Congress : ಅಭಿವೃದ್ಧಿ ಶೂನ್ಯ ಎನ್ನುವ ವಿರೋಧಿಗಳಿಗೆ ತಿರಿಗೇಟು ಕೊಟ್ಟ ಶಾಸಕ

ಅಭಿವೃದ್ಧಿ ಶೂನ್ಯ ಎನ್ನುವ ವಿರೋಧಿಗಳಿಗೆ ತಿರಿಗೇಟು ಕೊಟ್ಟ ಕುಷ್ಟಗಿ ಶಾಸಕ

ಕುಷ್ಟಗಿ

 ಕಾಂಗ್ರೆಸ್ ಪಕ್ಷದ ಅಭಿವೃದ್ಧಿ ವಿರೋಧಿಸುವವರಿಗೆ ಒಂದು  ಮಾತನ್ನು ಹೇಳುತ್ತೇನೆ ಸ್ವತಂತ್ರ ಬಂದಮೇಲೆ ಆಹಾರ ಉತ್ಪಾದನೆ ಯಾವ ರೀತಿ ಇತ್ತು ಮತ್ತು ಯಾವ ರೀತಿ ನಮಗೆ ಊಟದ ತೊಂದರೆ ಇತ್ತು ಅದನ್ನು ಪರಿಹರಿಸಬೇಕಾದರೆ ಪಂಚವಾರ್ಷಿಕ ಯೋಜನೆಗಳ ಮೂಲಕ ಕೃಷಿಗೆ ಹೆಚ್ಚು ಹೊತ್ತನ್ನು ಕೊಟ್ಟು ಕೃಷಿಯ ಮೂಲಕ ಈ ದೇಶವನ್ನು ಅಭಿವೃದ್ಧಿಪಡಿಸಿದ್ದು ಕಾಂಗ್ರೆಸ್ ಪಕ್ಷ ಅದರ ಜೊತೆಗೆ ಶೈಕ್ಷಣಿಕವಾಗಿ ಇವತ್ತು ಶಾಲಾ ಕಾಲೇಜುಗಳನ್ನು ಪ್ರಾರಂಭಿಸುವ ಮೂಲಕ ವಿವಿಧ ಕೋರ್ಸ್ ಗಳನ್ನು ಜಾರಿಗೆ ತಂದಿದ್ದು ನಮ್ಮ ಕಾಂಗ್ರೆಸ್ ಪಕ್ಷ ಎಂದು ಅಭಿವೃದ್ಧಿ ಶೂನ್ಯ ಎನ್ನುವ  ವಿರೋಧ ಪಕ್ಷ ನಾಯಕರಿಗೆ ಶಾಸಕ ಅಮರೇಗೌಡ ಪಾಟೀಲ್ ಬಯ್ಯಾಪುರ ತಿರುಗೇಟು ಕೊಟ್ಟರು ಅವರು ಕುಷ್ಟಗಿ ತಾಲೂಕಿನ ಅಡವಿಬಾವಿ ಗ್ರಾಮದ ಶ್ರೀ ಮಾರುತೇಶ್ವರ ದೇವಸ್ಥಾನದ ಪಕ್ಕದಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಕಾರ್ಯಕ್ರಮವನ್ನು  ಉದ್ದೇಶಿ ಮಾತನಾಡುತ್ತಿದ್ದರು ಮುಂದಿನ ಚುನಾವಣೆ ಮತ್ತೊಮ್ಮೆ ನನಗೆ ಆಶೀರ್ವಾದ ಮಾಡುವ ಮೂಲಕ ಜನರ ಸೇವೆ ಮಾಡಲು ಅವಕಾಶ ಮಾಡಿಕೊಡಬೇಕೆಂದು ಕಾರ್ಯಕರ್ತರಲ್ಲಿ  ಮನವಿ ಮಾಡಿಕೊಂಡರು  ಇನ್ನೋರ್ವ 

