ಕಂಪ್ಲಿಯ 100 ಬೆಡ್ ಆಸ್ಪತ್ರೆಯ ಕಾಮಗಾರಿ ನಿರ್ಮಾಣಕ್ಕೆ ಶಾಸಕ ಜೆ.ಎನ್.ಗಣೇಶ ಭೂಮಿ ಪೂಜೆ
ಕಂಪ್ಲಿ.ಮಾ.18:ತಾಲೂಕಿನ ಉದ್ಬವ ಗಣಪತಿ ದೇವಸ್ಥಾನದಲ್ಲಿ ಪೂಜೆ ಮಾಡಿಸುವ ಮೂಲಕ ಸಾಗಿದ ಹೊಸಪೇಟೆ ರಸ್ತೆಯ ನಂ.10 ಮುದ್ದಾಪುರ ಗ್ರಾಪಂ ವ್ಯಾಪ್ತಿಯ ಮಿನಿ ವಿಧಾನ ಆಡಳಿತ ಸೌಧದ ಸಮೀಪ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ,ಜಿಲ್ಲಾಡಳಿತ,ಜಿಲ್ಲಾಪಂಚಾಯತ್ ಸಹಯೋಗದಲ್ಲಿ ನಿರ್ಮಿಸಲಾಗುತ್ತಿರುವ ಜಿಲ್ಲಾ ಖನಿಜ ಪ್ರತಿಷ್ಠಾನ ಅನುದಾನ ಯೋಜನೆಯ 20 ಕೋಟಿ ವೆಚ್ಚದಲ್ಲಿ 100 ಹಾಸಿಗೆಯ ತಾಲ್ಲೂಕು ಆಸ್ಪತ್ರೆಯ ಕಟ್ಟಡ ನಿರ್ಮಾಣ ಕಾಮಗಾರಿಯ ಭೂಮಿಪೂಜೆಯನ್ನು ಶಾಸಕ ಜೆ.ಎನ್.ಗಣೇಶ ನೇರೆವರಿಸಿದರು.
ಮುಖಂಡರಾದ ಕೆ.ಎಂ.ಹೇಮಯ್ಯಸ್ವಾಮಿ ಹಾಗೂ ಡಾ.ಎ.ಸಿ.ದಾನಪ್ಪ ಅವರು ಮಾತನಾಡಿ ಕಂಪ್ಲಿ ತಾಲೂಕಿನಲ್ಲಿ ಒಂದು ಸುಸಜ್ಜಿತ ಎಲ್ಲಾ ಸೌಲಭ್ಯಗಳನ್ನು ಹೊಂದಿರುವ ಆಸ್ಪತ್ರೆಯ ಅವಶ್ಯಕತೆ ಇತ್ತು.ಜನರು ತಮಗೆ ಆರೋಗ್ಯ ತುರ್ತು ಚಿಕಿತ್ಸೆಗೆ ಬಳ್ಳಾರಿಗೆ ತೆರಳಬೇಕಾಗಿತ್ತು.ಇಂತಹ ಸಂದರ್ಭದಲ್ಲಿ ನಮ್ಮ ಶಾಸಕರು ವಿರೋಧ ಪಕ್ಷದಲ್ಲಿ ಇದ್ದುಕೊಂಡು ಅಧಿಕಾರಿದಲ್ಲಿದ್ದಾಗ ಏನಾದರೂ ಮಾಡಬೇಕು ಎಂಬ ಛಲದಿಂದ ನೂರು ಹಾಸಿಗೆ ಆಸ್ಪತ್ರೆಗೆ ಸ್ಥಾಪನೆ ಮಾಡುತ್ತಿರುವುದು ಶ್ಲಾಘನೀಯ ಎಂದರು.
ಜೆ.ಎನ್.ಗಣೇಶ ಅಭಿಮಾನಿ ಬಳಗದ ವತಿಯ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಕಂಪ್ಲಿ ಶಾಸಕ ಜೆ.ಎನ್. ಗಣೇಶ್ ಅವರು ಕಂಪ್ಲಿ ಮತ್ತು ಕುರುಗೋಡು ಭಾಗದಲ್ಲಿ ಜನರಿಗೆ ತುರ್ತು ಚಿಕಿತ್ಸೆ ಬೇಕೆಂದರ ಬಳ್ಳಾರಿ ಕಡೆ ಹೊಗಬೇಕಾಗಿತ್ತು ಅಲ್ಲದೆ ಕಳೆದ ಎರಡು ವರ್ಷಗಳಿಂದ ಹಿಂದೆ ಕೋವೀಡ್ ಸಂದರ್ಭದಲ್ಲಿ ಸರಿಯಾಗಿ ಚಿಕಿತ್ಸೆ ಸಿಗದೆ ಬೆಡ್ ಗಳ ಕೊರತೆಯಿಂದ ನನ್ನ ಕ್ಷೇತ್ರದ ಆತ್ಮೀಯ ಒಡನಾಡಿಗಳನ್ನು ಕಳೆದುಕೊಂಡ ನೋವು ನನ್ನನ್ನು ಈಗಲೂ ಕಾಡುತ್ತಿದೆ.ಆಗ ಯೋಚನೆ ಮಾಡಿದೆ ನಮ್ಮ ಕ್ಷೇತ್ರದ ಜನತೆ ಎಲ್ಲಾ ಸೌಲಭ್ಯಗಳನ್ನು ಹೊಂದಿರುವ ತಾಲೂಕಿನಲ್ಲಿ ಒಂದು ಸುಸಜ್ಜಿತ ದೊಡ್ಡ ಆಸ್ಪತ್ರೆಯನ್ನು ಸ್ಥಾಪನೆ ಮಾಡಲು ನಿರ್ಧರಿಸಿದ್ದೆ ಆಗಿನಿಂದ ಸತತ ಬೆಂಗಳೂರಿಗೆ ಸುತ್ತಾಡಿ ಶ್ರಮವಹಿಸಿ ಕೆಲಸ ಮಾಡಿದ್ದು ಇಂದಿಗೆ ಸಾರ್ಥಕವಾಗಿದೆ.ಸೋಮಪ್ಪ ಕೆರೆ,110ಕೆವಿ ವಿದ್ಯುತ್ ಘಟಕಗಳು,ನಿರಂತರ ಕುಡಿಯುವ ನೀರಿನ ಯೋಜನೆ,ಈ ಭಾಗದ ರೈತರಿಗೆ ಅನುಕೂಲವಾಗುವಂತೆ ಅಭಿವೃದ್ಧಿ ಕೆಲಸಗಳು ಮೂಲಭೂತ ಸೌಕರ್ಯ ರಸ್ತೆಗಳು ಅಭಿವೃದ್ಧಿಗೊಳಿಸಲಾಗಿದೆ. ಕಂಪ್ಲಿ ಉತ್ಸವ ಮಾದರಿಯಲ್ಲಿ ಮುಂದಿನ ದಿನಗಳಲ್ಲಿ ಕುರುಗೋಡು ಉತ್ಸವ ಆಚರಿಲಾಗುವುದು ಯಾರಿಗೂ ಅಧಿಕಾರ ಶಾಶ್ವತವಲ್ಲ ಜನರ ಪ್ರೀತಿ ವಾತ್ಸಲ್ಯವೇ ಶಾಶ್ವತ ಎಂದರು.
