ಹುಲಿಗಿ ಗ್ರಾಮ ಪಂಚಾಯತಿಯಿಂದ ವಿಶ್ವ ಜಲ ದಿನಾಚರಣೆ
ಕೊಪ್ಪಳ,: ವಿಶ್ವ ಜಲ ದಿನಾಚರಣೆ ಅಂಗವಾಗಿ ಕೊಪ್ಪಳ ತಾಲೂಕಿನ ಹುಲಿಗಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಬರುವ ಹಳೇನಿಂಗಾಪೂರ ಗ್ರಾಮದಲ್ಲಿ ವಿಶ್ವ ಜಲ ಸಂಜೀವಿನಿ ಗ್ರಾಮ ಸಭೆಯನ್ನು ಹಮ್ಮಿಕೊಳ್ಳಲಾಯಿತು.
ಪಿಡಿಒ ಪರಮೇಶ್ವರಯ್ಯ ಅವರು ಮಾತನಾಡಿ, ವರ್ಷದಿಂದ ವರ್ಷಕ್ಕೆ ನೀರಿನ ಬಳಕೆ ಹೆಚ್ಚಾಗುತ್ತಿದ್ದು, ಶುದ್ಧ ಕುಡಿಯುವ ನೀರಿಗಾಗಿ ಜನ ಪರಿತಪಿಸುವಂತಾಗುತದೆ ಈ ಹಿನ್ನೆಲೆಯಲ್ಲಿ ನೀರಿನ ಮಹತ್ವ ಹಾಗೂ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸಲು ವಿಶ್ವಸಂಸ್ಥೆ ಶ್ರಮಿಸುತ್ತಿದೆ. ಸುಸ್ಥಿರ ಅಂತರ್ಜಲ ಅಭಿವೃದ್ಧಿಗೆ ಪ್ರಸಕ್ತ ವರ್ಷ ಗ್ರಾಮ ಪಂಚಾಯತ್ ವತಿಯಿಂದ ಕೆರೆಯ ಹೂಳು ತೆಗೆಯುವುದು ರೈತರು ಪಂಪ್ ಸೆಟ್ ಗಳಿಗೆ ಬೋರ್ ವೆಲ್ ರಿಚಾರ್ಜ್ ಹಾಗೂ ರೈತರಿಗೆ ಕೂಲಿಕಾರರಿಗೆ ಇನ್ನಿತರ ಅನೇಕ ಕೆಲಸಗಳನ್ನು ಜಲ ಸಂರಕ್ಷಣೆ ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು, ನೀರನ್ನು ಅನಾವಶ್ಯಕವಾಗಿ ಬಳಸದೆ, ಮಿತವಾಗಿ ಬಳಕೆ ಮಾಡುವ ಮೂಲಕ ಭವಿಷ್ಯಕ್ಕಾಗಿ ನೀರನ್ನು ಸಂರಕ್ಷಿಸಬೇಕಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಹುಲಿಗಿ ಗ್ರಾಮ ಪಂಚಾಯತಿಯ ಅಧ್ಯಕ್ಷರಾದ ನಾಗರಾಜ ಮುದುಕಪ್ಪ ನರೆಗಲ್, ಕಾರ್ಯದರ್ಶಿ ನಾಗರಾಜ ಹಲಿಗೇರಿ, ಸದಸ್ಯರಾದ ವಿರುಪಾಕ್ಷಪ್ಪ, ಅಕ್ಷತಾ ಪಾಟಿಲ್, ಧರ್ಮಣ್ಣ ಪಲ್ಲೇದ, ಕೃಷ್ಣ, ಮಂಜುನಾಥ, ಗ್ರಾಮಸ್ಥರು ಹಾಗೂ ಅನೇಕರು ಇದ್ದರು.
ವರದಿ : ಶಿವಕುಮಾರ ಹಿರೇಮಠ