ಅಳಿವಿನಂಚಿನಲ್ಲಿ ಗುಬ್ಬಚ್ಚಿ
ಕತ್ತಲೆಯ ಅಂಧಕಾರದಲ್ಲಿ ಮುಳುಗಿದ ಜಗತ್ತು ಸೂರ್ಯನ ಬರುವಿಕೆಗೆ ಕಾಯುತ್ತಿತು.
ಕೆಲವೇ ಕ್ಷಣದಲ್ಲಿ ಬೆಳಕು ಮೂಡುವುದನ್ನು ಗ್ರಹಿಸಿದ ಪಕ್ಷಿಗಳು ಬೆಚ್ಚನೆಯ ಗೂಡಿನಲ್ಲಿ ಗರಿಗೆದರಿ ಸೂರ್ಯನನ್ನು ಸ್ವಾಗತಿಸುವಂತೆ ಮಧುರ ಕಂಠದಿಂದ ಕೂಗಲು ಪ್ರಾರಂಭಿಸಿದವು. ಇತ್ತ ಸೂರ್ಯ ಪಕ್ಷಿಗಳ ಸಂಗೀತದೊಂಗಿಗೆ ಕತ್ತಲಿನಲ್ಲಿ ಕಳೆದು ಹೋಗಿರುವ ಜಗತ್ತಿಗೆ ಕುಂಕುಮ ಚೆಲ್ಲಿದಂತೆ ಕೆಂಬಣ್ಣಕ್ಕೆ ತಿರುಗಿಸಿ ಭೂ ಮಂಡಲಕ್ಕೆ ಬೆಳಕನ್ನು ನೀಡುವ ಮಹತ್ತರ ಕಾರ್ಯಕ್ಕಾಗಿ ಅನಿಯಾಗುವಾಗ, ಪಕ್ಷಿಗಳ ಕೂಟ ತಾರಕಕ್ಕೆ ಏರಿತ್ತು.
ಈ ಪಕ್ಷಿಗಳ ಸಂಗೀತ ಮೇಳದಲ್ಲಿ ಕೋಗಿಲೆ ಪ್ರಮುಖ ಪಾತ್ರಧಾರಿಯಾದರೆ ಉಳಿದ ಪಕ್ಷಿಗಳು ಹಿನೆಲೆ ಗಾಯಕರಾಗಿ ಈ ಸಂಗೀತ ಮೇಳಕ್ಕೆ ಶೋಭೆಯನ್ನು ತಂದುಕೊಟ್ಟಿದವು. ಉಳಿದ ಪಕ್ಷಿಗಳಿಗಿಂತ ಗಾತ್ರದಲ್ಲಿ ಚಿಕ್ಕದಾದರು ಕೀರ್ತಿಯಲ್ಲಿ ದೊಡ್ಡದಿರುವ ಗುಬ್ಬಚಿಗಳು ತಮ್ಮ ಕಿರು ಕಂಠದಿಂದ ಹೊರಡಿಸುವ ನಾಧ ಸಂಗೀತ ಮೇಳಕ್ಕೆ ಹೆಚ್ಚಿನ ಮೆರಗು ತರುವುದರ ಜೊತೆಗೆ ಕೇಳುಗರಿಗೆ ಪ್ರತಿ ಕ್ಷಣವು ಹೊಸ ಧಾಟಿಯಿಂದ ಮನ ತಣಿಸುವಂತೆ ಮಾಡುತ್ತಿದವು. ನಮ್ಮ ಬಾಲ್ಯದ ದಿನಗಳು ಗುಬ್ಬಕ್ಕ ಮತ್ತು ಅದರ ಗೆಳತಿ ಕಾಗಕ್ಕನ ಕಥೆಯೊಂದಿಗೆ ಹೆಣೆದುಕೊಂಡಿದು ಈ ಕಥೆಗಳನ್ನು ಎಷ್ಟು ಬಾರಿ ಕೇಳಿದರು ಸಹ ಮೊದಲಬಾರಿ ಕೇಳಿದ ಅನುಭವ ನೀಡುತ್ತಿದ್ದವು. ಗುಬ್ಬಚ್ಚಿಯು ಹಳ್ಳಿಗರ ದೈನಂದಿನ ಜೀವನದಲ್ಲಿ ಹಾಸು ಹೊಕ್ಕಾಗಿತ್ತು. ಮನೆಯ ಛಾವಣಿ, ತಗಡಿನ ಸಂದಿ, ಗೋಡೆಯ ಬಿರುಕು, ಹಿತ್ತಲಿನ ಗಿಡಗಳಲ್ಲಿ ಯಾರ ಕೈಗೂ ಎಟ್ಟುಕದಂತೆ ಸುರಕ್ಷಿತ ತಾಣ ಹುಡುಕಿ ಕಡ್ಡಿಯನ್ನು ತಂದು ಪುಟ್ಟ ಚುಚ್ಚಿನಿಂದ ಜೋಡಿಸಿ ಗೂಡು ಹೆಣೆದು ಬೆಚ್ಚಗಾಗಳು ಅಲ್ಲದೇ ಮೆತ್ತಗಾಗಲು ಹೊಲದಲ್ಲಿ ಸಿಗುವ ಹತ್ತಿ ಇಲ್ಲವೆ ಭತ್ತದ ಹುಲ್ಲು, ರವದಿಯನ್ನು ಗೂಡಿಗೆ ಸೇರಿಸಿ ಮರಿಗಳನ್ನು ಪಾಲನೆ ಮಾಡುವುದನ್ನು ಕಣ್ಣು ಮಿಟುಕಿಸದೆ ನೋಡುತ್ತಿದ್ದೇವು.
