ಕೋಲಾರದಲ್ಲಿ ಸಿದ್ದರಾಮಯ್ಯ ಸ್ಪರ್ದೆ ವಿಚಾರ
ಕೋಲಾರದಲ್ಲಿ ಕಂದಾಯ ಸಚಿವ ಆರ್.ಅಶೋಕ್ ಹೇಳಿಕೆ.
ರಾಜ್ಯದಲ್ಲಿ ಕಾಂಗ್ರೇಸ್ ಸರ್ಕಾರ ಅಧಿಕಾರಕ್ಕೆ ಬರುವ ಸ್ಥಿತಿ ಇದ್ದಿದ್ದರೆ,
ಸಿದ್ದರಾಮಯ್ಯ ತಿರುಕನ ತರಹ ಊರೂರು ಅಲೆಯುತ್ತಿರಲಿಲ್ಲ.
ಬಿಕ್ಷಾಂದೇಹಿ ಎಂದು ಕೇಳಿಕೊಳ್ಳುತ್ತಿರಲಿಲ್ಲ,
ಮೈಸೂರು ಆಯ್ತು ಬಾದಾಮಿ ಆಯ್ತು ಕೋಲಾರಕ್ಕೆ ಬಂದಿದ್ದಾರೆ,
ಈ ಬಾರಿ ಕೋಲಾರದಲ್ಲಿ ಸೋತರೆ ಮತ್ತೆ ಎಲ್ಲಿ ಹೋಗ್ತಾರೋ ಗೊತ್ತಿಲ್ಲ.
ಕೋಲಾರದಲ್ಲಿ ಡೂಪ್ಲಿಕೇಟ್ ಮನೆ ಮಾಡುತ್ತಿದ್ದಾರೆ, ಸುಮ್ನೆ ಹೆಸರಿಗಷ್ಟೆ,
ಬರೆದುಕೊಳ್ಳಿ ಬೇಕಾದರೆ ಮನೆ ಎಂದು ಬೋರ್ಡ್ ಇರುತ್ತೆ ಅವರು ಇರೋದಿಲ್ಲ,
ಸಿದ್ದರಾಮಯ್ಯ ಕೋಲಾರದ ಕಡೆ ತಿರುಗಿಯೂ ನೋಡೋಲ್ಲ.
ಕಾಂಗ್ರೇಸ್ ಗೆ ದೇಶದಲ್ಲೇ ಉಳಿಗಾಲವಿಲ್ಲ, ರಾಜ್ಯದಲ್ಲಿಯೂ ಇರೋದಿಲ್ಲ.
ಸಿ ಎಂದರೆ ಕರಪ್ಷನ್ ಕಾಂಗ್ರೇಸ್ ಎಂದು ಅರ್ಥ.
ಹೆಂಡ ಮತ್ತು ಹಣ ಮೊದಲು ಹಂಚಿದವರೇ ಕಾಂಗ್ರೇಸ್ ನವರು.
ಸೋನಿಯಾ ಗಾಂಧೀ ರಾಹುಲ್ ಗಾಂಧೀ ಅವರ ಮೇಲೆ ಸಾಕಷ್ಟು ಹಗರಣಗಳು ಇವೆ.
ಇವತ್ತಿಗೂ ಅವರು ಬೇಲ್ ಮೇಲೆ ಹೊರಗಿದ್ದಾರೆ.
ಪೈಟರ್ ರವಿ ಮೋದಿ ಅವರಿಗೆ ಸ್ವಾಗತ ಕೋರಿದ ಪ್ರಕರಣ
ಕಮಿಟಿ ಉಸ್ತುವಾರಿ ಶೋಭಾ ಕರಂದ್ಲಾಜೆಯಿಂದ ಪರಿಶೀಲನೆ ನಡೆಸಲಾಗುತ್ತಿದೆ.
ಯಾರು ಅವರ ಹೆಸರನ್ನ ಸೇರಿಸಿದ್ದಾರೋ, ಅವರ ಮೇಲೆ ಪಾರ್ಟಿ ಶಿಸ್ತಿನ ಕ್ರಮ ತೆಗೆದುಕೊಳ್ಳಲಾಗುತ್ತದೆ.
ಈ ರಾಜ್ಯದಲ್ಲಿ ಗೂಂಡಾ ಗಿರಿ ಪಾರ್ಟಿ ಇದೆ ಎಂದರೆ ಅದು ಕಾಂಗ್ರೇಸ್ ಪಾರ್ಟಿ.
ಗೂಂಡಾ ಸಂಸ್ಕೃತಿಯನ್ನ ದೇವರಾಜ್ ಅರಸು ಹಿಂದೆಯಿಂದಲೂ ತಂದಿದ್ದಾರೆ.
ಬಿಜೆಪಿಯಲ್ಲಿ ಆ ಸಂಸ್ಕೃತಿ ಇಲ್ಲ.
ಸೋಮಣ್ಣ ಪಕ್ಷ ಬಿಡುವ ವಿಚಾರ
ಸೋಮಣ್ಣ ಅವರು ಯಾವುದೇ ಕಾರಣಕ್ಕೂ ಪಕ್ಷ ಬಿಡುವುದಿಲ್ಲ.
ನಾನು ಅವರೊಂದಿಗೆ ಮಾತನಾಡಿದ್ದೇನೆ, ಬಿಜೆಪಿಯಲ್ಲಿಯೇ ಇರ್ತಾರೆ.
ಮಗನ ಟಿಕೇಟ್ ವಿಚಾರ ಮಾತನಾಡಿದ್ದಾರೆ ಆದರೆ ಪಾರ್ಟಿ ಬಿಡುವ ವಿಚಾರ ಮಾತನಾಡಿಲ್ಲ.
ಕೆಲವು ಡಿಮ್ಯಾಂಡ್ ಇವೆ ಪರಿಶೀಲನೆ ಮಾಡುತ್ತದೆ.
Tags
ರಾಜಕೀಯ