ಕೊಪ್ಪಳ,: ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸಂಸ್ಥಾಪಕ ಅಧ್ಯಕ್ಷರಾದ ಗಾಲಿ ಜನಾರ್ಧನ ರೆಡ್ಡಿ ಅವರು ಗಂಗಾವತಿ ವಿಧಾನಸಭಾ ಕ್ಷೇತ್ರದ ಗ್ರಾಮಗಳಾದ ಅರಶಿನಕೇರಿ, ಅರಶಿನಕೇರಿ ತಾಂಡಾ, ಜಿನ್ನಾಪುರ ಚಿಕ್ಕತಾಂಡಾ, ಜಿನ್ನಾಪುರ ದೊಡ್ಡತಾಂಡಾ, ಜಿನ್ನಾಪುರ, ಗೊಸಲದೊಡ್ಡಿ, ಚಾಮಲಾಪುರ, ಕೊಡದಾಳ ಗ್ರಾಮಗಳಿಗೆ
ಮೂರನೇ ದಿನದ ಕಾರ್ಯಕ್ರಮದ ಅಂಗವಾಗಿ ಭೇಟಿ ನೀಡಿದರು. ಗ್ರಾಮದ ಜನತೆ ಹಾಗೂ ಬಂಜಾರ ಸಮಾಜದ ಮಹಿಳೆಯರು ನೃತ್ಯದ ಮೂಲಕ
ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸಂಸ್ಥಾಪಕ ಅಧ್ಯಕ್ಷರಾದ ಗಾಲಿ ಜನಾರ್ಧನ ರೆಡ್ಡಿ ಅವರನ್ನು ಅದ್ದೂರಿಯಾಗಿ ಸ್ವಾಗತಿಸಿದರು.
ಗ್ರಾಮದ ಜನತೆಯ ಕುಂದು ಕೊರತೆಗಳನ್ನು ವಿಚಾರಿಸಿ, ಪರಿಹಾರ ಒದಗಿಸುವ ಭರವಸೆ ನೀಡಿದರು. ಗ್ರಾಮಗಳ ದೇವಸ್ಥಾನಗಳಿಗೆ ಭೇಟಿ ನೀಡಿ ದೇವಸ್ಥಾನಗಳ ಜೀರ್ಣೋದ್ದಾರ ಮಾಡುವ ಭರವಸೆ ನೀಡಿದರು. ಹಲವು ವರ್ಷಗಳಿಂದ ವಿವಿಧ ಪಕ್ಷಗಳಲ್ಲಿದ್ದ ಮುಖಂಡರು ಉತ್ಸಾಹಿ ತರುಣರು ಕಲ್ಯಾಣ ರಾಜ್ಯ ಪ್ರಗತಿ ಪಕ್ಷಕ್ಕೆ ಸೇರ್ಪಡೆಯಾದರು. ಗ್ರಾಮದ ಮುಖ್ಯಸ್ಥರು, ಹಿರಿಯರು, ಯುವಕರು, ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.