Koppal, ಮಾಜಿ ಶಾಸಕ ದೊಡ್ಡನಗೌಡ ಎಚ್ ಪಾಟೀಲ್ ಕಬಡ್ಡಿ ಉತ್ಸವ ಕಾರ್ಯಕ್ರಮ ಉದ್ಘಾಟಿಸಿದ ಸಂಸದ ಸಂಗಣ್ಣ ಕರಡಿ*

AD

 





ಕುಷ್ಟಗಿ ತಾಲೂಕು ಚಳಗೇರಾ ಗ್ರಾಮದಲ್ಲಿ ಮಂಗಳವಾರ ಸಂಜೆ ನಡೆದ *ಕರ್ನಾಟಕ ರಾಜ್ಯ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ರಿ ಬೆಂಗಳೂರು ಹಾಗೂ ಕೊಪ್ಪಳ ಬಾಗಲಕೋಟೆ ಗದಗ್ ತ್ರಿವಳಿ ಜಿಲ್ಲೆಗಳ ಅಮೆಚೂರು ಕಬಡ್ಡಿ ಅಸೋಸಿಯೇಷನ್ ಮತ್ತು ಶ್ರೀ ಸಂಗಮೇಶ್ವರ ಯುವಕ ಮಂಡಳಿ ಚಳಗೆರ ಇವರ ಸಂಯುಕ್ತ ಆಶ್ರಯದಲ್ಲಿ* ಮಂಗಳವಾರ ಗ್ರಾಮದ ಶ್ರೀ ರವೀಂದ್ರ ಕೋರಿ ಶೆಟ್ಟರ್ ಅವರ ಜಾಗೆ ಯಲ್ಲಿ ಮಾಜಿ ಶಾಸಕ ದೊಡ್ಡನಗೌಡ ಹೆಚ್ ಪಾಟೀಲ್ ಕಬ್ಬಡ್ಡಿ ಉತ್ಸವ ಹಮ್ಮಿಕೊಳ್ಳಲಾಗಿತ್ತು ಕೊಪ್ಪಳ ಸಂಸದರಾದ ಸಂಗಣ್ಣ ಕರಡಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಚಳಗೇರ ಗ್ರಾಮದಲ್ಲಿ ಅತಿ ಹೆಚ್ಚು ಕಬಡ್ಡಿ ಕ್ರೀಡಾಪಟುಗಳನ್ನು ಹೊಂದಿದ್ದು ತಾಲೂಕು ಜಿಲ್ಲಾ ಮತ್ತು ರಾಜ್ಯಮಟ್ಟದವರೆಗೂ ಕ್ರೀಡೆಯನ್ನು ತೆಗೆದುಕೊಂಡು ಹೋಗುವ ಕ್ರೀಡಾಪಟುಗಳು ಚಳಗೇರಿ ಗ್ರಾಮದಲ್ಲಿ ಇದ್ದು ಸಂತೋಷದ ಸಂಗತಿ ಎಂದು ಬಣ್ಣಿಸಿದರು ಪ್ರತಿಯೊಂದು ಆಟದಲ್ಲಿ ವಿವಿಧತೆಯಲ್ಲಿ ಏಕತೆಯನ್ನು ಕಾಣುತ್ತಿದ್ದು ಇಂಥ ಕ್ರೀಡಾ ಮನೋಭಾವ ಉಳ್ಳ ಯುವಕರನ್ನು ಮಾಜಿ ಶಾಸಕ ದೊಡ್ಡನಗೌಡ ಎಚ್ ಪಾಟೀಲ್ ಅವರು ಪ್ರೋತ್ಸಾಹಿಸಿ ಕಬಡ್ಡಿ ಆಟಗಾರರಿಗೆ ಪ್ರೇರೇಪಿಸುವಂತ ಶಕ್ತಿ ತುಂಬಿದ್ದಾರೆ ಎಂದು ಸಂತೋಷದ ವಿಷಯ ಎಂದು ಅಭಿಪ್ರಾಯಪಟ್ಟರು

ಇದೇ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಮಾಜಿ ಶಾಸಕ ದೊಡ್ಡನಗೌಡ ಎಚ್ ಪಾಟೀಲ್ ಮಾತನಾಡಿ ಆಗ ನೆಲದ ಮೇಲೆ ಕಬಡ್ಡಿ ಆಟ ಆಡುತ್ತಿದ್ದೆವು ಈಗ ಮ್ಯಾಟ್ ಮೇಲೆ ಕಬಡ್ಡಿ ಆಡುತ್ತಿದ್ದೇವೆ ಆಗಿನ ಕ್ರೀಡಾಕೂಟಕ್ಕೆ ಈಗಿನ ಕ್ರೀಡಾಕೂಟಕ್ಕೆ ತುಂಬಾ ವ್ಯತ್ಯಾಸವಿದೆ ಕ್ರೀಡೆಯಲ್ಲಿ ಸೋಲು ಮತ್ತು ಗೆಲುವನ್ನು ಸಮನಾಗಿ ಸ್ವೀಕರಿಸಬೇಕೆಂದು ಕ್ರೀಡಾಪಟುಗಳಲ್ಲಿ ಮನವಿ ಮಾಡಿದರು