 ಮುಖ್ಯ ಅತಿಥಿ ಸ್ಥಾನ ವಹಿಸಿಕೊಂಡು ಮಾತನಾಡಿದ ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷರಾದ ಮಾಲತಿ ನಾಯಕ್ ದಿನನಿತ್ಯದ ವಸ್ತುಗಳ ಬೆಲೆ ಏರಿಕೆಯಿಂದ ಜನ ತತ್ತರಿಸುತ್ತಿದ್ದು ಕೇಂದ್ರ ಸರ್ಕಾರ ಬಡವರ ಜೀವ ಹಿಂಡುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಅಮರೇಗೌಡ ಪಾಟೀಲ ಬಯ್ಯಾಪುರ ಅವರನ್ನು ಅತಿ ಹೆಚ್ಚು ಮತಗಳಿಂದ ಆಯ್ಕೆ ಮಾಡಬೇಕೆಂದು ಕಾರ್ಯಕರ್ತರನ್ನು ಉರ್ದುಂಬಿಸಿದರು.

ಕಾರ್ಯಕ್ರಮ ಉದ್ದೇಶಿ ಮಾತನಾಡಿದ ಮತ್ತೋರ್ವ ಕಾಂಗ್ರೆಸ್ ಪಕ್ಷದ ಮುಖಂಡ ಲಾಡನ್ ಪಾಷಾ ದೋಟಿಹಾಳ  135 ವರ್ಷಗಳ ಇತಿಹಾಸ ಇರತಕ್ಕಂಥ ಕಾಂಗ್ರೆಸ್ ಪಕ್ಷ ದೇಶದ ಒಳಿತಿಗಾಗಿ ಸಾಕಷ್ಟು ಅಭಿವೃದ್ಧಿ ಕೆಲಸ ಕೈಗೊಂಡಿದೆ ಅನೇಕ ಬಡವರ ಪರ ಯೋಜನೆ ರೂಪಿಸಿದ್ದು ಮತ್ತೊಮ್ಮೆ ರಾಜ್ಯದಲ್ಲಿ ಕಾಂಗ್ರೆಸ್  ಸರ್ಕಾರ ಬರಲಿದೆ ಎಂದು ವಿಶ್ವಾಸದ ನುಡಿಗಳನ್ನು ಆಡಿದರು.

 ಈ ಒಂದು ಕಾರ್ಯಕ್ರಮದಲ್ಲಿ ಪಕ್ಷದ ಪ್ರಮುಖರಾದ ಗ್ರಾಮ ಪಂಚಾಯತಿ ಸದಸ್ಯ ಸುರೇಶ್ ಗೌಡ ಮಾಲಿ ಪಾಟೀಲ್ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಮಾನಪ್ಪ ತಳವಾರ್  ಎಪಿಎಂಸಿ ಸದಸ್ಯರಾದ ಮಲ್ಲಿಕಾರ್ಜುನ್ ಚಳಗೇರಾ ಯಮನೂರಪ್ಪ ಮೆಣಸಗೇರಾ ರಮೇಶ್ ಗೌಡ ಮಲ್ಕಾಪುರ್ ಹನುಮಂತಪ್ಪ ಹುನುಗುಂದ  ಅಮರಪ್ಪ ತೋಪ್ಲಕಟ್ಟಿ ಹನುಮಂತ ಕುಮಟಗಿ ಸತ್ಯನ ಗೌಡ ಮಾಲಿಪಾಟೀಲ್ ಮಲ್ಲನಗೌಡ ಪೊಲೀಸ್ ಪಾಟೀಲ್ ಇನ್ನು ಅನೇಕ ನೂರಾರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು ಹಲವರು ಬೇರೆ ಪಕ್ಷದಿಂದ ಕಾಂಗ್ರೆಸ್ ಸೇರಿದರು ಕಾರ್ಯಕ್ರಮಕ್ಕೆ ಮೊದಲ ಯುವ ಕಾರ್ಯಕರ್ತರು ಬೈಕ್ ರಾಲಿ ಮೂಲಕ ಶಾಸಕರನ್ನು ಪ್ರಮುಖರನ್ನು ವೇದಿಕೆಗೆ ಕರೆತಂದರು.

Reported by : ಮಲ್ಲಿಕಾರ್ಜುನ  ದೋಟಿಹಾಳ  

Previous Post Next Post

AD

 


Contact For News&Ads

Siddi TV

Contact Form

f="https://unpkg.com/video.js/dist/video-js.css" rel="stylesheet">