ಶಾಲಾ ಮಕ್ಕಳ ಮುಂದೆ ಸಚಿವರ ಚುನಾವಣಾ ಭಾಷಣ
ಕುಕನೂರು : ಶಾಲಾ ಮಕ್ಕಳ ಮುಂದೆ ರಾಜಕೀಯ ಭಾಷಣ ಮಾಡಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವ ಹಾಲಪ್ಪ ಆಚಾರ್
ಅಚ್ಚರಿ, ವೈರುದ್ಯಕ್ಕೆ ಕಾರಣವಾದ ಸಚಿವರ ಭಾಷಣ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆಯ ನಡೆ ಬಗ್ಗೆ ಭಾರೀ ಟೀಕೆಗೆ ಗುರಿಯಾಗಿದೆ.
ಏನೂ ಅರಿಯದ ಶಾಲಾ ಮಕ್ಕಳ ಮುಂದೆ ಸಚಿವರೊಬ್ಬರು ರಾಜಕೀಯ ಭಾಷಣ ಮಾಡಿದ್ದು ಎಷ್ಟು ಸರಿ ಎಂದು ಸಾರ್ವಜನಿಕರು ಪ್ರಶ್ನಿಸುವಂತಾಗಿದೆ.
ಯಲಬುರ್ಗಾ ತಾಲೂಕಿನ ಗೆದಗೇರಿ ಯ ಸರ್ಕಾರಿ ಶಾಲೆಯಲ್ಲಿ ಕೊಠಡಿ ಉದ್ಘಾಟನೆ ವೇಳೆ ಸಚಿವರಾದ ಹಾಲಪ್ಪ ಆಚಾರ್ ಅವರು ಶಾಲಾ ಮಕ್ಕಳ ಮುಂದೆ ರಾಜಕೀಯ ಭಾಷಣ ಮಾಡಿದ್ದಾರೆ, ಹೇಳಿ ಕೇಳಿ ಈಗ ಚುನಾವಣೆ ಸಮಯ, ಮಕ್ಕಳ ಮುಂದೆ ನಿಮ್ಮ ಮನೆಯಲ್ಲಿ ಹೋಗಿ ಹೇಳಿ ಮತ್ತೊಮ್ಮೆ ಮೋದಿ ಆಯ್ಕೆ ಎಂದು ಶಾಲಾ ಮಕ್ಕಳ ಮುಂದೆ ರಾಜಕೀಯ ಮಾತುಗಳನ್ನು ಹೇಳಿದ್ದಾರೆ.
ನಿಮ್ಮ ನಿಮ್ಮ ಮನೆಗೆ ಹೋಗಿ ಹೇಳಿ, ಮತ್ತೊಮ್ಮೆ ಮೋದಿ ಎಂದು ಶಾಲಾ ಮಕ್ಕಳ ಮುಂದೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಿಗಳ ಸಮ್ಮುಖದಲ್ಲಿ ರಾಜಕೀಯ ಭಾಷಣ ಮಾಡಿರುವುದು ಅಚ್ಚರಿ, ವೈರುದ್ಯ ಕ್ಕೆ ಕಾರಣವಾಗಿದೆ.
ಸಚಿವರ ಭಾಷಣಕ್ಕೆ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ನಡೆಯ ಬಗ್ಗೆ ಸಾರ್ವಜನಿಕರ ವಲಯದಲ್ಲಿ ಟೀಕೆಗೆ ಗುರಿಯಾಗಿದೆ.
ವರದಿ : ಈರಯ್ಯ ಕುರ್ತಕೋಟಿ
Minister's election speech in front of school children
Kukanur: Women and Child Welfare Department Minister Halappa Achar made a political speech in front of school children
Surprisingly, the Minister's speech which led to antagonism and the action of the Public Education Department have come under heavy criticism.
The public is questioning how right it is for a minister to make a political speech in front of school children who know nothing
Minister Halappa Achar made a political speech in front of the school children during the inauguration of a room in a government school in Gedageri, Yalaburga taluk.
Go to your house and say, once again Modi made a political speech in front of school children in the presence of officials of the Public Education Department, which has caused surprise and antagonism.
The minister's speech and the conduct of the Public Education Department have been criticized in the public sector.
Reported By : Irayya Kurtakoti