 ಚಳಗೇರಿ ಶ್ರೀ ಮಠದ ಶ್ರೀ ಷಡಕ್ಷರ ಬ್ರಹ್ಮ 108 ಶ್ರೀ ವೀರಸಂಗಮೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು ಕುಷ್ಟಗಿ ತಾಲೂಕು ಭಾರತೀಯ ಜನತಾ ಪಕ್ಷದ ಅಧ್ಯಕ್ಷರಾದ ಬಸವರಾಜ್ ಹಳ್ಳೂರ್ ಜ್ಯೋತಿ ಬೆಳಗಿಸಿ ಕಾರ್ಯಕ್ರಮ ಉದ್ದೇಶಿ ಮಾತನಾಡಿ ಗ್ರಾಮೀಣ ಪ್ರದೇಶದಲ್ಲಿ ಇಂಥ ಬೃಹತ್ ಮಟ್ಟದ ಕ್ರೀಡಾಕೂಟವನ್ನು ಆಯೋಜನೆ ಮಾಡಿದ್ದು ಸ್ಫೂರ್ತಿ ದಾಯಕವಾಗಿದೆ ಎಂದು ಹೇಳಿದರು

  ಪ್ರಮುಖರಾದ ಪ್ರಭಾಕರ್ ಚಿಣಿ ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಕೆ ಮಹೇಶ್ ವಿಜಯಕುಮಾರ್ ಹಿರೇಮಠ ದಲಿತ ಸಮಾಜದ ಮುಖಂಡರಾದ ನಾಗರಾಜ್ ಮೇಲಿನಮನಿ ಪರಶುರಾಮ್ ನಾಗರಾಳ ನಾಗರಾಜ್ ಭೋವಿ ಬಿಜೆಪಿ ಮಹಿಳಾ ಘಟಕದ ತಾಲೂಕು ಅಧ್ಯಕ್ಷ ಪರಿಮಳ ಶೆಟ್ಟರ್ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಮಹಾಂತೇಶ್ ಹಡಪದ್ ಚಳಗೇರಿ ಗ್ರಾಮ ಪಂಚಾಯತಿ ಬಿಜೆಪಿ ಪಕ್ಷದ ಸರ್ವ ಸದಸ್ಯರು ಕರ್ನಾಟಕ ರಾಜ್ಯ ಅಮೆಚೂರ್ ಕಬಡ್ಡಿ ಅಸೋಸಿಯಷೆನ್ಸ್ ರಿ ಪದಾಧಿಕಾರಿಗಳು ಬಿಜೆಪಿ ಪಕ್ಷದ ಮುಖಂಡರು ದೊಡ್ಡನಗೌಡ ಎಚ್ ಪಾಟೀಲ್ ಅಭಿಮಾನಿಗಳು ಕಾರ್ಯಕರ್ತರು ಹಾಗೂ ಸಮಸ್ತ ಕ್ರೀಡಾ ಅಭಿಮಾನಿಗಳು ಪಾಲ್ಗೊಂಡಿದ್ದರು

 ಕಾರ್ಯಕ್ರಮವನ್ನು ಮಹಾಲಿಂಗಪ್ಪ ದೋಟಿಹಾಳ ನಿರೂಪಿಸಿದರು ಬಸವರಾಜ್ ಬಾಗ್ಯದ ಸ್ವಾಗತಿಸಿದರು ಬಿಜಾಪುರು ಬೆಳಗಾವಿ ಬಾಗಲಕೋಟೆ, ಕೊಪ್ಪಳ ರಾಯಚೂರು ಗದಗ್ ಧಾರವಾಡ ಬಳ್ಳಾರಿ ಇನ್ನೂ ಅನೇಕ ವಿವಿಧ ಜಿಲ್ಲೆಗಳಿಂದ ಕ್ರೀಡಾಪಟುಗಳು ಆಗಮಿಸಿದ್ದರು

 *ಮಂಗಳವಾರ ಬುಧವಾರ ಗುರುವಾರ* ಮೂರು ದಿನಗಳ ಕಾಲ ಈ ಒಂದು ಕಾರ್ಯಕ್ರಮ ನಡೆಯಲಿದೆ ಎಂದು ಆಯೋಜಕರು ತಿಳಿಸಿದರು 

 *ಮಲ್ಲಿಕಾರ್ಜುನ್ ದೊಟಿಹಾಳ ಸಿದ್ದಿ ಟಿವಿ ನ್ಯೂಸ್ ಕುಷ್ಟಗಿ*

Contact For News&Ads

Siddi TV
Previous Post Next Post

Contact Form

f="https://unpkg.com/video.js/dist/video-js.css" rel="stylesheet">