ಈ ಸಂದರ್ಭದಲ್ಲಿ ಪುರಸಭೆ ಸದಸ್ಯರಾದ ವಿರಾಂಜಿನೇಯಲು,ಲಡ್ಡುಹೊನ್ನುರವಲಿ,ಮೌಲಾ,ಗ್ರಾಪಂ ಅಧ್ಯಕ್ಷ ಶ್ರೀನಿವಾಸುಲು,ಅಲ್ಪಸಂಖ್ಯಾತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಮಸ್ತಾನ ಕುರುಗೋಡು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭಂಗಿ ಮಲ್ಲಯ್ಯಮುಖಂಡರಾದ ಸುಧಾಕರ,ಸತ್ಯಪ್ಪ,ಷಣ್ಮುಕಪ್ಪ,ಮಾಯಪ್ಪ,ಬೂದಗುಂಪಿ ಹುಸೇನ್ ಸಾಬ್,ಬಿ.ವಿರುಪಾಕ್ಷಿ,ಯಾಳ್ಪಿ ಅಬ್ದುಲ್ ಮುನಾಫ,ರಘನಾಯಕ,ಸಣ್ಣಬಾಲೇಸಾಬ್,ಜಡೆಪ್ಪ,ಮಾಹಾಂತೇಶ,ವಿರೇಶ,ಹಬೀಬ್ ರೆಹಮಾನ್, ಚನ್ನಬಸಪ್ಪ,ಕಲ್ಗುಡಿವಿಜಯಪ್ಪ,ಅಂಬಣ್ಣ,ಜಾಫರ್,ಅಕ್ಕಿ ಜಿಲಾನ್,ಪುರಸಭೆ ಸದಸ್ಯರು ಹಾಗೂ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರು ಕಾರ್ಯಕರ್ತರು ಮಹಿಳಾ ಮುಖಂಡರು ನಿರೂಪಕ ವಿನೋದ ಉಪಸ್ಥಿತರಿದ್ದರು.ವರದಿ : ಚನ್ನಕೇಶವ
MLA JN Ganesh Bhoomi Pooja for construction of 100 bed hospital in Kampli
Completion March 18: A 100-bed taluk hospital is being built in collaboration with the Department of Health and Family Welfare, District Administration and Zilla Panchayat at a cost of 20 crores under the District Mineral Foundation grant scheme, near the Mini Vidhana Administration Building of Hospet Road No.10, Muddapur Gram, which was passed by worshiping at the Udbava Ganapati Temple of the Taluk. MLA J.N.Ganesha performed the Bhumi Puja of the building construction work.
Leaders K. M. Hemayyaswamy and Dr. A. C. Danappa said that there was a need for a well-equipped hospital with all facilities in Kampli taluk. People had to go to Bellary for their health emergency treatment. In such a situation, our MLAs, being in the opposition party and in office, decided to do something about a hundred-bed hospital. He said that the establishment is commendable.
Speaking at the felicitation program of JN Ganesha Fan Club, Kampli MLA JN. Ganesh had to go to Bellary where people needed urgent treatment in Kampli and Kurugodu areas and the pain of losing dear comrades from my constituency due to lack of beds due to the lack of proper treatment during the past two years during the covid outbreak is still bothering me. Ever since I decided to establish it, I have traveled to Bangalore and worked hard. Today it has been worthwhile. Somappa lake, 110 KV power plants, continuous drinking water project, development works and infrastructure roads have been developed to benefit the farmers of this area. He said that the Kurugodu festival will be celebrated in the coming days on the model of Kampli Utsav, no one's power is eternal but the love of the people is eternal.
On this occasion, Municipal Council members Viranjineyalu, Ladduhonnuravali, Maula, Gram President Srinivasulu, Minority Block Congress President K. Mastana Kurugodu Block Congress President Bhangi Mallayamukhanda Sudhakara, Satyappa, Shanmukappa, Mayappa, Budagumpi Hussain Saab, B. Virupakshi, Yalpi Abdul Munafa, Raghanayaka were present.Reported By : Channakeshav