ಜೆಡಿಎಸ್ ಹಸಿರು ಗೋಡೆಬರಹಕ್ಕೆ ಚಾಲನೆ
ಕೊಪ್ಪಳ :ನಗರದ ಎಪಿಎಂಸಿಯಲ್ಲಿ '2023ಕ್ಕೆ ಜೆಡಿಎಸ್ ಸರಕಾರ ಕನ್ನಡಿಗರೇ ಅಧಿಕಾರ' ಎಂಬ ಗೋಡೆ ಬರಹಕ್ಕೆ ಪಕ್ಷದ ನಿಯೋಜಿತ ಅಭ್ಯರ್ಥಿ, ಜಿಲ್ಲಾಧ್ಯಕ್ಷ ವೀರೇಶ ಮಹಾಂತಯ್ಯನಮಠ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ರೈತರ ಹಿತದೃಷ್ಟಿ ಉದ್ದೇಶಕ್ಕಾಗಿ ಹಸಿರು ಬಣ್ಣದಿಂದ ಗೋಡೆ ಬರಹಗಳನ್ನು ಬರೆಯಲಾಗಿದೆ. ಹಸಿರು ದೇಶದ ಅನ್ನದಾತನ ಸಂಕೇತ. ಇದರಿಂದ ಎಪಿಎಂಸಿಗೆ ಆಗಮಿಸುವ ರೈತಾಪಿ ಬಂಧುಗಳು ಗೋಡೆ ಬರಹಗಳನ್ನು ನೋಡಿ ಜೆಡಿಎಸ್ ಪಕ್ಷಕ್ಕೆ ಬೆಂಬಲ ಸೂಚಿಸುತ್ತಿದ್ದಾರೆ. ಸದಾ ರೈತರ ಬಗ್ಗೆ ಚಿಂತನೆ ಮಾಡುವ ನಮ್ಮ ಪಕ್ಷ ಮುಂಬರುವ ದಿನಗಳಲ್ಲಿ ನಡೆಯುವ ಚುನಾವಣೆಯಲ್ಲಿ ರಾಜ್ಯದ ಅಧಿಕಾರ ಚುಕ್ಕಾಣಿ ಹಿಡಿಯುವುದು ನಿಶ್ಚಿತ ಎಂದು ಭರವಸೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯಧ್ಯಕ್ಷ ಮಲ್ಲಿಕಾರ್ಜುನ್ ಗೌಡರ್, ಜಿಲ್ಲಾ ವಕ್ತಾರ ಮುನೇಶ್ ವಡ್ಡಟ್ಟಿ , ತಾಲೂಕು ಅಧ್ಯಕ್ಷ ಚನ್ನಪ್ಪ ಮುತ್ತಾಳ, ಮುಖಂಡರಾದ ಮಂಜು.ಕೆ, ಪರಶುರಾಮ್ ಚಿಗರಿ ,ಮಂಜುನಾಥ ಹನುಮಂತ, ಬಸವರಾಜ್ ಭೂತಣ್ಣವರ್, ಹಾಗೂ ಮುಖಂಡರು ಕಾರ್ಯಕರ್ತರು ಅಭಿಮಾನಿಗಳು ಇದ್ದರು.
ವರದಿ : ಚನ್ನಕೇಶವ
Tags
ರಾಜಕೀಯ