Koppal : ಜ್ಞಾನ ಬಂಧು ಶಾಲೆಯಲ್ಲಿ ಪದವಿ ಪ್ರದಾನ ಸಮಾರಂಭ

ಜ್ಞಾನ ಬಂಧು ಶಾಲೆಯಲ್ಲಿ ಪದವಿ ಪ್ರದಾನ ಸಮಾರಂಭ
ಕೊಪ್ಪಳ,: ಮಕ್ಕಳ ಶೈಕ್ಷಣಿಕ ಹಂತದಲ್ಲಿ ಪದವಿ ಪ್ರದಾನ ಕಾರ್ಯಕ್ರಮ ಸ್ಮರಣಿಯವಾಗಿದ್ದು ಇಂದಿನ ಮಕ್ಕಳು, ಪಾಲಕರು ಶಿಕ್ಷಣದ ಪ್ರಾಮುಖ್ಯತೆಯನ್ನು ಅರಿತು ಶಿಕ್ಷಣವನ್ನು ಪಡೆಯುವತ್ತ ಸಮಾಜದಲ್ಲಿ ಗೌರವಯುತ ಸ್ಥಾನ ಗಳಿಸುವತ್ತ ಎಲ್ಲರ ಗಮನವಿದೆ ಎಂದು ನಿವೃತ್ತ ಮುಖ್ಯೋಪಾಧ್ಯಾರಾದ ಮಾಲಾ ಬಡಿಗೇರ ಹೇಳಿದರು.
ತಾಲೂಕಿನ ಭಾಗ್ಯನಗರ ಪಟ್ಟಣದ ಜ್ಞಾನ ಬಂಧು ಶಾಲೆಯಲ್ಲಿ ನಡೆದ 2022-23 ನೇ ಸಾಲಿನ ಯು.ಕೆ.ಜಿ. ಮಕ್ಕಳ ಪದವಿ ಪ್ರಧಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿ, ಪದವಿ ಎಂಬುದು ಕೇವಲ ಶೈಕ್ಷಣಿಕ ಮಾನದಂಡವಲ್ಲ ಅದು ವಿದ್ಯಾರ್ಥಿಯ ಶೈಕ್ಷಣಿಕ ಉನ್ನತಿಯನ್ನ ಸೂಚಿಸುವುದಾಗಿದೆ. ಚಿಕ್ಕ ಮಕ್ಕಳು ತಮ್ಮ ಬಾಲ್ಯ ಶಿಕ್ಷಣವನ್ನ ಮುಗಿಸಿ ನಿಜವಾದ ಶಾಲಾ ಜೀವನಕ್ಕೆ ಹೆಜ್ಜೆ ಇಡುತ್ತಿರುವಲ್ಲಿ ಹಮ್ಮಿಕೊಂಡ ಈ ಪದವಿ ಪ್ರದಾನ ಸಮಾರಂಭವನ್ನು ಅರ್ಥಪೂರ್ಣವಾಗಿದೆ ಎಂದು ಹೇಳಿದರು.
 ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶಾಲಾ ಅಧ್ಯಕ್ಷ ದಾನಪ್ಪ ಕವಲೂರ ಮಾತನಾಡಿ ಮಗುವನ್ನು ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಸಧೃಢಗೊಳಿಸುವ ಅಪರಿಮಿತ ಜವಬ್ದಾರಿ ಪಾಲಕ ಮತ್ತು ಶಿಕ್ಷಕರ ಮೇಲಿದೆ. ಎಳೆವಯಸ್ಸಿನಲ್ಲಿಯೇ ಮಕ್ಕಳಿಗೆ ಶಿಕ್ಷಣದ ಭದ್ರ ಬೂನಾದಿ ಹಾಕಿದ್ದಲ್ಲಿ ಅವರು ಭವಿಷ್ಯದಲ್ಲಿ ಉತ್ತಮ ಪ್ರಜೆಯಾಗುತ್ತಾನೆ ಎಂದರು. 
ಪ್ರಾಂಶುಪಾಲ ವಿಶ್ವನಾಥ ಜಿ.ಎಸ್. ಮಾತನಾಡಿ, ಮಕ್ಕಳಿಗೆ ಶುಭಾಷಯಗಳನ್ನು ತಿಳಿಸಿ ಮುಂದಿನ ಭವಿಷ್ಯದ ಶೈಕ್ಷಣಿಕ ಜೀವನಕ್ಕೆ ಯಶಸ್ಸಿನಿಂದ ಕೂಡಿರಲಿ ಎಂದು ಹಾರೈಸಿದರು. ಇದೆ ಸಂದರ್ಭದಲ್ಲಿ ಯುಕೆಜಿ ವಿದ್ಯಾರ್ಥಿಗಳು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಪಾಲಕರು ಹಾಗೂ ಶಿಕ್ಷಕರು ವಿದ್ಯಾರ್ಥಿಗಳಿಗೆ ಹಿತನುಡಿಗಳನ್ನು ಹೇಳಿದರು. ಮಕ್ಕಳು ಪದವಿ ಪ್ರದಾನ ಸಮಾರಂಭದ ವೇಷಭೂಷಣ ಧರಸಿ ಉತ್ಸಾಹದಿಂದ ಭಾಗವಹಿಸಿ ಪದವಿ ಪ್ರಮಾಣ ಪತ್ರ ಪಡೆದು ಖುಷಿಪಟ್ಟರು.
ಪ್ರಾಂಶುಪಾಲರಾದ ಮಂಜುನಾಥ ಜಕ್ಕಲಿ, ಉಪಪ್ರಾಂಶುಪಾಲರಾದ ಜ್ಯೋತಿ ಎಸ್.ಎಸ್., ಸಿಬ್ಬಂದವೃಂದ, ವಿದ್ಯಾರ್ಥಿಗಳು ಇದ್ದರು. ಶಿಕ್ಷಕಿರಾದ ಜ್ಯೋತಿ ಪಾಟೀಲ್ ನಿರೂಪಿಸಿ, ಭೂಮಿಕಾ ಹಾಗೂ ನಿಖಿತಾ ಮಟ್ಟಿ ಸ್ವಾಗತಿಸಿ ವಂದಿಸಿದರು.

