ಐಎಎಸ್ ಅಧಿಕಾರಿ, ಐಪಿಎಸ್ ಅಧಿಕಾರಿ ಎಂದಾಗ ಸಾಮಾನ್ಯ ಜನರು ಅವರಿಗೆ ವಿಶೇಷ ಗೌರವ ನೀಡ್ತಾರೆ. ಉನ್ನತ ಹುದ್ದೆಯಲ್ಲಿರುವ ಇವರ ಮೇಲೆ ಜವಾಬ್ದಾರಿ ಕೂಡ ಹೆಚ್ಚಿರುತ್ತದೆ. ಅವರು ಮಾಡುವ ಕೆಲಸಕ್ಕೆ ತಕ್ಕಂತೆ ಸಂಬಳ ಕೂಡ ಸಿಗುತ್ತದೆ. ಯಾವ ಅಧಿಕಾರಿಗೆ ಎಷ್ಟು ಸಂಬಳ ಎನ್ನುವ ಮಾಹಿತಿ ಇಲ್ಲಿದೆ.
ಯುಪಿಎಸ್‌ಸಿ ಪರೀಕ್ಷೆಯನ್ನು ಪಾಸ್ ಆಗುವ ಕನಸನ್ನು ಅನೇಕರು ಕಾಣ್ತಾರೆ. ಅದ್ರಲ್ಲಿ ಕೆಲವರು ತಮ್ಮ ಪರಿಶ್ರಮದಿಂದ ಪಾಸ್ ಆಗ್ತಾರೆ. ಯುಪಿಎಸ್ ಸಿ ಪರೀಕ್ಷೆಯನ್ನು ದೇಶದಲ್ಲೇ ಅತ್ಯಂತ ಕಠಿಣ ಪರೀಕ್ಷೆ ಎಂದು ಪರಿಗಣಿಸಲಾಗಿದೆ. ಸದಾ ಪರಿಶ್ರಮದ ನಂತ್ರ ಜನರು ಐಎಸ್, ಐಪಿಎಸ್ ಅಥವಾ ಐಎಫ್ ಸಿ ಶ್ರೇಣಿಯನ್ನು ತಲುಪುತ್ತಾರೆ. ಆದರೆ ಈ ಮೂರು ರ್ಯಾಂಕ್ ಗಳಲ್ಲಿ ಯಾರು ಹೆಚ್ಚು ಸಂಬಳ ಪಡೆಯುತ್ತಾರೆ ಗೊತ್ತಾ?
ಭಾರತೀಯ ಪೊಲೀಸ್ ಸೇವೆಗಳು (ಐಪಿಎಸ್), ಭಾರತೀಯ ವಿದೇಶಾಂಗ ಸೇವೆಗಳು (ಐಎಫ್‌ಎಸ್) ಮತ್ತು ಭಾರತೀಯ ಆಡಳಿತ ಸೇವೆಗಳಲ್ಲಿ (ಐಎಎಸ್) ಯಾವುದು ಹೆಚ್ಚು ಶಕ್ತಿಶಾಲಿ ಎಂಬ ಬಗ್ಗೆ ಜನರಲ್ಲಿ ಗೊಂದಲವಿದೆ. ಗೂಗಲ್ (Google) ನಲ್ಲಿ ಯುಪಿಎಸ್‌ಸಿ ಕುರಿತು ಹೆಚ್ಚು ಕೇಳಲಾದ ಪ್ರಶ್ನೆಗಳಲ್ಲಿ ಇದು ಒಂದಾಗಿದೆ. ನಾವಿಂದು ಇವರಲ್ಲಿ ಯಾರು ಹೆಚ್ಚು ಸಂಬಳ (Salary) ಪಡೆಯುತ್ತಾರೆ ಎಂಬುದನ್ನು ನಿಮಗೆ ಹೇಳ್ತೇವೆ.
