ಕೊಪ್ಪಳ,: ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಅಗಳಕೇರಾ ಗ್ರಾಮದಲ್ಲಿ ಬಿಜೆಪಿ ಸರಕಾರದ ದುರಾಡಳಿತದಿಂದ ಬೇಸತ್ತು ಅನೇಕ ಯುವಕರು, ಹಿರಿಯ ಮುಖಂಡರು, ಮಹಿಳೆಯರು ಹಾಗೂ ಗ್ರಾಮಸ್ಥರು ಕ್ಷೇತ್ರದಲ್ಲಿನ ಜನಪರ ಅಭಿವೃದ್ಧಿ ಕೆಲಸ ಕಾರ್ಯಗಳನ್ನು ಮೆಚ್ಚಿ ಪಕ್ಷದ ತತ್ವ ಸಿದ್ದಾಂತವನ್ನು ಒಪ್ಪಿಕೊಂಡು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು. ಇದೇ ವೇಳೆ ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಮಾತನಾಡಿ, ಮೊದಲನೆಯದಾಗಿ ನಿಮ್ಮನ್ನೆಲ್ಲ ಆತ್ಮೀಯವಾಗಿ ಕಾಂಗ್ರೆಸ್ ಪಕ್ಷಕ್ಕೆ ಸ್ವಾಗತಿಸುತ್ತೇನೆ. ಕಾಂಗ್ರೆಸ್ ಪಕ್ಷದ ಜೊತೆಗೆ ಕೈ ಜೋಡಿಸಿರುವುದಕ್ಕೆ ನಿಮ್ಮೆಲ್ಲರಿಗೂ ಚಿರಋಣಿ ಎಂದರು. ಕಾಂಗ್ರೆಸ್ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ : ಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಸ್ಪಷ್ಟ ಬಹುಮತದಿಂದ ಆಡಳಿತಕ್ಕೆ ಬಂದು ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂಬ ಭರವಸೆಯನ್ನ ವ್ಯಕ್ತಪಡಿಸಿದರು. ಪಕ್ಷದಲ್ಲಿ ಹಿರಿಯ ಮುಖಂಡರಾದ ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ, ಡಿಕೆ ಶಿವಕುಮಾರ ಅವರು ಸೇರಿದಂತೆ ರಾಜ್ಯಮಟ್ಟದ ಎಲ್ಲಾ ನಾಯಕರು ಒಗ್ಗಟ್ಟಾಗಿ ಕೆಲಸ ನಿರ್ವಹಿಸಲಿದ್ದಾರೆ. ಕಾಂಗ್ರೆಸ್ ಪಕ್ಷದಿಂದ ಮಾತ್ರ ಜನಪರ ಸರ್ಕಾರ ನಡೆಸಲು ಸಾಧ್ಯ. ಬಿಜೆಪಿ ಸರ್ಕಾರದಿಂದ ಒಂದೇ ಒಂದು ಜನಪರ ಯೋಜನೆ ಮಂಜೂರು ಆಗಿಲ್ಲ. ಭ್ರಷ್ಟಾಚಾರದಿಂದ ತುಂಬಿ ತುಳುಕುತ್ತಿದೆ ಈಗಿನ ಬಿಜೆಪಿ ಸರ್ಕಾರಕ್ಕೆ ಅಭಿವೃದ್ದಿ ಅನ್ನೋದೆ ಮರಿಚಿಕೆ ಆಗಿದೆ. ಆದ್ದರಿಂದ ರಾಜ್ಯದ ಜನತೆ ತಿರ್ಮಾನ ಮಾಡಿದ್ದಾರೆ ಬಿಜೆಪಿಗೆ ತಕ್ಕ ಪಾಠ ಕಲಿಸುತ್ತಾರೆ ಎಂದು ಬಿಜೆಪಿಯ ವಿರುದ್ದ ಕಿಡಿಕಾರಿದರು.
