ಕಂಪ್ಲಿ,ಮಾ.31: ವಿದ್ಯಾರ್ಥಿ ಜೀವನದ
ಮಹತ್ತರ ಘಟ್ಟವಾದ ಹತ್ತನೇ ತರಗತಿ
ಪರೀಕ್ಷೆಗಳು ಶುಕ್ರವಾರ ಆರಂಭವಾಗಿದ್ದು,
ತಾಲ್ಲೂಕಿನ 6 ಕೇಂದ್ರಗಳಲ್ಲಿ ಮೊದಲ
ದಿನದ ಪರೀಕ್ಷೆ ಸುಸೂತ್ರವಾಗಿ ಜರುಗಿದ್ದು,
ಪರೀಕ್ಷೆಗೆ ವಿದ್ಯಾರ್ಥಿಗಳು ಉತ್ಸಾಹದಿಂದ
ಆಗಮಿಸಿದ್ದು, ತಾಲ್ಲೂಕಿನ ಪರೀಕ್ಷೆಗೆ
ನೋಂದಾಯಿಸಿದ ವಿದ್ಯಾರ್ಥಿಗಳು ಹಾಜರಾಗಿದ್ದಾರೆ.
ತಾಲ್ಲೂಕಿನ ಕಂಪ್ಲಿ ಪಟ್ಟಣದಲ್ಲಿ ನಾಲ್ಕು,ರಾಮಸಾಗರ ಮತ್ತು ಎಮ್ಮಿಗನೂರು ಗ್ರಾಮಗಳಲ್ಲಿ ತಲಾ ಒಂದು ಪರೀಕ್ಷಾ ಕೇಂದ್ರವನ್ನು ರೂಪಿಸಲಾಗಿತ್ತು.
ಪರೀಕ್ಷಾ ಕೇಂದ್ರದಲ್ಲಿ ನೋಂದಾಯಿತ 287
ವಿದ್ಯಾರ್ಥಿಗಳಲ್ಲಿ 266 ವಿದ್ಯಾರ್ಥಿಗಳು
ಹಾಜರಾಗಿದ್ದು,19 ವಿದ್ಯಾರ್ಥಿಗಳು
ಗೈರಾಗಿದ್ದಾರೆಂದು ಪರೀಕ್ಷಾ ಕೇಂದ್ರದ
ಮುಖ್ಯಸ್ಥರಾದ ಅರುಣ ತಿಳಿಸಿದರು.
ಪಟ್ಟಣದ ಷಾಮಿಯಾಚಂದ್ ಪರೀಕ್ಷಾ ಕೇಂದ್ರದಲ್ಲಿ
ನೋಂದಾಯಿತ 369 ವಿದ್ಯಾರ್ಥಿಗಳ ಪೈಕಿ 369 ವಿದ್ಯಾರ್ಥಿಗಳು ಹಾಜರಾಗಿದ್ದು, ಯಾವ ವಿದ್ಯಾಥಿಗಳು
ಗೈರಾಗಿಲ್ಲ ಎಂದು ಪರೀಕ್ಷಾ ಕೇಂದ್ರದ
ಮುಖ್ಯಸ್ಥರಾದ ಶಕುಂತಲಾ ತಿಳಿಸಿದರು.
ಬಾಲಕಿಯರ ಸರ್ಕಾರಿ ಪದವಿ ಪೂರ್ವ
ಮಹಾವಿದ್ಯಾಲಯದ ಪರೀಕ್ಷಾ ಕೇಂದ್ರದಲ್ಲಿ
ನೋಂದಾಯಿತ 423ವಿದ್ಯಾರ್ಥಿಗಳಲ್ಲಿ
421 ವಿದ್ಯಾರ್ಥಿಗಳು ಹಾಜರಾಗಿದ್ದು.02
ವಿದ್ಯಾರ್ಥಿಗಳು ಗೈರಾಗಿದ್ದಾರೆಂದು ಪರೀಕ್ಷಾ
ಕೇಂದ್ರದ ಮುಖ್ಯಸ್ಥರಾದ ಉಪಪ್ರಾಚಾರ್ಯ
ಬಸವರಾಜ್ ಪಾಟೀಲ್ ತಿಳಿಸಿದರು.
