ಸಂಜೀವಿನಿ ಮೇಳಕ್ಕೆ ಚಾಲನೆ ನೀಡಿದ ಜಿಪಂ ಸಿಇಓ ರಾಹುಲ್ ರತ್ನಂ ಪಾಂಡೆಯ
ಕೊಪ್ಪಳ,: ನಗರದ ಜಿಲ್ಲಾ ತೋಟಗಾರಿಕೆ ಇಲಾಖೆಯ ಆವರಣದಲ್ಲಿ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ಯ ಇಲಾಖೆ, ಸಂಜೀವಿನಿ ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನಾ ಸಂಸ್ಥೆ ಬೆಂಗಳೂರು, ಜಿಲ್ಲಾ ಪಂಚಾಯತ ಇವರ ಸಂಯುಕ್ತಾಶ್ರಯದಲ್ಲಿ ಮಾ.16 ರಿಂದ ಮಾ.19 ವರೆಗೆ ಜಿಲ್ಲಾ ಮಟ್ಟದ ಸಂಜೀವಿನಿ ವ್ಯಾಪಾರ ಮೇಳ ವನ್ನು ಜಿಪಂ ಸಿಇಓ ರಾಹುಲ್ ರತ್ನಂ ಪಾಂಡೆಯ ರವರು ಚಾಲನೆ ನೀಡಿದರು.
ಕೊಪ್ಪಳ ಜಿಲ್ಲೆಯ ಎಲ್ಲಾ ತಾಲೂಕ, ಗ್ರಾಮ ಪಂಚಾಯತ ಮಟ್ಟದ ಒಕ್ಕೂಟದ ಸ್ವ-ಸಹಾಯ ಸಂಘಗಳ ಮಹಿಳೆಯರು ತಾವೇ ತಯಾರಿಸಿ, ಉತ್ಪಾದಿಸಿದ ಉತ್ಪನ್ನಗಳನ್ನು ಪ್ರದರ್ಶನಕ್ಕೆ ಹಾಗೂ ಮಾರಾಟ ನಡೆಯಲಿದೆ. ಜಿಲ್ಲಾ ಮಟ್ಟದ ಸಂಜೀವಿನಿ ವ್ಯಾಪಾರ ಮೇಳದಲ್ಲಿ ಜಿಲ್ಲೆಯ ಸುಮಾರು 30ಕ್ಕೂ ಹೆಚ್ಚು ಸ್ವ-ಸಹಾಯ ಗುಂಪಿನ ಮಹಿಳೆಯರು ತಾವೇ ಸ್ಥಳೀಯವಾಗಿ ಉತ್ಪಾದಿಸಿದ ಉತ್ಪನ್ನಗಳನ್ನು ನೇರವಾಗಿ ಗ್ರಾಹಕರಿಗೆ ತಲುಪಿಸಲು ನಿಟ್ಟಿನಲ್ಲಿ ಅಗತ್ಯ ಮಾರುಕಟ್ಟೆಯ ಉತ್ತಮ ಅವಕಾಶ ಕಲ್ಪಿಸಿ, ಉತ್ಪನ್ನಗಳನ್ನು ಪ್ರದರ್ಶನಕ್ಕೆ ಹಾಗೂ ಮಾರಾಟಕ್ಕೆ ಇರಿಸಲಾಗಿದೆ. ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ ಕಾರ್ಯಲಯದ ಅಧಿಕಾರಿಗಳಾದ
ಸಮೀರ್ ಮುಲ್ಲಾ, ಕೃಷ್ಣಮೂರ್ತಿ, ತೋಟಗಾರಿಕೆ ಅಧಿಕಾರಿ ಕೃಷ್ಣ ಉಕ್ಕುಂದ್, ಸಂಜೀವಿನಿ ಯೋಜನೆಯ ಜಿಲ್ಲಾ ಮತ್ತು ತಾಲ್ಲೂಕು ಸಿಬ್ಬಂದಿಗಳು ಹಾಗೂ ಸ್ವ-ಸಹಾಯ ಗುಂಪುಗಳ ಮಹಿಳೆಯರು ಭಾಗವಹಿಸಿದ್ದರು.
The Sanjeevini Mela was initiated by the CEO of the GP, Rahul Ratnam Pandey
Koppal,: District Level Sanjeevini Business Fair from March 16 to March 19 at Sanjeevini Karnataka State Rural Livelihood Development Institute Bangalore, Zilla Panchayat in the compound of Skill Development, Entrepreneurship and Livelihood Department and State Department of Rural Development and Panchayat, Zilla Panchayat in the premises of the city. Rahul Ratnam Pandey gave the drive.
The products made and produced by the women of all taluk and gram panchayat level union self-help societies of Koppal district will be exhibited and sold. At the district level Sanjeevini trade fair, more than 30 self-help groups of women in the district have placed their products on display and sale, providing a better opportunity for the necessary market to directly deliver the locally produced products to the consumers. Zilla Panchayat office officials in the program
Sameer Mulla, Krishnamurthy, Horticulture Officer Krishna Ukkund, District and Taluk staff of Sanjeevini Yojana and women from Self Help Groups participated.