JDS ಪಕ್ಷ ಅಧಿಕಾರಕ್ಕೆ ಬಂದರೆ ರೈತರ ಮಕ್ಕಳನ್ನು ಮದುವೆ ಆದ್ರೆ ಸರ್ಕಾರದಿಂದ 2 ಲಕ್ಷ ಸಹಾಯ ಧನ & ಸ್ತ್ರೀ ಶಕ್ತಿ ಸಂಘದ ಸಂಪೂರ್ಣ ಸಾಲ ಮನ್ನಾ : ಬಿ.ಎಂ ಕಿರಣ್

ಜೆ ಡಿ.ಎಸ್ ಪಕ್ಷ  .ಅಧಿಕಾರಕ್ಕೆ ಬಂದರೆ ರೈತರ ಮಕ್ಕಳನ್ನು ಮದುವೆ ಆದ್ರೆ ಸರ್ಕಾರದಿಂದ 2 ಲಕ್ಷ ಸಹಾಯ ಧನ ಅಲ್ಲದೆ ಸಹಕಾರ ಸಂಘದಲ್ಲಿ ಪಡೆದ  ಸ್ತ್ರೀ ಶಕ್ತಿ ಸಂಘದ ಸಂಪೂರ್ಣ ಸಾಲ ಮನ್ನಾ ಮಾಡುವುದಾಗಿ ಮಾಜಿ‌ ಮುಖ್ಯಮಂತ್ರಿ ಕುಮಾರಣ್ಣನವರು ತಿಳಿಸಿದ್ದಾರೆ ಎಂದು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಎಂ ಕಿರಣ್ ತಿಳಿಸಿದ್ರು
ಕೃಷ್ಣರಾಜಪೇಟೆ  ತಾಲೂಕಿನ ಕಿಕ್ಕೇರಿ ಹೋಬಳಿಯ ಸೊಳ್ಳೇಪುರ, ಕಳ್ಳನಕೆರೆ, ಮಾದಿಹಳ್ಳಿ, ಬೂವನಹಳ್ಳಿ, ವಡ್ಡರಹಳ್ಳಿ, ಬಸವನಹಳ್ಳಿ ಗ್ರಾಮದಲ್ಲಿ ಪಂಚ ರತ್ನ ಯೋಜನೆಗಳ ಬಗ್ಗೆ ಮನೆ ಮನೆಗಳಿಗೆ ತೆರಳಿ ಪಂಚರತ್ನ ಯೋಜನೆಗಳ ಬಗ್ಗೆ  ಹರಿವು ಮೂಡಿಸಲಾಯಿತು..
ಕಾರ್ಯಕ್ರಮದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ  ಬಿ.ಎಂ ಕಿರಣ್  ಮಾತನಾಡಿ  ಮೊನ್ನೆಯಷ್ಟೇ ಕುಮಾರಣ್ಣನವರು ಜೆ.ಡಿ.ಎಸ್ ಪಕ್ಷದ ಅಧಿಕಾರಕ್ಕೆ ಬಂದರೆ  ರೈತರ ಮಕ್ಕಳನ್ನು‌ ಮದುವೆಯಾದವರಿಗೆ  ಸರ್ಕಾರದಿಂದನೇ 2 ಲಕ್ಷ ಸಹಾಯ ಧನ ನೀಡುವುದು ಅಲ್ಲದೆ ಸಹಕಾರ ಸಂಘಗಳಲ್ಲಿ ಪಡೆದ ಸ್ತ್ರೀ ಶಕ್ತಿ ಸಾಲಗಳು ಸಂಪೂರ್ಣ ಮನ್ನಾ ಮಾಡಲಾಗುವುದು ಎಂದು ಘೋಷಣೆ ಮಾಡಿದ್ದರೇ ಈ  ರಾಜ್ಯದಲ್ಲಿ ರೈತರ ಪರವಾಗಿ ನಿಂತು ರೈತರಿಗೊಸ್ಕೊ ನುಡುದಂತೆ ನೆಡೆಯುವ ಮುಖ್ಯಮಂತ್ರಿ ಅದ್ರೆ ಕುಮಾರಸ್ವಾಮಿಯವರು ಎಂದರು  ಮಾತ್ರ ನಮ್ಮ‌ ಕ್ಷೇತ್ರದಲ್ಲಿ  ಹಲವು ವರ್ಷಗಳಿಂದ ಯಾವುದೇ ಜನಪರ ಅಭಿವೃದ್ಧಿಯ ಕೆಲಸಗಳು ಆಗದೆ ಅಭಿವೃದ್ಧಿ ಎನ್ನುವ ಪದ ಮರಿಚಿಕೆಯಾಗಿದೆ, ನಮ್ಮ ತಾಲೂಕಿನ ಜನತೆ ಅವರ ಆಸೆ ಆಮಿಷಕ್ಕೆ ಒಳಗಾಗದೆ ಗ್ರಾಮೀಣ ಭಾಗದ ರೈತರ ಏಳಿಗೆಗಾಗಿ ಪಂಚರತ್ನ ಯೋಜನೆಯ ಅನುಷ್ಠಾನಗೊಳಿಸಬೇಕು