ಇಂದು ಅಂಜನಾದ್ರಿ ಬೆಟ್ಟಕ್ಕೆ ಮಾನ್ಯ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಬಸವರಾಜ ಬೊಮ್ಮಾಯಿ ಅವರು ಹಾಗೂ ಸಚಿವರಾದ ಶ್ರೀ ಮುನಿರತ್ನ ಅವರು ಆಗಮಿಸಿದ್ದು, ಮುಖ್ಯಮಂತ್ರಿಗಳು ಅಂಜನಾದ್ರಿ ಸಾರ್ವಜನಿಕ ವಸತಿ ಕೊಠಡಿಯ ಅಡಿಗಲ್ಲು ಸಮಾರಂಭದ ಭೂಮಿ ಪೂಜೆ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಜನಪ್ರಿಯ ಶಾಸಕರಾದ ಪರಣ್ಣ ಮುನವಳ್ಳಿಯವರು ಅಂಜನಾದ್ರಿಗೆ ಬಂದಿಳಿದ ಮಾನ್ಯ ಮುಖ್ಯಮಂತ್ರಿಗಳನ್ನು ಸಚಿವರನ್ನ ತಮ್ಮ ಪ್ರೀತಿ ಮತ್ತು ಆಧಾರದಿಂದ ಸ್ವಾಗತಿಸಿದರು.
ಅಡಿಗಲ್ಲು ಭೂಮಿಪೂಜೆ ಸಮಾರಂಭದ ಮುಂಚೆ ಮಾನ್ಯ ಮುಖ್ಯ ಮಂತ್ರಿಗಳಾದ ಶ್ರೀ ಬಸವರಾಜ ಬೊಮ್ಮಾಯಿ ಅವರು ಅಂಜನಾದ್ರಿ ಬೆಟ್ಟದ ಕೆಳಗಿರುವ ಹನುಮನ ಮೂರ್ತಿಗೆ ವಿಶೇಷವಾದ ಪೂಜೆ ಸಲ್ಲಿಸುವ ಮೂಲಕ ಜನರ ಒಳಿತಿಗಾಗಿ ಪ್ರಾರ್ಥಿಸಿ ತಾವು ಆಶೀರ್ವಾದ ಪಡೆದುಕೊಂಡರು.
ಈ ಸಮಯದಲ್ಲಿ ಪರಿಸರ ಮತ್ತು ಪ್ರವಾಸೋದ್ಯಮ ಸಚಿವರಾದ ಆನಂದ ಸಿಂಗ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಮತ್ತು ಅಂಗವಿಕಲರು ಮತ್ತು ಹಿರಿಯ ನಾಗರಿಕರ ಸಬಲೀಕರಣ ಸಚಿವರಾದ ಹಾಲಪ್ಪ ಆಚಾರ್, ಲೋಕಸಭೆ ಸದಸ್ಯರಾದ ಸಂಗಣ್ಣ ಕರಡಿ, ಬಳ್ಳಾರಿ ಜಿಲ್ಲಾ ಸಹ ಪ್ರಭಾರಿಗಳಾದ ವಿರುಪಾಕ್ಷಪ್ಪ ಸಿಂಗನಾಳ, ಮತ್ತು ಭಾ.ಜ.ಪಾ. ನಗರ ಮಂಡಲದ ಅಧ್ಯಕ್ಷರಾದ ಕಾಶೀನಾಥ ಚಿತ್ರಗಾರ, ಗ್ತಾಮೀಣ ಮಂಡಲ ಅಧ್ಯಕ್ಷರಾದ ಚನ್ನಪ್ಪ ಮಳಗಿ ವಕೀಲರು, ಮುಖಂಡರಾದ ಜಿಲ್ಲಾ ಪಂಚಾಯತಿ ಸದಸ್ಯರಾದ ಸಿದ್ದರಾಮಯ್ಯ ಸ್ವಾಮಿ, ಸಂತೋಷ್ ಕೆಲೋಜಿ, ನೆಕ್ಕಂಟಿ ಸೂರಿಬಾಬು ವೆಂಕಟೇಶ್ ಅಮರಜ್ಯೋತಿ, ಹಾಗೂ ಅಧಿಕಾರಿಗಳು ಪಕ್ಷದ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು.
ವರದಿ : ಚನ್ನಕೇಶವ
Tags
ರಾಜಕೀಯ