ಸರ್ವ ಧರ್ಮಗಳ ಪರ ಆಡಳಿತ ನಡೆಸುವ ಪಕ್ಷ ಕಾಂಗ್ರೆಸ್


ಕೊಪ್ಪಳ,: ಸರ್ವ ಧರ್ಮಗಳ ಪರ ಆಡಳಿತ ನಡೆಸುವ ಪಕ್ಷ ಯಾವುದಾದರೂ ಇದ್ರೆ ಅದು ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯ. ಬಿಜೆಪಿ ಪಕ್ಷವುv ಧರ್ಮ-ಧರ್ಮಗಳ ನಡುವೆ ಬೆಂಕಿ ಹಚ್ಚಿ ಕೋಮುಗಲಭೆಯನ್ನ ಸೃಷ್ಟಿ ಮಾಡಿ ಶಾಂತಿಯನ್ನ ಕದಡುವ ಪ್ರಯತ್ನ ಮಾಡುತ್ತಿದೆ. ಆದ್ದರಿಂದ ಕಾಂಗ್ರೆಸ್ ಪಕ್ಷವನ್ನ ಬೆಂಬಲಿಸಿ ಎಂದು ಕೆಪಿಸಿಸಿ ರಾಜ್ಯ ಘಟಕದ ಅಧ್ಯಕ್ಷ ಅಬ್ದುಲ್ ಗಫರ್ ಖಾನ್
ಕರೆ ನೀಡಿದರು. ಬುಧವಾರ ನಗರದ ಮೇಘರಾಜ ಕಲ್ಯಾಣ ಮಂದಿರದಲ್ಲಿ ಅಲ್ಪಸಂಖ್ಯಾತರ ಚಿಂತನ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು. 
ಇಲ್ಲಿಯ ಕೆ.ರಾಘವೇಂದ್ರ ಹಿಟ್ನಾಳ ಯುವಕ ಇದ್ದಾನೆ. ಸಣ್ಣ ವಯಸ್ಸಿನಲ್ಲಿಯೇ ಎರಡು ಬಾರಿ ಶಾಸಕನಾಗಿ ಆಯ್ಕೆ ಜನಪರ ಕೆಲಸ ಮಾಡಿದ್ದಾನೆ. ಮತ್ತೆ ನಿಮ್ಮ ಆಶೀರ್ವಾದದಿಂದ ಮೂರನೆ ಬಾರಿಗೆ ಶಾಸಕನಾಗಿ ಆಯ್ಕೆಯಾಗಿ ಇತಿಹಾಸ ನಿರ್ಮಿಸಲಿದ್ದಾನೆ. ಆದ್ದರಿಂದ ಎಲ್ಲಾರು ರಾಘವೇಂದ್ರ ಹಿಟ್ನಾಳ ಅವರನ್ನು ಬೆಂಬಲಿಸಿ ಎಂದು ಮನವಿ ಮಾಡಿದರು.
ನಂತರ ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಮಾತನಾಡಿ, ಕ್ಷೇತ್ರದಲ್ಲಿ ಅಲ್ಪಂಖ್ಯಾತರ ಸಮಾಜದ ಅಭಿವೃದ್ದಿಗೆ ಹೆಚ್ಚು ಒತ್ತನ್ನ ನೀಡಿ ಶ್ರಮಿಸಲಾಗಿದೆ. ನಗರದ ಶಾದಿಮಹಾಲ್ ಅಭಿವೃದ್ದಿಗೆ 50 ಲಕ್ಷವನ್ನ ಮಂಜೂರು ಮಾಡಿ ಅತ್ಯಂತ ಸುಂದರವಾಗಿ ಮರು ನಿರ್ಮಾಣ ಮಾಡಲಾಗಿದೆ. ಇದಲ್ಲದೆ ಮುಂದಿನ ದಿನಗಳಲ್ಲಿ ಮರ್ದಾನ್ ಗೈಬ್ ನಲ್ಲಿಯೂ ಕೂಡ ಒಂದು ಶಾದಿಮಹಾಲ್ ನಿರ್ಮಾಣ ಮಾಡುವ ಗುರಿಯನ್ನ ಹೊಂದಿರುವುದಾಗಿ ತಿಳಿಸಿದ ಅವರು, ಲಿಂಗದಳ್ಳಿ ಗ್ರಾಮದ ಹತ್ತಿರ 25 ಕೋಟಿ ಮೊತ್ತದಲ್ಲಿ ಅಲ್ಪಸಂಖ್ಯಾತರ ಮೂರಾರ್ಜಿ ವಸತಿ ಶಾಲೆಯನ್ನ ನಿರ್ಮಿಸಲಾಗುತ್ತಿದೆ ಎಂದರು. ಈ ವೇಳೆ ಕೆಪಿಸಿಸಿ ಅಲ್ಪಸಂಖ್ಯಾತರ ಉಸ್ತುವಾರಿ ಜೀನೆಲ್ ಗಾಲಾ, ಮಾಜಿ ಶಾಸಕ ಕೆ.ಬಸವರಾಜ ಹಿಟ್ನಾಳ, ಮಾಜಿ ಜಿಪಂ ಅಧ್ಯಕ್ಷ ಎಸ್.ಬಿ.ನಾಗರಳ್ಳಿ, ಮಾಜಿ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಜುಲ್ಲು ಖಾದ್ರಿ, ವಕ್ಫ್ ಮಂಡಳಿಯ ಸಲಹಾ ಸಮಿತಿಯ ಸದಸ್ಯ ಆಸೀಪ್ ಅಲಿ, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಾಟನ್ ಪಾಷ, ನಗರಸಭೆ ಸದಸ್ಯರಾದ ಅಮ್ಜದ ಪಟೇಲ, ಅಜೀಮ್ ಅತ್ತರ್, ಗುರು ಹಲಿಗೇರಿ, ಮುತ್ತುರಾಜ್ ಕುಷ್ಟಗಿ, ಅರುಣ್ ಅಪ್ಪುಶೆಟ್ಟಿ, ಅಕ್ಬರ್ ಪಲ್ಟನ್, ಜಿಲ್ಲಾ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಸಲೀಂ ಅಳವಂಡಿ, ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣರೆಡ್ಡಿ ಗಲಬಿ,
ಮುಖಂಡರಾದ ಕೆ.ಎಮ್. ಸೈಯದ್, ಖತೀಬ್ ಬಾಷು, ಮೆಹಬೂಬ್ ಅರಗಂಜಿ, ಪ್ರಸನ್ನ ಗಡಾದ, ಯಮನೂರಪ್ಪ ನಾಯಕ್, ವೆಂಕನಗೌಡ್ರು ಹಿರೇಗೌಡ್ರು, ಬಾಲಚಂದ್ರನ ಮುನಿರಬಾದ್, ಪುರ್ಖಾನ್, ಆರ್.ಎಮ್.ರಫಿ, ಹಾಜಿ ಹುಸೇನಿ, ವಕ್ತಾರ ಕುರಗೋಡ ರವಿ ಸೇರಿದಂತೆ ಅನೇಕ ಮುಖಂಡರು ಹಾಗೂ ಕಾರ್ಯಕರ್ತರು
ಇದ್ದರು.
Previous Post Next Post

AD

 


Contact For News&Ads

Siddi TV

Contact Form

f="https://unpkg.com/video.js/dist/video-js.css" rel="stylesheet">