ಕುಷ್ಟಗಿ ವಿಧಾನಸಭಾ ಕ್ಷೇತ್ರದಲ್ಲಿ ಬಿ ಜೆ ಪಿ ಎಸ್ ಟಿ ಸಮಾವೇಶ ಯಶಸ್ವಿ
ಕುಷ್ಟಗಿ ತಾಲೂಕಿನ ಹನಮಸಾಗರದ ಎ ಪಿ ಎಂ ಸಿ ಆವರಣದಲ್ಲಿ ಮಂಗಳವಾರ ನಡೆದ ಭಾರತೀಯ ಜನತಾ ಪಕ್ಷದ ಎಸ್ ಟಿ ಮೋರ್ಚಾ ಸಮಾವೇಶ ಯಶಸ್ವಿ ಆಯ್ತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ರಾಜ್ಯ ಬಿಜೆಪಿ ಉಪಾಧ್ಯಕ್ಷ ಎಸ್ ಸಿ ಎಸ್ ಟಿ ಸಮಾವೇಶದ ರಾಜ್ಯ ಸಂಚಾಲಕರಾದ ಬಿ ವೈ ವಿಜೇಂದ್ರ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕುಷ್ಟಗಿ ಕ್ಷೇತ್ರದಿಂದ ಸರಳ ಸಜ್ಜನ ವ್ಯಕ್ತಿಯಾದ ದೊಡ್ಡನಗೌಡ ಎಚ್ ಪಾಟೀಲರನ್ನು ಹಾಗೂ ಭಾರತೀಯ ಜನತಾ ಪಕ್ಷವನ್ನು ಗೆಲ್ಲಿಸುವುದು ಅಷ್ಟೇ ಅಲ್ಲ ಈ ಭಾಗದ ಮಂತ್ರಿಯಾಗಿ ಕ್ಷೇತ್ರದ ಸರ್ವಾಂಗನ ಅಭಿವೃದ್ಧಿಗಾಗಿ ಶ್ರಮಿಸುವಂತಾಗಬೇಕು ಎಂದು ಕಾರ್ಯಕರ್ತರಲ್ಲಿ ಕರೆ ನೀಡಿದರು.
ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತರು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಸಾಧನೆಗಳನ್ನು ಮನೆ ಮನೆಗೆ ತಲುಪಿಸಿ ರಾಜ್ಯದಲ್ಲಿ ಮತ್ತೊಮ್ಮೆ ಪಕ್ಷವನ್ನು ಗೆಲ್ಲಿಸುವಂತಹ ಕಾರ್ಯ ನಡೆಯಬೇಕೆಂದು ಕಾರ್ಯಕರ್ತರಲ್ಲಿ ಮನವಿ ಮಾಡಿದರು ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿದ ಇನ್ನೋರ್ವ ಮಾಜಿ ಸಚಿವ ಶಾಸಕ ರಾಜುಗೌಡ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳಿಗೆ ಭಾರತೀಯ ಜನತಾ ಪಕ್ಷದ ಸರ್ಕಾರ ಅನೇಕ ಕಾರ್ಯಕ್ರಮಗಳನ್ನು ರೂಪಿಸಿದ್ದು ವಾಲ್ಮೀಕಿ ಸಮಾಜದ ಅನೇಕ ಶಾಸಕರನ್ನು ಸಚಿವರನ್ನಾಗಿ ಮಾಡಿದ ಕೀರ್ತಿ ಬಿಜೆಪಿ ಪಕ್ಷಕ್ಕೆ ಹಾಗೂ ಯಡಿಯೂರಪ್ಪ ಅವರಿಗೆ ಸಲ್ಲುತ್ತದೆ ಸಮಾಜದ ಮೀಸಲಾತಿಯನ್ನು ಹೆಚ್ಚಿಸಿದ್ದಾರೆ ವಾಲ್ಮೀಕಿ ಜಯಂತಿ ಸರ್ಕಾರ ರಜೆ ಘೋಷಣೆ ಮಾಡಿದ್ದು ಯಡಿಯೂರಪ್ಪ ಸರ್ಕಾರ ಪ್ರತ್ಯೇಕ ಸಚಿವಾಲಯವನ್ನು ಮಾಡಿದ್ದಾರೆ ಇಷ್ಟೆಲ್ಲ ಕೊಟ್ಟ ಭಾರತೀಯ ಜನತಾ ಪಕ್ಷಕ್ಕೆ ಮತ ಹಾಕದಿದ್ದರೆ ಹೇಗೆ ಎಂದು ಕಾರ್ಯಕರ್ತರಲ್ಲಿ ಪ್ರಶ್ನೆ ಮಾಡಿದರು ನನ್ನನ್ನು ಸಚಿವರನ್ನಾಗಿ ಶ್ರೀರಾಮುಲು ಅಣ್ಣನನ್ನು ಉಪಮುಖ್ಯಮಂತ್ರಿಯಾಗಿ ಮಾಡಬೇಕೆಂದು ಒತ್ತಾಯ ಮಾಡಿದ್ದೆವು ಸಮಾಜದ ಮೀಸಲಾತಿ ಹೋರಾಟ ಸಂದರ್ಭದಲ್ಲಿ ನಮ್ಮ ಪಕ್ಷದ ವಾಲ್ಮೀಕಿ ಸಮಾಜದ ಶಾಸಕರುಗಳು ಸಚಿವರುಗಳು ನಾವು ಮಂತ್ರಿ ಆಗುವ ಆಸೆಯನ್ನು ಬದಿಗಿಟ್ಟು ಸಮಾಜದ ಮೀಸಲಾತಿ ಹೆಚ್ಚಿಸಿದ್ರೆ ಯಾವ ಸಚಿವಗಿರಿ ನಮಗೆ ಬೇಕಾಗಿಲ್ಲ ಎಂದು ಮುಖ್ಯಮಂತ್ರಿಗಳ ಗಮನಕ್ಕೆ ತರುವುದರ ಮೂಲಕ ಗಮನ ಸೆಳೆದೆವು ಅದರಂತೆ ನಮ್ಮ ಸಮುದಾಯಕ್ಕೆ ಮೀಸಲಾತಿಯನ್ನು ಹೆಚ್ಚಿಸುವ ಮೂಲಕ ಮುಖ್ಯಮಂತ್ರಿಗಳು ನುಡಿದಂತೆ ನಡೆದಿದ್ದಾರೆ ಎಂದು ವಿಶ್ವಾಸದ ನುಡಿಗಳನ್ನು ಹಾಡಿದರು.
ಈ ಒಂದು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕುಷ್ಟಗಿ ಕ್ಷೇತ್ರದ ಮಾಜಿ ಶಾಸಕ ದೊಡ್ಡನಗೌಡ ಎಚ್ ಪಾಟೀಲ್ ಹಾಲಿ ಶಾಸಕರು ಚುನಾವಣೆ ಸಂದರ್ಭದಲ್ಲಿ ಹಣವನ್ನು ಅಂಚಿ ಗೆಲುವು ಸಾಧಿಸಬೇಕೆಂಬ ಒಂದೇ ಒಂದು ಉದ್ದೇಶದಿಂದ ತಾಲೂಕಿನಲ್ಲಿ ಕಳಪೆ ಮಟ್ಟದ ಕಾಮಗಾರಿಯನ್ನು ಕೈಗೊಂಡು ತಮ್ಮ ಸಂಬಂಧಿ ಗುತ್ತೇದಾರ ಮೂಲಕ ಅಣ ಲೂಟಿ ಮಾಡಿದ್ದಾರೆ ಎಂದು ಆರೋಪಿಸಿದರು ತಾಲೂಕಿನಲ್ಲಿ ಶೈಕ್ಷಣಿಕವಾಗಿ ಭೌಗೋಳಿಕವಾಗಿ ಆರ್ಥಿಕವಾಗಿ ಮೂಲಭೂತ ಸೌಲಭ್ಯಗಳನ್ನು ಒಳಗೊಂಡ ಹನುಮಸಾಗರ ಹನುಮನಾಳ ಕುಷ್ಟಗಿ ತಾವರಗೇರಾ ಬಹುದೊಡ್ಡ ಪಟ್ಟಣದಲ್ಲಿ ಕೈಗಾರಿಕಾ ಅಭಿವೃದ್ಧಿ ಮಾಡಬೇಕಾದಂತ ಶಾಸಕರು ಬಾಗಲಕೋಟೆ ಜಿಲ್ಲೆಗೆ ಸಮೀಪ ಇರುವ ಕ್ಯಾದಗುಪ್ಪಿ ಗ್ರಾಮದ ತಮ್ಮ ಜಾತಿಯವರು ಹೆಚ್ಚಿರುವ ಜಮೀನುಗಳಲ್ಲಿ ಕೈಗಾರಿಕಾ ಪ್ರದೇಶವನ್ನು ಮಾಡುತ್ತಿರುವುದು ತಮ್ಮ ಸಮುದಾಯದ ಅಭಿವೃದ್ಧಿ ಹೊರ್ತು ಬೇರೆ ಸಮುದಾಯಕ್ಕೆ ಅಭಿವೃದ್ಧಿ ಅಲ್ಲ ಎಂದು ಚಡಿಸಿದರು ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿದ ಸಂಸತ್ ಸದಸ್ಯರಾದ ಸಂಗಣ್ಣ ಕರಡಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಅಭಿವೃದ್ಧಿಯತ್ತ ಸಾಗುತ್ತಿದ್ದು ಕೆಲವರಿಗೆ ನಡುಕ ಹುಟ್ಟಿಸುವಂತಾಗಿದೆ ಎಂದು ಹೇಳಿದರು ವಿಧಾನಪರಿಷತ್ ಸದಸ್ಯರಾದ ಹೇಮಲತಾ ನಾಯಕ್ ಕನಕಗಿರಿ ಶಾಸಕರಾದ ಬಸವರಾಜ್ ದಡಶನೂರು ಕುಷ್ಟಗಿ ಕ್ಷೇತ್ರದ ಮಾಜಿ ಶಾಸಕರಾದ ಕೆ ಶರಣಪ್ಪ ವಕೀಲರು ಕುರಿ ಮತ್ತು ಹುಣ್ಣಿ ನಿಗಮದ ಮಾಜಿ ಅಧ್ಯಕ್ಷರಾದ ಶರಣು ತಳ್ಳಿಕೇರಿ ಬಿಜೆಪಿ ಕುಷ್ಟಗಿ ತಾಲೂಕು ಅಧ್ಯಕ್ಷರಾದ ಬಸವರಾಜ್ ಹಳ್ಳೂರ್ ಇನ್ನೂ ಅನೇಕರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು ಈ ಕಾರ್ಯಕ್ರಮದಲ್ಲಿ ಮಾಜಿ ಜಿಲ್ಲಾ ಪಂಚಾಯ್ತಿ ಸದಸ್ಯರಾದ ಕೆ ಮಹೇಶ್ ಕುಷ್ಟಗಿ ಪುರಸಭೆ ಅಧ್ಯಕ್ಷರಾದ ಜಿ ಕೆ ಹಿರೇಮಠ್ ಪ್ರಮುಖರಾದ ಪ್ರಭಾಕರ ಚಿಣಿ ವಿಠಲ ಸ್ರೇಷ್ಟಿ ನಾಗೂರ್ ಪರಸಪ್ಪ ಕತ್ತಿ ಮಲ್ಲಣ್ಣ ಪಲ್ಲೇದ್ ನಾಗರಾಜ್ ಮೇಲಿನಮನಿ ಚಂದ್ರು ವಡಿಗೇರ್ ಮಹಾಂತೇಶ್ ಕುಷ್ಟಗಿ ಇನ್ನು ಅನೇಕ ಪಕ್ಷದ ಪ್ರಮುಖರು ಹಾಗೂ ಸಾವಿರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು ಎಸ್ ಟಿ ಮೋರ್ಚಾದ ತಾಲೂಕು ಅಧ್ಯಕ್ಷ ಚಂದ್ರು ಭಾವಿಕಟ್ಟಿ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಸ್ವಾಗತಿಸಿದರು ಇದಕ್ಕೂ ಮೊದಲು ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಸುಮಾರ 500ಕ್ಕೂ ಹೆಚ್ಚು ಮಹಿಳೆಯರು ಕುಂಭವನ್ನು ಹೊತ್ತು ರಾಜ್ಯ ನಾಯಕರನ್ನು ಮೆರವಣಿಗೆ ಮೂಲಕ ಬರಮಾಡಿಕೊಂಡರು ನೂರಾರು ಜನ ಕಾಂಗ್ರೆಸ್ ಪಕ್ಷವನ್ನು ತೊರೆದು ಬಿಜೆಪಿ ಸೇರ್ಪಡೆಗೊಂಡರು
ವರದಿ : ಮಲ್ಲಿಕಾರ್ಜುನ ದೋಟಿಹಾಳ
Tags
ರಾಜಕೀಯ