ವರದಿ : ಶಿವಕುಮಾರ ಹಿರೇಮಠ
Graduation Ceremony at Jnana Bandhu School
Koppala,: The graduation program at the educational level of children is memorable as today's children and parents are aware of the importance of education and everyone is focused on getting education to earn a respectable position in the society, said Mala Badigera, a retired head teacher.
2022-23 U.K.G held at Gnana Bandhu School in Bhagyanagar town of taluk. Inaugurating the children's graduation program, he said that graduation is not only an academic standard but also indicates the academic progress of the student. He said that this graduation ceremony was meaningful as the young children completed their childhood education and stepped into real school life. School president Danappa Kavalura, who presided over the ceremony, said that parents and teachers have an unlimited responsibility to strengthen the child academically and socially. He said that if children are given a solid foundation of education at a young age, they will become better citizens in the future. Principal Vishwanath G.S. He spoke and wished the children success in their future academic life. On this occasion UKG students shared their views. Parents and teachers gave good words to the students. The children dressed up in the graduation ceremony and participated enthusiastically and were delighted to receive their graduation certificates.
Principal Manjunath Jakkali, Vice Principal Jyoti SS, Sibbandavrinda, students were present. Teacher Jyoti Patil narrated, Bhumika and Nikita Matti welcomed and thanked.

Reported By : Shivakumar Hiremath


Previous Post Next Post

AD

 


Contact For News&Ads

Siddi TV

Contact Form

f="https://unpkg.com/video.js/dist/video-js.css" rel="stylesheet">