Election-ಚುನಾವಣೆಗೆ ಹಾವೇರಿ ಜಿಲ್ಲಾಡಳಿತ ಸಕಲ ಸಿದ್ಧತೆ: ಜಿಲ್ಲೆಯಲ್ಲಿದ್ದಾರೆ 12,91,194 ಮತದಾರರು!

ಚುನಾವಣೆಗೆ ಹಾವೇರಿ ಜಿಲ್ಲಾಡಳಿತ ಸಕಲ ಸಿದ್ಧತೆ: ಜಿಲ್ಲೆಯಲ್ಲಿದ್ದಾರೆ 12,91,194 ಮತದಾರರು!

ರಾಜ್ಯ ವಿಧಾಸಭೆ ೨೦೨೩ ರ ಸಾರ್ವತ್ರಿಕ ಚುನಾವಣೆ ದಿನಾಂಕವನ್ನು ಚುನಾವಣಾ ಆಯೋಗ ಘೋಷಣೆ ಮಾಡಿರುವ ಹಿನ್ನಲೆಯಲ್ಲಿ ಜಿಲ್ಲೆಯ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಚುನಾವಣೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಜಿಲ್ಲೆಯಲ್ಲಿ ಒಟ್ಟು ೧೨,೯೧,೧೯೪ ಮತದಾರರು ಮತ ಚಲಾಯಿಸಲಿದ್ದಾರೆ ಎಂದು ಜಿಲ್ಲಾಧಿಕಾರಿ ರಘುನಂದನ್ ಮೂರ್ತಿ ಹೇಳಿದರು.
ಬುಧವಾರ ಜಿಲ್ಲಾಧಿಕಾರಿಗಳು ಕೋರ್ಟ್ ಹಾಲ್‌ದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಟ್ಟು ೧೨,೯೧,೧೯೪ ಮತದಾರರಲ್ಲಿ ಪುರುಷ ೬,೬೦,೨೭೦ ಮತದಾರರು ಹಾಗೂ ೬,೩೦,೮೭೯ ಮಹಿಳಾ ಮತದಾರರು ಹಾಗೂ ಇತರೆ ೪೫ ಮತದಾರರು ಸೇರಿ ಮತ ಚಲಾಯಿಸಲಿದ್ದಾರೆ ಎಂದರು.

ಭದ್ರತೆ ಹಾಗೂ ಕಳ್ಳಸಾಗಾಟ ತಪ್ಪಿಸಲು ಇಲ್ಲೆಯಲ್ಲಿ ೨೧ ಚಕ್ ಪೋಸ್ಟ್‌ಗಳನ್ನು ಪೋಲಿಸ್ ಇಲಾಖೆ ಸ್ಥಾಪಿಸಿದೆ. ಏನಾದರೂ ದೂರು ಹಾಗೂ ಸಹಾಯಕ್ಕಾಗಿ ಜಿಲ್ಲಾಡಳಿತದಲ್ಲಿ ಸಹಾಯವಾಣಿ ಸ್ಥಾಪನೆ ಮಾಡಿದೆ. ಆರು ಕ್ಷೇತ್ರಗಳಲ್ಲಿ ಸ್ಕ್ವಾಡ್ ಎಂಡ್ ಟೀಮ್ ನಿಯೋಜನೆ ಮಾಡಲಾಗಿದೆ ಎಂದು ಹೇಳಿದರು.

ಮೊಟ್ಟಮೊದಲ ಬಾರಿಗೆ ಜಿಲ್ಲೆಯಲ್ಲಿ ೩೧,೩೮೪ ಮತದಾರರು ತಮ್ಮ ಮತದಾನದ ಹಕ್ಕನ್ನು ಚಲಾಯಿಸಲಿದ್ದಾರೆ. ೮೦ ವರ್ಷ ಮೇಲ್ಪಟ್ಟವರು ೩೨,೦೪೩, ವಿಕಲ ಚೇತನರು, ೯೦೯ ಸರ್ವಿಸ್ ಮತದಾರರು ಸೇರಿ ಒಟ್ಟು ೫೫ ಸಾವಿರ ಮತದಾರರು ಮನೆಯಿಂದ ಮತದಾನ ಮಾಡಲಿದ್ದಾರೆ. ಏ.೧ರ ನಂತರ ೨೭೨೫ ಮತದಾರರು ಮತದಾನದ ಹಕ್ಕನ್ನು ಪಡೆದುಕೊಳ್ಳಲಿದ್ದಾರೆ. ಸೂಕ್ಷ್ಮ ೧೮ ಮತ್ತು ಅತಿ ಸೂಕ್ಷ್ಮ ೩೨೧ ಮತಗಟ್ಟೆಗಳು ಸೇರಿದಂತೆ ೯೯೮ ಸ್ಥಳಗಳಲ್ಲಿ ಒಟ್ಟು ೧೪೭೧ ಮತಗಟ್ಟೆಗಳನ್ನು ಸ್ಥಾಪಿಸಲಾಗುವುದು. ೧೪೧ ಸ್ಕ್ವಾಡ್ ಟೀಮ್‌ಗಳಲ್ಲಿ ರಚಿಸಲಾಗಿದೆ ಎಂದು ತಿಳಿಸಿದರು.

ಕಳೆದ ೨೦೧೮ರ ವಿಧಾನಸಭಾ ಚುನಾವಣೆಯಲ್ಲಿ ೬೪೧೯೬೧ ಪುರುಷ, ೫೯೭೨೯೪ ಹಾಗೂ ಇತರೆ ೩೪ ಮತದಾರರು ಸೇರಿ ಒಟ್ಟು ೧೨೩೯೨೮೭ ಮತದಾರರಲ್ಲಿ ೫೨೫೩೬೯ ಪುರುಷ, ೪೭೧೯೨೬ ಮಹಿಳೆ ಹಾಗೂ ಇತರೆ ೨ ಮತದಾರರು ಸೇರಿ ಒಟ್ಟು ೯೯೭೨೯೭ ಮತದಾರರು ಮತದಾನ ಮಾಡುವ ಮೂಲಕ ಶೇ.೮೦.೪೭ ಮತದಾನ ನಡೆದಿತ್ತು. ಪ್ರಸಕ್ತ ಚುನಾವಣೆಯಲ್ಲಿ ಹೆಚ್ಚು ಮತದಾನ ಮಾಡುವುದಕ್ಕೆ ಇಗಾಗಲೇ ಅನೇಕ ಸ್ವೀಪ್ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿದೆ. ಜನ ಜಾಗೃತಿಗಾಗಿ ಇನ್ನು ಹೆಚ್ಚು ವಿವಿಧ ಕಾರ್ಯಕ್ರಮಗಳನ್ನು ಮಾಡಲಾಗುವುದು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಜಿಪಂ ಸಿಇಓ ಅಕ್ಷಯ ಶ್ರೀಧರ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಶಿವಕುಮಾರ ಗುಣಾವೆ ಇತರರಿದ್ದರು.
ವರದಿ : ಬಸವರಾಜ ಕಬಡ್ಡಿ
Previous Post Next Post

AD

 


Contact For News&Ads

Siddi TV

Contact Form

f="https://unpkg.com/video.js/dist/video-js.css" rel="stylesheet">