ಐಪಿಎಸ್ (IPS) ಪರೀಕ್ಷೆ ಪಾಸಾದ್ರೆ ಏನೇನು ಜವಾಬ್ದಾರಿ ಹೊರಬೇಕು? : ಹೆಸರೇ ಸೂಚಿಸುವಂತೆ, ಪೊಲೀಸ್ ಅಧಿಕಾರಿಯಾಗಲು ಐಪಿಎಸ್ ಪರೀಕ್ಷೆ ಪಾಸಾಗ್ಬೇಕು. ರಾಜ್ಯ ಪೊಲೀಸ್ ಇಲಾಖೆ ನಾಯಕತ್ವವನ್ನು ಪಡೆಯಲು ಇದು ನೆರವಾಗುತ್ತದೆ ಎಂದು ಅನೇಕರು ಭಾವಿಸ್ತಾರೆ. ಆದ್ರೆ ಐಪಿಎಸ್ ಅಧಿಕಾರಿಗೆ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳನ್ನು (BSF, SSB, CRPF, CISF, ಮತ್ತು ITBP), ರಾಷ್ಟ್ರೀಯ ಭದ್ರತಾ ಸಿಬ್ಬಂದಿ (NSG), ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆ (NDRF), ಗುಪ್ತಚರ ಬ್ಯೂರೋ (IB), ಸಂಶೋಧನೆ ಮತ್ತು ವಿಶ್ಲೇಷಣಾ ವಿಭಾಗ (R&AW), ವಿಶೇಷ ರಕ್ಷಣಾ ಗುಂಪು (SPG), ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಮತ್ತು ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಶನ್ (CBI) ಗೂ ಈ ಪರೀಕ್ಷೆ ಮೂಲಕವೇ ಆಯ್ಕೆ ನಡೆಯುತ್ತದೆ
ಐಪಿಎಸ್ ಅಧಿಕಾರಿಗೆ ಸಿಗುವ ಸಂಬಳವೆಷ್ಟು? : ಇದ್ರಲ್ಲೂ ಹುದ್ದೆಗೆ ತಕ್ಕಂತೆ ವೇತನ ನೀಡಲಾಗುತ್ತದೆ. ಪೊಲೀಸ್ ಮಹಾನಿರ್ದೇಶಕರಿಗೆ (ಡಿಜಿಪಿ) ಹೆಚ್ಚಿನ ವೇತನವಿದೆ. ಇಂಟೆಲಿಜೆನ್ಸ್ ಬ್ಯೂರೋ, ಸಿಬಿಐ, ಎನ್‌ಐಎ, ದೆಹಲಿಯ ಪೊಲೀಸ್ ಆಯುಕ್ತರು, ಕೇಂದ್ರ ಸಶಸ್ತ್ರ ಪಡೆಗಳ ನಿರ್ದೇಶಕರಿಗೆ 2 ಲಕ್ಷ 25 ಸಾವಿರದಿಂದ 2 ಲಕ್ಷ 50 ಸಾವಿರದವರೆಗೆ ಮಾಸಿಕ ಸಂಬಳ ಸಿಗುತ್ತದೆ. ಇದಲ್ಲದೇ ಟಿಎ, ಡಿಎ, ಎಚ್‌ಆರ್‌ಎ ಮುಂತಾದವು ಲಭ್ಯವಿದೆ. ಇವನ್ನೆಲ್ಲ ಸೇರಿಸಿದ್ರೆ ಅವರ ಒಟ್ಟು ವೇತನ ತಿಂಗಳಿಗೆ ಸುಮಾರು 3 ಲಕ್ಷ 50 ಸಾವಿರ ರೂಪಾಯಿ ಎನ್ನಬಹುದು. ಇವರನ್ನು ಹೊರತುಪಡಿಸಿ ಉಳಿದ ಐಪಿಎಸ್ ಅಧಿಕಾರಿಗಳು ಇದಕ್ಕಿಂತ ಕಡಿಮೆ ಸಂಬಳ ಪಡೆಯುತ್ತಾರೆ.
