ಶ್ರೀಮಳೆಮಲ್ಲೇಶ್ವರ ದೇವಸ್ಥಾನ
ಪರಿಚಯ ಕಿರು ಹೊತ್ತಿಗೆ ಬಿಡುಗಡೆ
ಶ್ರೀಮಳೆಮಲ್ಲೇಶ್ವರ ದೇವಸ್ಥಾನದ
ಪರಿಚಯ ಪುಸ್ತಕ ಸುಕ್ಷೇತ್ರ ದರ್ಶನ" ಎಂಬ
ಕಿರು ಹೊತ್ತಿಗೆಯನ್ನ ಗವಿಮಠದ
ಶ್ರೀಗವಿಸಿದ್ದೇಶ್ವರ ಮಹಾಸ್ವಾಮಿಗಳವರು ಗುರುವಾರ ಬಿಡುಗಡೆಗೊಳಿಸಿದರು.
ಪುಸ್ತಕದ ಮುನ್ನುಡಿ ಪ್ರೊ ಶರಣಬಸಪ್ಪ ಬೆಳೆಯಲಿ ಅವರು ಬರೆದಿದ್ದಾರೆ, ಬೆನ್ನುಡಿಯನ್ನು ಕನ್ನಡ ಉಪನ್ಯಾಸಕ ಡಾ ಮಂಜುನಾಥ್ ಬಡಿಗೇರ್ ಅವರು ಬರೆದಿದ್ದಾರೆ.
ಈ ಸಂದರ್ಭದಲ್ಲಿ ಪುಸ್ತಕದ ಲೇಖಕ ಸಂಪಾದಕರಾದ ಶಿವನಗೌಡ ಪೊಲೀಸ್ ಪಾಟೀಲ್, ಶ್ರೀಮಳೆ ಮಲ್ಲೇಶ್ವರ ದೇವಸ್ಥಾನ ಸೇವಾ ಸಮಿತಿಯ ಗವಿಸಿದ್ದಯ್ಯ ಲಿಂಗಬಸಯ್ಯನಮಠ, ಶಿವು ಕೊಣಂಗಿ, ಸೇವಾ ಸಮಿತಿಯ ಸದಸ್ಯರು, ಬಸವರಾಜ್ ಮಳಗಿ, ರಮೇಶ್ ಕವಲೂರು, ಡಾ. ಬಸವರಾಜ ಕ್ಯಾವಟರ್. ಸುಕ್ಷೇತ್ರ ಮಳೆಮಲ್ಲೇಶ್ವರ ದೇವಸ್ಥಾನದ ಎಲ್ಲಾ ಸದ್ಭಕ್ತರು ಪಾಲ್ಗೊಂಡಿದ್ದರು.
ವರದಿ : ಶಿವಕುಮಾರ ಹಿರೇಮಠ