Dr.Ambedkar-ಭತ್ತದ ನಾಡಿನಲ್ಲಿ ಅಂಬೇಡ್ಕರ್ ರ ಕಂಚಿನ ಮೂರ್ತಿ ಅನಾವರಣ | ಮುಗಿಲು ಮಟ್ಟಿದ ಜೈ ಭೀಮ್ ಘೋಷಣೆ

ಇಂದು ಗಂಗಾವತಿ ನಗರದ ಕೋಟ್೯ ಹತ್ತಿರ ಪ್ರತಿಷ್ಟಾಪನೆ ಮಾಡಲಾಗಿದ್ದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಕಂಚಿನ ಮೂರ್ತಿ ಅನಾವರಣ.
ಇಂದು ಜನಪ್ರಿಯ ಶಾಸಕರಾದ ಶ್ರೀ ಪರಣ್ಣ ಮುನವಳ್ಳಿ ಅವರು , ಕನಕಗಿರಿ ಶಾಸಕರಾದ ಶ್ರೀ ಬಸವರಾಜ ದಡೆಸೂಗೂರು, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾದ ರಾಘವೇಂದ್ರ ಶೆಟ್ಟಿ ಹಾಗೂ ದಲಿತ ಸಮುದಾಯದ ಮುಖಂಡರಾದ ಕುಂಟೊಜಿ ಮರಿಯಪ್ಪ, ದೊಡ್ಡ ಭೊಜಪ್ಪ, ಹುಸನೇಪ್ಪ ಹಂಚಿನಾಳ, ನಾಯಕ ಸಮುದಾಯದ ಮುಖಂಡರಾದ ವೀರಭಂದ್ರಪ್ಪ ನಾಯಕ ಜೋಗದ ನಾರಾಯಣಪ್ಪ ನಾಯಕ, ಹನುಮಂತಪ್ಪ ನಾಯಕ, ಮುಖಂಡರಾದ ಸಂತೋಷ್ ಕೆಲೋಜಿ, ವೆಂಕಟೇಶ್ ಅಮರಜ್ಯೋತಿ, ಅವರ ಸಮ್ಮುಖದಲ್ಲಿ ಅನಾವರಣಗೊಳಿಸಿದರು
ಈ ಸಮಯದಲ್ಲಿ ಶಾಸಕರನ್ನ ಸಮುದಾಯದ ಯುವಕರು ಜಯಕಾರ ಹಾಕುತ್ತ ಮೇಲಕ್ಕೆ ಎತ್ತಿಕೊಂಡು ಸಂಭ್ರಮಾಚರಣೆ ಮಾಡಿ ಹರ್ಷ ವ್ಯಕ್ತಪಡಿಸಿದರು.
ಈ ಸಂಧರ್ಭದಲ್ಲಿ ಸ್ಥಾಯಿ ಸಮಿತಿ ಮಾಜಿ ಸದಸ್ಯರಾದ ರಾಚಪ್ಪ ಸಿದ್ದಾಪುರ ಯುವಮೋರ್ಚಾ ಜಿಲ್ಲಾ ಅಧ್ಯಕ್ಷರಾದ ಶಿವುಕುಮಾರ್ ಅರಿಕೇರಿ, ನಗರ ಸಭೆ ವಿರೋಧ ಪಕ್ಷದ ನಾಯಕರಾದ ನವೀನ್ ಮಾಲಿಪಾಟೀಲ್, ನಗರ ಮಂಡಲ ಅಧ್ಯಕ್ಷರಾದ ಕಾಶಿನಾಥ ಚಿತ್ರಗಾರ್, ನಗರ ಯೋಜನಾ ಪ್ರಾಧಿಕಾರದ ಮಾಜಿ ಸದಸ್ಯರಾದ ಸಂಗಪ್ಪ ಚಲುವಾದಿ, ಬಸವರಾಜ ಪೂಜಾರಿ ,ಹುಲಗಪ್ಪ ಮಾಸ್ತರ್, , ತಪಮ್ಮಣ್ಣ ಮುಂದಾಸ್, ಹುಲಗಪ್ಪ ಮಾಗಿ, ಮಲ್ಲೆಶಪ್ಪ ದೇವರಮನೆ ಹಾಗೂ ಸಮುದಾಯದ ಮುಖಂಡರು ಉಪಸ್ಥಿತರಿದ್ದರು.

ವರದಿ : ಚನ್ನಕೇಶವ
Previous Post Next Post

AD

 


Contact For News&Ads

Siddi TV

Contact Form

f="https://unpkg.com/video.js/dist/video-js.css" rel="stylesheet">