ಹುಬ್ಬಳ್ಳಿ : ನಿನ್ನೆ ಸಂಜೆ ಹುಬ್ಬಳ್ಳಿ ಜನತೆಗಾಗಿ ಏನಾದರೂ ಹೊಸದನ್ನು ತರುವ ಉದ್ದೇಶದಿಂದ ವಿಜಯವಾಣಿ ದಿನಪತ್ರಿಕೆ ಮತ್ತು ದಿಗ್ವಿಜಯ ಸುದ್ದಿ ವಾಹಿನಿಗಳೊಂದಿಗೆ ಎಸ್.ಎಸ್ ಶೆಟ್ಟರ್ ಫೌಂಡೇಶನ್ ಸಹಯೋಗದಲ್ಲಿ, ಶ್ರೀ ಜಗದೀಶ್ ಶೆಟ್ಟರ್ ಅವರ ಸಾರಥ್ಯದಲ್ಲಿ ಹುಬ್ಬಳ್ಳಿಯ ಟೆಂಡರ್ ಶ್ಯೂರ್ ರಸ್ತೆಯಲ್ಲಿ ಆಯೋಜಿಸಲಾಗಿದ್ದ 'ಹುಬ್ಬಳ್ಳಿ ಯುಗಾದಿ ಉತ್ಸವ' ಕಾರ್ಯಕ್ರಮದಲ್ಲಿ ಶ್ರೀ ಸಂಕಲ್ಪ ಶೆಟ್ಟರ್ ಅವರು ಪಾಲ್ಗೊಂಡ ಕೆಲವು ಕ್ಷಣ.
ಈ ಸಂದರ್ಭದಲ್ಲಿ ಕೇಂದ್ರ ಸಚಿವರಾದ ಶ್ರೀ ಪ್ರಹ್ಲಾದ್ ಜೋಶಿ, ಡಾ. ವಿಜಯ್ ಸಂಕೇಶ್ವರ್, ಸಭಾಪತಿಗಳಾದ ಬಸವರಾಜ್ ಹೊರಟ್ಟಿ, ಸಚಿವರಾದ ಶಂಕರ್ ಪಾಟೀಲ್ ಮುನೇನಕೊಪ್ಪ, ವಿಧಾನ ಪರಿಷತ್ ಸದಸ್ಯರಾದ ಪ್ರದೀಪ್ ಶೆಟ್ಟರ್, ಶ್ರೀ ಮಲ್ಲಿಕಾರ್ಜುನ್ ಸಾವಕಾರ, ವಿಜಯವಾಣಿ ಪತ್ರಿಕೆಯ ಸ್ಥಾನಿಕ ಸಂಪಾದಕರಾದ ಶ್ರೀ ಪ್ರಕಾಶ್ ಶೇಟ್ ಮತ್ತು ನಮ್ಮ ಎಲ್ಲಾ ಸದಸ್ಯರು ಪಾಲ್ಗೊಂಡಿದ್ದರು.
ಜಗದೀಶ್ ಶೆಟ್ಟರ್ ಅವರ ಸಾರಥ್ಯದಲ್ಲಿ 'ಹುಬ್ಬಳ್ಳಿ ಯುಗಾದಿ ಉತ್ಸವ'-Hubballi Ustava
ಜಗದೀಶ್ ಶೆಟ್ಟರ್ ಅವರ ಸಾರಥ್ಯದಲ್ಲಿ 'ಹುಬ್ಬಳ್ಳಿ ಯುಗಾದಿ ಉತ್ಸವ'-Hubballi Ustava
Reported By : Basavaraj Kabaddi
Tags
ರಾಜಕೀಯ