ಕಾಂಗ್ರೆಸ್ ಸೇರ್ಪಡೆಗೊಂಡವರು: ಸಣ್ಣ ಹುಲಗಪ್ಪ ವಡ್ಡರ, ಹನಮಂತಪ್ಪ ಸಿಂದೋಗಿ, ಶೇಖರಪ್ಪ ಸಿಂದೋಗಿ, ಹರೀಶ ಸಿಂದೋಗಿ, ಫಕೀರಪ್ಪ ನಿಲೋಗಲ್, ವೆಂಕಟೇಶ ಬಳ್ಳಾರಿ, ಫಕೀರಪ್ಪ ದಪೇದರ, ಶರಣಪ್ಪ ಸದಾಶಿವಯ್ಯ, ರಮೇಶ ರಾಟಿ, ವಿರೇಶ ಕನಕಗಿರಿ, ಬಸವರಾಜ ಅಳವಂಡಿ, ನಾಗರಾಜ ಗಾಂಧಿ,ಶರಣಪ್ಪ ಕುಂಬಾರ, ಆನಂದ ಸಿಂದೋಗಿ, ಸಂತೋಷ ಆರ್ಯಾರ, ಹುಲ್ಲೇಶ ಶಾಸ್ತ್ರಿನಗರ, ಆಂಜಿನಪ್ಪ ಶಾಸ್ತ್ರಿನಗರ, ಹುಲಿಗೆವ್ವ ಕೊಪ್ಪಳ, ಲಕ್ಷ್ಮವ್ವ ಕೊಪ್ಪಳ, ಹನಮಂತಪ್ಪ ಲಾರಿ, ನಾಗರಾಜ ವಡ್ಡರ, ಯಲ್ಲಪ್ಪ ವಡ್ಡರ, ಪಾಂಡುರಂಗ ವಡ್ಡರ, ಹುಲಗಪ್ಪ ಬುಕ್ಕಸಾಗರ, ಪ್ರಶಾಂತ ವಡ್ಡರ, ಅನಿಲ ಸಿದ್ದಪ್ಪ ವಡ್ಡರ, ಸುಖಮನಿ ವಡ್ಡರ, ನಾಗರಾಜ ವಡ್ಡರ, ಪರಸಪ್ಪ ವಡ್ಡರ, ಹನಮಂತಪ್ಪ ಚೆನ್ನದಾಸರ ಸೇರಿದಂತೆ ಇನ್ನೂ ಅನೇಕ ಮುಖಂಡರು ಕಾಂಗ್ರೆಸ್ ಸೇರ್ಪಡೆಗೊಂಡರು. ಈ ಸಂದರ್ಭದಲ್ಲಿ
ಮಖಂಡರಾದ ಎಸ್.ಬಿ ನಾಗರಳ್ಳಿ, ಜುಲ್ಲು ಖಾದ್ರಿ, ಬಾಲಚಂದ್ರನ ಮುನಿರಬಾದ್, ವಿಶ್ವನಾಥರಾಜು, ಕನಕರಾಜ ಬುಳ್ಳಾಪುರ, ಭರಮಪ್ಪ ಮಂಗ್ಲಿ, ಹುಲಗಪ್ಪ ಗಡಾದ, ಚೆನ್ನಪಗೌಡ, ನಿಂಗಜ್ಜ ಶಹಾಪುರ, ನಾಗರಾಜ ಪಟವಾರಿ ವೆಂಕಟೇಶ ಟಿಪಿ, ಮಂಜುನಾಥ ಕತ್ತಿ, ನಾಗರಾಜ ಅಗಳಕೇರಿ, ಕೃಷ್ಣ ಗಡಾದ, ಅಶೋಕ ಹಿಟ್ನಾಳ, ವಕ್ತಾರ ಕುರಗೋಡ ರವಿ ಸೇರಿದಂತೆ ಅನೇಕರು ಇದ್ದರು.
ವರದಿ ಶಿವಕುಮಾರ್ ಹಿರೇಮಠ್
ಸಿದ್ದಿ ಟಿವಿ ಕೊಪ್ಪಳ