ಕಂಪ್ಲಿ: ಮತದಾರರಿಗೆ ಆಮಿಷವೊಡ್ಡಲು ಸಂಗ್ರಹಿಸಿದ್ದ 102 ಸೀರೆಗಳನ್ನು ಚುನಾವಣಾ ನೀತಿ ಸಂಹಿತೆ ತಂಡದವರು ಖಚಿತ ಮಾಹಿತಿ ಮೇರೆಗೆ ವಶಪಡಿಸಿಕೊಂಡಿರುವುದು ಮಂಗಳವಾರ ಜರುಗಿದೆ.
ತಾಲ್ಲೂಕಿನ ಶ್ರೀರಾಮರಂಗಾಪುರದಲ್ಲಿ 41 ಸೀರೆ ಮತ್ತು
ನಂ.10 ಮುದ್ದಾಪುರ ಗ್ರಾಮದಲ್ಲಿ 61ಸೀರೆಗಳನ್ನು ವಶಪಡಿಸಿಕೊಳ್ಳಲಾಗಿದೆ.ಈ ಎಲ್ಲ ಸೀರೆಗಳು ಬಿಜೆಪಿ ಚಿಹ್ನೆ ಇರುವ ಚೀಲದಲ್ಲಿದ್ದ ಸಂಗ್ರಹಿಸಲಾಗಿತ್ತು.
ಸೆಕ್ಟರ್ ಅಧಿಕಾರಿ ಧರ್ಮಣ್ಣ ಜಾಗೃತದಳ ಅಧಿಕಾರಿ ಶ್ರೀನಿವಾಸ್ ಅರವಿ, ಎಫ್.ಎಸ್.ಟಿ ರವಿಕುಮಾರ್, ಪಿಎಸ್‌ಐ ಶಾರವ್ವ ಡಿ, ದೊಡ್ಡಾಣಿ,ಹೆಡ್ ಕಾನ್‌ಸ್ಟೇಬಲ್ ದತ್ತಾತ್ರೇಯ, ಗ್ರಾಮ ಲೆಕ್ಕಾಧಿಕಾರಿ ವೆಂಕಟೇಶ್ ದಾಳಿಯಲ್ಲಿ ಭಾಗವಹಿಸಿದ್ದರು. ನಂ.10 ಮುದ್ದಾಪುರ ಪ್ರಕರಣ ಕಂಪ್ಲಿ ಠಾಣೆಯಲ್ಲಿ ಮತ್ತು ಶ್ರೀರಾಮರಂಗಾಪುರ ಪ್ರಕರಣ ಕುಡುತಿನಿ ಠಾಣೆಯಲ್ಲಿ ದಾಖಲಾಗಿದೆ.
ವರದಿ: ಚನ್ನಕೇಶವ