ಎಸ್ ಎಸ್ ಎಲ್ ಸಿ ಪರೀಕ್ಷೆ : ಕಂಪ್ಲಿ ತಾಲೂಕಿನಲ್ಲಿ, 23 ವಿದ್ಯಾರ್ಥಿಗಳು ಗೈರು.
ಕಂಪ್ಲಿ
ಇಂದಿನಿಂದ ಎಸ್ ಎಸ್ ಎಲ್ ಸಿ ಪರೀಕ್ಷೆ ಪ್ರಾರಂಭವಾಗಿದ್ದು ಅಖಂಡ ಕಂಪ್ಲಿ ತಾಲೂಕಿನಲ್ಲಿ ಕನ್ನಡ ಪ್ರಥಮ ಭಾಷಾ ಪರೀಕ್ಷೆಗೆ ಇಂದು 23 ವಿದ್ಯಾರ್ಥಿಗಳು ಪರೀಕ್ಷೆಗೆ ಗೈರಾಗಿದ್ದಾರೆ ಎಂದು ಬಿಇಓ ಕಚೇರಿ ಮೂಲಗಳು ತಿಳಿಸಿವೆ.
ಒಟ್ಟು 1651 ನೊಂದಣಿಯಾದ ವಿದ್ಯಾರ್ಥಿಗಳಲ್ಲಿ ಇಂದು ಕನ್ನಡ ಪ್ರಥಮ ಭಾಷೆಗೆ ಹಾಜರಾದ 1628 ಹಾಗೂ 23 ವಿದ್ಯಾರ್ಥಿಗಳು ಇಂದಿನ ಪರೀಕ್ಷೆಗೆ ಗೈರು ಹಾಜರಾಗಿದ್ದರೆಂದು ಕಚೇರಿ ಮೂಲಗಳಿಂದ ತಿಳಿದಿದೆ.
ಪರೀಕ್ಷಾ ಕೇಂದ್ರದಲ್ಲಿ ಬಿಗಿ : ಪರೀಕ್ಷಾ ಕೇಂದ್ರದ ಸುತ್ತ ಮುತ್ತ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಿ ಪರೀಕ್ಷೆ ಅಕ್ರಮ ನಡೆಯದಂತೆ ತಡೆಯಲಾಗಿತ್ತು.
ವರದಿ : ಚನ್ನಕೇಶವ
Tags
ಟಾಪ್ ನ್ಯೂಸ್