್ಲರ ಅಪೇಕ್ಷೆ ಮೇರೆಗೆ ಬಳ್ಳಾರಿ ಗ್ರಾಮೀಣ ದಿಂದಲೇ ಸ್ಪರ್ಧೆ ಮಾಡುವೆ ಸಚಿವ ಶ್ರೀರಾಮುಲು ಸ್ಪಷ್ಟಪಡಿಸಿದ್ದಾರೆ.
Source: Asianet Suvarna News
Tags
ರಾಜಕೀಯ