ಕೆ.ಆರ್.ಪೇಟೆ ತಾಲ್ಲೂಕಿನ ಮಡವಿನಕೋಡಿ ಮತ್ತು ಬೀರವಳ್ಳಿಯಲ್ಲಿ ವಿದ್ಯುತ್ ಸಬ್ ಸ್ಟೇಷನ್ ಗಳ ನಿರ್ಮಾಣಕ್ಕೆ ಸಚಿವ ನಾರಾಯಣಗೌಡ ಭೂಮಿಪೂಜೆ..

ಕೆ.ಆರ್.ಪೇಟೆ ತಾಲೂಕಿನ ದೊಡ್ಡಯಾಚೇನಹಳ್ಳಿ ಮತ್ತು ಮಂಚೀಬೀಡು ಗ್ರಾಮದಲ್ಲಿ 66/11ಕೆ.ವಿ ಸಾಮರ್ಥ್ಯದ ಎರಡು ಸಬ್ ಸ್ಟೇಷನ್ ಗಳ ನಿರ್ಮಾಣಕ್ಕೆ ರಾಜ್ಯದ ಯುವಸಬಲೀಕರಣ ಕ್ರೀಡೆ ಮತ್ತು ರೇಷ್ಮೆ ಸಚಿವರಾದ ಡಾ.ನಾರಾಯಣಗೌಡ ಭೂಮಿಪೂಜೆ ನೆರವೇರಿಸಿದರು..
ಮಡವಿನಕೋಡಿ ಮತ್ತು ಹರಿಹರಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ ಗ್ರಾಮಗಳು ಹಾಗೂ ರೈತಬಾಂಧವರಿಗೆ ಅನುಕೂಲವಾಗುವಂತೆ ಗುಣಮಟ್ಟದ ವಿದ್ಯುತ್ ಸರಬರಾಜು ಮಾಡಲು ಅನುಕೂಲವಾಗುವಂತೆ ದೊಡ್ಡಯಾಚೇನಹಳ್ಳಿ ಗ್ರಾಮದಲ್ಲಿ ಎಂಟೂವರೆ ಕೋಟಿ ವೆಚ್ಚದಲ್ಲಿ ಸಬ್ ಸ್ಟೇಷನ್ ನಿರ್ಮಾಣ ಮಾಡಲಾಗುತ್ತಿದೆ. ಬೀರವಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ರೈತಬಾಂಧವರಿಗೆ ಹಾಗೂ ಮನೆಗಳಿಗೆ ಗುಣಮಟ್ಟದ ವಿದ್ಯುತ್ ಸರಬರಾಜು ಮಾಡಲು ಹದಿಮೂರೂವರೆ ಕೋಟಿ ರೂಪಾಯಿಗಳ ವೆಚ್ಚದಲ್ಲಿ ಸಬ್ ಸ್ಟೇಷನ್ ನಿರ್ಮಿಸಲಾಗುತ್ತಿದೆ. ನಾನು ಸಚಿವನಾದ ನಂತರ ವಿದ್ಯುತ್, ನೀರಾವರಿ, ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದೇನೆ. ಕ್ಷೇತ್ರದಲ್ಲಿ ನಾನು ಅಭಿವೃದ್ಧಿ ಕೆಲಸ ಮಾಡಿಲ್ಲ, ನಾರಾಯಣಗೌಡನ ಕೊಡುಗೆ ಶೂನ್ಯ ಎಂದು ಮೊಂಡುವಾದ ಮಾಡುವವರು ಬಹಿರಂಗ ಚರ್ಚೆಗೆ ಬರಲಿ ಎಂದು ಸವಾಲು ಹಾಕಿದ ಸಚಿವರು ಈ ಹಿಂದೆ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಆಗಿರುವ ಕೆಲಸವನ್ನು ನಾರಾಯಣಗೌಡ ನಾನು ಮಾಡಿಸಿದ್ದೇನೆ ಎಂದು ರೀಲ್ ಬಿಡುತ್ತಿದ್ದಾರೆ ಎಂದು ಮಾಜಿಶಾಸಕರು ಅಪಪ್ರಚಾರ ನಡೆಸುತ್ತಿದ್ದಾರೆ. ನನ್ನ ಅವಧಿಯಲ್ಲಿ ನಡೆದಿರುವ ಅಭಿವೃದ್ಧಿ ಕೆಲಸ ಕಾರ್ಯಗಳ ಬಗ್ಗೆ ಪುಸ್ತಕ ಬಿಡುಗಡೆ ಮಾಡಿದ್ದೇನೆ. ಪುಸ್ತಕದಲ್ಲಿ ಇರುವ ವಿಚಾರಗಳನ್ನು ನನ್ನ ರಾಜಕೀಯ ವಿರೋಧಿಗಳು ಓದಿ ತಿಳಿದುಕೊಳ್ಳಲಿ ಎಂದು ಹೇಳಿದ ಸಚಿವ ನಾರಾಯಣಗೌಡ ನಾನು ಸೇಡಿನ ರಾಜಕಾರಣ ಮಾಡಲ್ಲ. ತಾಲೂಕಿನ ಸಮಗ್ರವಾದ ಅಭಿವೃದ್ಧಿಯನ್ನು ಮೂಲಮಂತ್ರ ವನ್ನಾಗಿಸಿಕೊಂಡು ದುಡಿಯುತ್ತಿದ್ದೇನೆ ಎಂದು ಹೇಳಿದರು..
ಮಡವಿನಕೋಡಿ ಗ್ರಾಮಪಂಚಾಯಿತಿ ಅಧ್ಯಕ್ಷೆ ವಿಶಾಲಾಕ್ಷಿ, ಮಾಜಿಅಧ್ಯಕ್ಷ ಪ್ರವೀಣ್, ಬೀರವಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷ ಚಂದ್ರಪ್ಪ, ಕೆಪಿಟಿಸಿಎಲ್ ಇಇ ಕಿಶೋರ್, ಸೆಸ್ಕ್ ಇಇ ವಿನುತಾ, ಎಇಇ ಮಹೇಶ್ವರಪ್ಪ, ರಾಜಶೇಖರಮೂರ್ತಿ, ಮುಖಂಡರಾದ ಸೋಮಶೇಖರಗೌಡ, ಗಂಗಾಧರಗೌಡ, ಶಾರದಮ್ಮ, ದೊಡ್ಡತಮ್ಮಯ್ಯ, ಶಿವರಾಮೇಗೌಡ, ಪಟೇಲ್ ತಿಮ್ಮೇಗೌಡ, ಪುಟ್ಟೇಗೌಡ, ಸಚಿವರ ಆಪ್ತಸಹಾಯಕ ದಯಾನಂದ ಮತ್ತಿತರರು ಉಪಸ್ಥಿತರಿದ್ದರು..

  *ವರದಿ ಶಂಭು ಕಿಕ್ಕೇರಿ, ಕೃಷ್ಣರಾಜಪೇಟೆ*
Previous Post Next Post

AD

 


Contact For News&Ads

Siddi TV

Contact Form

f="https://unpkg.com/video.js/dist/video-js.css" rel="stylesheet">