ಗೂಡಿನಿಂದ ಜಾರಿ ನೆಲಕ್ಕೆ ಬಿದ್ದ ಗುಬ್ಬಚ್ಚಿಯ ಮರಿಗಳನ್ನು ಸುರಕ್ಷಿತವಾಗಿ ಎತ್ತಿ ಗೂಡಿಗೆ ಹಾಕಿದ ಉದಾಹರಣೆಯು ಇದೆ. ಪ್ರತಿ ಮುಂಜಾನೆ ಅಂಗಳದಲ್ಲಿ ಸೇರುವ ಗುಬ್ಬಚ್ಚಿಗಳಿಗೆ ಅಪ್ಪನೆ ಅಕ್ಕಿ ನೀರು ಹಾಕಿ ಉಪಚರಿಸುತ್ತಿದ್ದ. ಆದರೆ ಅದೇ ಗುಬ್ಬಚ್ಚಿಗಳು ತೆನೆ ಗಟ್ಟಿನಿಂತ ಜೋಳದ ಹೊಲಕ್ಕೆ ನುಗ್ಗುವ ಗುಬ್ಬಚ್ಚಿಯ ದೊಡ್ಡ ಹಿಂಡು ಕಂಡಾಗ ಕೆಂಡಾ ಮಂಡಲವಾಗಿ ಕಲ್ಲು ಎಸೆದು ಓಡಿಸುತ್ತಿದ, ಅಲ್ಲದೇ ಪ್ಯಾಸ್ಟಿಕ್ ಚೀಲಗಳನ್ನು ಹೊಲದಲ್ಲಿ ಅಲ್ಲಲ್ಲಿ ಕಟ್ಟುತ್ತಿದ. ಇವುಗಳನ್ನು ಏಕೆ ಕಟ್ಟುವುದು ಎಂದು ಕೇಳಿದರೆ ಪಕ್ಷಿಗಳು ಕಾಳನ್ನು ತಿನ್ನಲು ಬಂದಾಗ ಗಾಳಿಗೆ ಪ್ಯಾಸ್ಟಿಕ್ ಸದ್ದು ಮಾಡುತ್ತದೆ ಇದರಿಂದ ಪಕ್ಷಿಗಳು ಹಾರಿಹೋಗುತ್ತವೆ ಎಂದು ಹೇಳಿದು ಇಂದಿಗೂ ನೆನಪಿದೆ.
ಮಗು ಅಳು ನಿಲ್ಲಿಸಲು ಸಹ ಗುಬ್ಬಚ್ಚಿಗಳು ಕಾರಣವಾಗಿದವು. ಹಟ ಮಾಡುವ ಮಗುವಿಗೆ ಗುಬ್ಬಚ್ಚಿಗಳನ್ನು ತೋರಿಸಿ ಊಟ ಮಾಡಿಸುವ ತಾಯಂದಿರು. ಆದರೆಯಿಂದು ಟವರ್ ಸಂಸ್ಕೃತಿಯಲ್ಲಿ ಸಿಲುಕಿ ಹಾಕಿಕೊಂಡಿರುವ ನವ ಪೀಳಿಗೆ ಜನಾಂಗಕ್ಕೆ ಸೂರ್ಯನ ಹುಟ್ಟಿನೊಂದಿಗೆ ಕೇಳಿವ ಪಕ್ಷಿಗಳ ಕಲರವ ಕೇಳಲು ಸಿಗುವುದಿಲ್ಲಾ.
ಕಾಗಕ್ಕ ಗುಬ್ಬಕ್ಕನ ಕಥೆನೂ ಹೇಳುವರು ಇಲ್ಲಾ, ನೋಡಿಕೊಂಡು ಬೆಳೆಯಲು ಗುಬ್ಬಿಗಳು ಕಾಣುವುದು ಅಪರೂಪವಾಗಿವೆ.