ಐಎಎಸ್ ಅಧಿಕಾರಿಗಳ ಜವಾಬ್ದಾರಿ ಏನು? : ಭಾರತೀಯ ಆಡಳಿತ ಸೇವೆಗಳಲ್ಲಿ, ಎಲ್ಲಾ ಸರ್ಕಾರಿ ಸಂಸ್ಥೆಗಳು ಮತ್ತು ಸಾರ್ವಜನಿಕ ಉದ್ಯಮಗಳ ಅಧಿಕಾರಿಗಳನ್ನು ಆಯ್ಕೆ ಮಾಡಲಾಗುತ್ತದೆ. ಇದನ್ನು ದೊಡ್ಡ ಹುದ್ದೆ ಎಂದು ಪರಿಗಣಿಸಲಾಗುತ್ತದೆ. ಸರ್ಕಾರಿ ಸಚಿವಾಲಯದಿಂದ ಹಿಡಿದು ದೊಡ್ಡ ಸರ್ಕಾರಿ ಬ್ಯಾಂಕ್‌ಗಳ ದೊಡ್ಡ ಹುದ್ದೆಯನ್ನು ಇವರು ಅಲಂಕರಿಸಿರುತ್ತಾರೆ. ಭಾರತೀಯ ಚುನಾವಣಾ ಆಯೋಗದ ಆದೇಶದ ಮೇರೆಗೆ ಐಎಎಸ್ ಅಧಿಕಾರಿಗಳು ಎಲ್ಲಾ ಚುನಾವಣೆಗಳಲ್ಲಿ ಕೆಲಸ ಮಾಡುತ್ತಾರೆ.
ಐಎಎಸ್ ಅಧಿಕಾರಿಗಳ ಸಂಬಳ : ಐಎಎಸ್ ಅಧಿಕಾರಿಗಳ ವೇತನ ಶ್ರೇಣಿ ಐಪಿಎಸ್ ಅಧಿಕಾರಿಗಳಿಗಿಂತ ಹೆಚ್ಚಾಗಿದೆ. ಅವರಿಗೆ ಆರಂಭಿಕ 56,100 ರೂಪಾಯಿ ತಿಂಗಳ ವೇತನ ಸಿಗುತ್ತದೆ. ಐಎಎಸ್ ಅಧಿಕಾರಿಗಳು ಕ್ಯಾಬಿನೆಟ್ ಕಾರ್ಯದರ್ಶಿಯ ಉನ್ನತ ಹುದ್ದೆಯನ್ನು ಅಲಂಕರಿಸುತ್ತಾರೆ. ಗ್ರೇಡ್ ಕಡಿಮೆಯಾದಂತೆ ಸಂಬಳ ಕಡಿಮೆಯಾಗುತ್ತದೆ. ಕ್ಯಾಬಿನೆಟ್ ಕಾರ್ಯದರ್ಶಿ ದರ್ಜೆಯ ಐಎಎಸ್ ಅಧಿಕಾರಿಯ ಮೂಲ ವೇತನ 2 ಲಕ್ಷ 50 ಸಾವಿರದಿಂದ 3 ಲಕ್ಷದವರೆಗೆ ಇರುತ್ತದೆ. ಅವರ ಒಟ್ಟು ವೇತನ 4 ಲಕ್ಷದಿಂದ 4 ಲಕ್ಷ 50 ಸಾವಿರ ರೂಪಾಯಿಯಾಗಿದೆ.
ಐಎಫ್ ಎಸ್ ಅಧಿಕಾರಿಗಳ ಜವಾಬ್ದಾರಿ ಏನು? : ಐಎಫ್ ಎಸ್ ಸೇವೆಗಳು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಅಡಿಯಲ್ಲಿ ಬರುತ್ತದೆ. ಈ ಸೇವೆಗಳ ಮುಖ್ಯಸ್ಥರು ವಿದೇಶಾಂಗ ಕಾರ್ಯದರ್ಶಿಯಾಗಿರುತ್ತಾರೆ. ಭಾರತೀಯ ವಿದೇಶಾಂಗ ಸೇವೆಗಳ ಅಧಿಕಾರಿಯ ಪೋಸ್ಟಿಂಗ್ ದೇಶ ಮತ್ತು ವಿದೇಶದಲ್ಲಿ ಎಲ್ಲಿಯಾದರೂ ಇರಬಹುದು. ನಿವೃತ್ತಿಯ ನಂತರ ಐಎಫ್ ಸಿ ಅಧಿಕಾರಿಗಳು ರಾಷ್ಟ್ರಪತಿ, ಉಪರಾಷ್ಟ್ರಪತಿ, ರಾಜ್ಯಪಾಲ, ಲೋಕಸಭೆಯ ಸ್ಪೀಕರ್, ಕ್ಯಾಬಿನೆಟ್ ಸಚಿವರು, ರಾಷ್ಟ್ರೀಯ ಭದ್ರತಾ ಸಲಹೆಗಾರರು ಮುಂತಾದ ಉನ್ನತ ಹುದ್ದೆಯನ್ನು ಪಡೆಯುತ್ತಾರೆ.
