ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗ ವರದಿ ಜಾರಿಗೆ ಆಗ್ರಹಿಸಿ ಪರಿಶಿಷ್ಟ ಪಂಚಮ ಕುಲಬಾಂಧವರ ಒಕ್ಕೂಟದ ವತಿಯಿಂದ ವಿನೂತನ ಸರಣಿ ಪ್ರತಿಭಟನೆಗಳು.
ಕರ್ನಾಟಕದಲ್ಲಿ ಇಂದು ಸಂವಿಧಾನದತ್ತ ಸಾಮಾಜಿಕ ನ್ಯಾಯವು ಮೂಕವಾಗಿದೆ ಮತ್ತು ಅಸ್ಪೃಶ್ಯ ಪರಿಶಿಷ್ಟರ ಬೇಡಿಕೆಗೆ ಸರಕಾರ ಕುರುಡಾಗಿದೆ ಎಂಬುದರ ಸಂಕೇತವಾಗಿ, ಸಂಜೆ 4 ಘಂಟೆಗೆ ಬಾಯಿಗೆ ಕಪ್ಪು ರಿಬ್ಬನ್ ಬಟ್ಟೆಯನ್ನು ಕಟ್ಟಿಕೊಂಡು ಅತ್ಯಂತ ಶಾಂತಿಯಿಂದ ಅಂಬೇಡ್ಕರ್ ಮೂರ್ತಿಯಿಂದ ಮೆರವಣಿಗೆ ಮಾಡುವ ಮೂಲಕ ಪ್ರತಿಭಟಿಸಿದರು.
ಈ ಮೆರವಣಿಗೆಯಲ್ಲಿ ಹಲಗೆ ವಾದನವನ್ನು ಹೊರತು ಪಡಿಸಿ ಇನ್ಯಾವುದೇ ಘೋಷಣೆಗಳು ಇಲ್ಲದೇ ಮೌನವಾಗಿ ಮತ್ತು ಶಾಂತಿಯುತವಾಗಿ ಮೆರವಣಿಗೆ ಮಾಡಿದರು.
ಶಾಂತಿಯಿಂದ ಮತ್ತು ಅತ್ಯಂತ ಶಿಸ್ತಿನಿಂದ ನಡೆದ ಮೆರವಣಿಗೆಯಲ್ಲಿ ಭೀಮ್ ಸಂಘಟನೆ, ದಲಿತಪರ ಸಂಘಟನೆಗಳು , ಜೈ ಭೀಮಾ ಸಂಘರ್ಷ ಸಮಿತಿಯ ಎಲ್ಲಾ ಪದಾಧಿಕಾರಿಗಳು ಭಾಗವಹಿಸಿದ್ದರು.
ವರದಿ : ಬಸವರಾಜ ಕಬಡ್ಡಿ
Tags
ವೈರಲ್