ಎಂದು ಶ್ರಮಿಸುತ್ತಿರುವ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರ ಕೈ ಬಲಪಡಿಸಬೇಕೆಂದರೆ ಬಡತನದಲ್ಲಿ ಜನಿಸಿ ಗ್ರಾಮೀಣ ಪ್ರದೇಶದ ಜನರ ಕಷ್ಟ ಅರಿವಿರುವ ಜೆಡಿಎಸ್ ಅಭ್ಯರ್ಥಿ ಎಚ್ ಟಿ ಮಂಜು ಅವರಿಗೆ ಮತ ನೀಡುವ ಮೂಲಕ ಕೈ ಬಲಪಡಿಸಬೇಕು ಎಂದು ತಿಳಿಸಿದ್ರು..
ಬಳಿಕ ಮಾತನಾಡಿದ ಜೆಡಿಎಸ್ ಅಭ್ಯರ್ಥಿ ಎಚ್ ಟಿ ಮಂಜು ನಾನು ಒಬ್ಬ ಬಡ ಕುಟುಂಬದ ಯುವಕ ನನ್ನ ಪಕ್ಷದ ವರಿಷ್ಠರು ಪಕ್ಷದ ನಿಷ್ಠೆಯಲ್ಲಿ ಸಾಗುವ ವ್ಯಕ್ತಿ ಎಂದು ನಂಬಿಕೆ ಇಟ್ಟು ನನಗೆ ಪಕ್ಷದ ಅಭ್ಯರ್ಥಿಯಾಗಿ ಘೋಷಣೆ ಮಾಡಿ ನಿಮ್ಮೆಲ್ಲರ ಸೇವೆ ಮಾಡಲು ನನಗೆ ಒಂದು ಸುವರ್ಣ ಅವಕಾಶ ಕಲ್ಪಿಸಿ ಕೊಟ್ಟಿದ್ದಾರೆ ನೀವು ನೀಡುವ ಮತದ ಮೌಲ್ಯ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಕ್ಷೇತ್ರದ ಅಭಿವೃದ್ಧಿಗೆ ದುಡಿಯುತ್ತೇನೆ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಜೆಡಿಎಸ್ ಅಭ್ಯರ್ಥಿ ಎಚ್ ಟಿ ಮಂಜು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ‌ಎಂ ಕಿರಣ್,  ತಾಲೂಕು ಜೆಡಿಎಸ್ ಅಧ್ಯಕ್ಷ ಎ ಎನ್ ಜಾನಕಿರಾಮ್, ಹೋಬಳಿ ಅಧ್ಯಕ್ಷ ಕಾಯಿ ಮಂಜೇಗೌಡ, ತಾಲ್ಲೂಕು ಪಂಚಾಯತಿ ಮಾಜಿ ಸದಸ್ಯ ಐಕನಹಳ್ಳಿ ಕೃಷ್ಣೇಗೌಡ,  ಕಿಕ್ಕೇರಿ ಕೃಷಿ ಪತ್ತಿನ ಸಹಕಾರ ಸಂಘ ಮಾಜಿ ಅಧ್ಯಕ್ಷ ಶೇಖರ್, ಕಿಕ್ಕೇರಿ ಗ್ರಾಮ ಪಂಚಾಯತಿ ಅದ್ಯಕ್ಷ ತೇಜಸ್ವಿ, ಸದಸ್ಯ ಬಾಲಕೃಷ್ಣ, ಹೆಚ್ ಟಿ ಮಂಜು ರವರ ಆಪ್ತ ಸಹಾಯಕ ಪ್ರತಾಪ್,  ಗೊಲ್ಲರಕೊಪ್ಪಲು ಅನೀಲ್ ಸೇರಿದಂತೆ ನೂರಾರು ಜೆ.ಡಿ.ಎಸ್ ಕಾರ್ಯಕರ್ತರು ಹಾಜರೀದ್ದರು.. 

ವರದಿ ಶಂಭು‌ ಕಿಕ್ಕೇರಿ ಕೃಷ್ಣರಾಜಪೇಟೆ
Previous Post Next Post

AD

 


Contact For News&Ads

Siddi TV

Contact Form

f="https://unpkg.com/video.js/dist/video-js.css" rel="stylesheet">