ನಾಳೆ ಕಬ್ಬ ರಿಲೀಸ್ : ತಿಮ್ಮಪ್ಪನ
ದರ್ಶನಕ್ಕೆ ಹೊರಟ ಉಪ್ಪಿ..!
ಬಹುನೀರಿಕ್ಷಿತ ಚಿತ್ರ ಕಬ್ಬ ನಾಳೆ (ಮಾರ್ಚ್ 17)
ತೆರೆಕಾಣಲಿದೆ. ಈ ಚಿತ್ರ ಕರುನಾಡು ಮಾತ್ರವಲ್ಲದೆ,
ಎಲ್ಲಾ ಭಾಷಿಗರು ಒಂಟಿಗಾಲಲ್ಲಿ ನಿಂತು ಕಾಯ್ತಿರೋ
ಸಿನಿಮಾ ಇದಾಗಿದೆ. ಮಾರ್ಚ್ 17ಕ್ಕೆ ಪ್ಯಾನ್
ಇಂಡಿಯಾ ಸಿನಿಮಾ ಕಬ್ಬ ವಿಶ್ವದಾದ್ಯಂತ ರಿಲೀಸ್
ಆಗಲಿದೆ. ಹೀಗಿರುವಾಗ ಚಿತ್ರತಂಡ ರಿಲೀಸ್ ಗೂ
ಮುನ್ನ ತಿರುಪತಿ ತಿಮ್ಮಪ್ಪನತ್ತ ತೆರಳಿದೆ.
ಕಬ್ಬ ಹೀರೋ ರಿಯಲ್ ಸ್ಟಾರ್ ಉಪೇಂದ್ರ ಟ್ವಿಟ್
ಮಾಡಿದ್ದು, ತಿರುಪತಿ ತಿಮ್ಮಪ್ಪನ ದರ್ಶನ ಪಡೆಯಲು
ತೆರಳುವುದಾಗಿ ತಿಳಿಸಿದ್ದಾರೆ.
ಆರ್.ಚಂದ್ರು ಸೇರಿದಂತೆ ಚಿತ್ರತಂಡ ತಿರುಪತಿಗೆ
ತೆರಳಿದ್ದಾರೆ. ಇದನ್ನು ಕಂಡು ಕಬ್ಬ ಪ್ರೇಮಿಗಳು ಉಪ್ಪಿ
ಟ್ವಿಟ್ ಗೆ ಮರು ಟ್ವಿಟ್ ಮಾಡಿದ್ದಾರೆ. ಅದರಲ್ಲೂ
ಅನೇಕರು ಕಬ್ಬ ಸಿನಿಮಾಗೆ ಶುಭಾಶಯ ತಿಳಿಸಿದ್ದಾರೆ.
ಮಾರ್ಚ್ 17 ರಂದು ಏಳು ಭಾಷೆಯಲ್ಲಿ ನಾಲ್ಕು
ಸಾವಿರ ಥೀಯೇಟರ್ ನಲ್ಲಿ ಕಬ್ಬ ರಿಲೀಸ್ ಆಗ್ತಿದೆ. ಈ
ಮೂಲಕ ಅಪ್ಪು ಬರ್ತಡೇ ದಿನ ಉಪ್ಪಿ ಹೊಸ ಗೆಟಪ್
ಮೂಲಕ ಬೆಳ್ಳಿ ಪರದೆಯನ್ನ ಆಳಲಿದ್ದಾರೆ.