ಕೊಪ್ಪಳ,: ತಾಲೂಕಿನ ಮುನಿರಾಬಾದ್ ವಿಜಯನಗರ ಕಾಲೇಜಿನ ದೈಹಿಕ ಉಪನ್ಯಾಸಕ ತಿರುಪತಿ ನಾಯಕರವರ ಪತ್ನಿ ಶ್ರೀಮತಿ ಕವಿತಾ .ಹೆಚ್. ಪಿಲಿಗುಂಡ ಕನ್ನಡ ಭಾಷೆ ಶಿಕ್ಷಕರು, ಮೊರಾರ್ಜಿ ದೇಸಾಯಿ ವಸತಿ ಶಾಲೆ ಸಿಂಗನೋಡಿ ಅವರಿಗೆ ಗದುಗಿನ ಶ್ರೀಗುರು ಪುಟ್ಟರಾಜ ಸದ್ಭಾವನಾ ರಾಜ್ಯ ಮಟ್ಟದ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿದ ಇವರಿಗೆ ಮಾ.3 ರಂದು ಗದುಗಿನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದು ಡಾ.ವ್ಹಿ.ಬಿ.ಹಿರೇಮಠ ಮೆಮೋರಿಯಲ್ ಪ್ರತಿಷ್ಠಾನ ಟ್ರಸ್ಟ್ ಅಧ್ಯಕ್ಷರು ತಿಳಿಸಿದ್ದಾರೆ.