ಐಎಫ್ ಸಿ ಅಧಿಕಾರಿಗಳ ಸಂಬಳವೆಷ್ಟು? : ಐಎಫ್ ಸಿ ಅಧಿಕಾರಿಯ ವೇತನವು ತಿಂಗಳಿಗೆ 2.4 ಲಕ್ಷ ರೂಪಾಯಿ. ಇದು ಮೂಲ ವೇತನವಾಗಿರುತ್ತದೆ. ಶ್ರೇಣಿಯನ್ನು ಅವಲಂಬಿಸಿ ಅವರು ಹೆಚ್ಚಿನ ಸಂಬಳವನ್ನು ಪಡೆಯುತ್ತಾರೆ. ಅವರ ಒಟ್ಟು ವೇತನ 3 ಲಕ್ಷ 50 ಸಾವಿರದಿಂದ 4 ಲಕ್ಷದವರೆಗೆ ಇರುತ್ತದೆ.
IAS Officer Salary: IAS, IFS, IPS among them who gets more salary?
Common people give special respect to IAS officer and IPS officer. The responsibility is also high on those who are in high positions. They also get salary according to the work they do. Here is the information about the salary of which officer.
Many people dream of clearing the UPSC exam. Some of them pass with their hard work. UPSC exam is considered as the toughest exam in the country. People reach IS, IPS or IFC rank after hard work. But do you know who gets the highest salary among these three ranks?
People are confused about which is more powerful among Indian Police Services (IPS), Indian Foreign Services (IFS) and Indian Administrative Services (IAS). This is one of the most asked questions about UPSC on Google. We will tell you who among them gets the highest salary.
What are the responsibilities of passing the IPS exam? : As the name suggests, one has to pass the IPS exam to become a police officer. Many feel that this will help the state police department get leadership. While an IPS officer has experience in the Central Armed Police Forces (BSF, SSB, CRPF, CISF, and ITBP), National Security Guard (NSG), National Disaster Response Force (NDRF), Intelligence Bureau (IB), Research and Analysis Wing (R&AW), Special Defense Group (SPG), National Investigation Agency (NIA) and Central Bureau of Investigation (CBI) are also selected through this exam.
What is the salary of an IPS officer? : Here too salary is given according to the post. Director General of Police (DGP) has a higher salary. Intelligence Bureau, CBI, NIA, Police Commissioner of Delhi, Director of Central Armed Forces get a monthly salary of 2 lakh 25 thousand to 2 lakh 50 thousand. Also TA, DA, HRA etc are available. If all these are added, his total salary can be said to be around 3 lakh 50 thousand rupees per month. Apart from him, the rest of the IPS officers get paid less than this
What are the responsibilities of IAS officers? : In Indian Administrative Services, officers of all government organizations and public enterprises are selected. It is considered a big post. He has held important posts from government ministries to large government banks. IAS officers work in all elections on the orders of the Election Commission of India.
Salary of IAS Officers: The pay scale of IAS officers is higher than that of IPS officers. They will get a starting salary of Rs 56,100 per month. IAS officers hold the top post of Cabinet Secretary. The lower the grade, the lower the salary. The basic pay of a Cabinet Secretary grade IAS officer ranges from 2 lakh 50 thousand to 3 lakh. Their total salary is 4 lakh to 4 lakh 50 thousand rupees.
What is the responsibility of IFS officers? : The IFS services come under the Ministry of External Affairs. These services are headed by the Foreign Secretary. The posting of an Indian Foreign Service officer can be anywhere in the country and abroad. After retirement, IFC officers get high posts like President, Vice President, Governor, Lok Sabha Speaker, Cabinet Minister, National Security Advisor etc.
What is the salary of IFC officers? : The salary of an IFC officer is Rs 2.4 lakh per month. This will be basic pay. Depending on the rank they get higher salary. Their total salary ranges from 3 lakh 50 thousand to 4 lakh.