ಪ್ರೌಢಶಾಲೆಯ ಪರೀಕ್ಷಾ ಕೇಂದ್ರದಲ್ಲಿ
ನೋಂದಾಯಿತ 304 ವಿದ್ಯಾರ್ಥಿಗಳಲ್ಲಿ
302 ವಿದ್ಯಾರ್ಥಿಗಳು ಹಾಜರಾಗಿದ್ದು, 02
ವಿದ್ಯಾರ್ಥಿಗಳು ಗೈರಾಗಿದ್ದಾರೆಂದು ಪರೀಕ್ಷಾ
ಕೇಂದ್ರದ ಮುಖ್ಯಸ್ಥರಾದ ಗಂಗಾಧರಯ್ಯ
ತಿಳಿಸಿದರು.
ವಿಜಯನಗರ ಪ್ರೌಢಶಾಲೆಯ ಪರೀಕ್ಷಾ
ಕೇಂದ್ರದಲ್ಲಿ ನೋಂದಾಯಿತ 272ವಿದ್ಯಾರ್ಥಿಗಳಲ್ಲಿ 271 ವಿದ್ಯಾರ್ಥಿಗಳು ಹಾಜರಾಗಿದ್ದು,
01 ವಿದ್ಯಾರ್ಥಿಗಳು ಗೈರಾಗಿದ್ದಾರೆಂದು ಪರೀಕ್ಷಾ ಕೇಂದ್ರದ ಮುಖ್ಯಸ್ಥರಾದ ಗಾಯತ್ರಿ ತಿಳಿಸಿದರು.
ನೋಂದಾಯಿತ 248 ವಿದ್ಯಾರ್ಥಿಗಳಲ್ಲಿ 247 ವಿದ್ಯಾರ್ಥಿಗಳು ಹಾಜರಾಗಿದ್ದು, 01
ವಿದ್ಯಾರ್ಥಿಗಳು ಗೈರಾಗಿದ್ದಾರೆಂದು ಪರೀಕ್ಷಾ ಕೇಂದ್ರದ ಮುಖ್ಯಸ್ಥರಾದ ಎ.ಜೈನಾಬಿ ತಿಳಿಸಿದರು.
ಎಲ್ಲಾ ವಿದ್ಯಾರ್ಥಿಗಳನ್ನು ಆರೋಗ್ಯ ಇಲಾಖೆ
ಸಿಬ್ಬಂದಿಗಳು ಮತ್ತು ಆಶಾ ಕಾರ್ಯಕರ್ತೆಯರು ಆರೋಗ್ಯ ತಪಾಸಣೆ ಮಾಡಿದರು.
ಪರೀಕ್ಷಾ ಕೇಂದ್ರಗಳ ಸುತ್ತ 200 ಮೀ.
ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿ ಮಾಡಿದ್ದು,
ಪಿಐ ಸುರೇಶ್ ಎಚ್ ತಳವಾರ್.ಪಿಎಸ್‌ಐ
ವಿಜಯಪ್ರತಾಪ್ ಭೇಟಿ ನೀಡಿ ಪರಿಶೀಲನೆ
ನಡೆಸಿದರು. ಎಲ್ಲಾ ಕೇಂದ್ರಗಳಲ್ಲೂ
ವ್ಯಾಪಕಬಂದೋಬಸ್ತ್ ಏರ್ಪಡಿಸಿದ್ದರು.
ಪರೀಕ್ಷಾ ಕೇಂದ್ರಗಳಿಗೆ ತಹಶಿಲ್ದಾರರ ಗೌಸಿಯಾಬೇಗಂ ಮತ್ತು ತಾ.ಪಂ.ಇಒ ಕೆ.ಎಸ್.ಮಲ್ಲನಗೌಡ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಒಟ್ಟಾರೆ ಹತ್ತನೇ ತರಗತಿಯ ಮೊದಲ ದಿನದ ಪರೀಕ್ಷೆ ಯಾವುದೇ ಅಡ್ಡಿ ಆತಂಕಗಳು ಇಲ್ಲದೆ ಜರುಗಿದವು.
ವರದಿ : ಚನ್ನಕೇಶವ
Tags
ಟಾಪ್ ನ್ಯೂಸ್