ಕೊಪ್ಪಳ,: ತಾಲೂಕಿನ ಹುಲಗಿ ಗ್ರಾಮದಲ್ಲಿ ಆದಿಜಗದ್ಗುರು ಶ್ರೀ ರೇಣುಕಾಚಾರ್ಯರ ಜಯಂತಿಯ ಗುರುವಾರ ಆಚರಿಸಲಾಯಿತು.
ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳ ರವರು ರೇಣುಕಾಚಾರ್ಯರ ಜಯಂತಿ
ಪ್ರಯುಕ್ತ ನಡೆದ ಮೆರವಣಿಗೆಯಲ್ಲಿ ಪಾಲ್ಗೊಂಡು ಶ್ರೀರೇಣುಕಾಚಾರ್ಯರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಜಗದ್ಗುರು ಶ್ರೀರೇಣುಕಾಚಾರ್ಯ ಅವರು ಸಿದ್ಧಾಂತ ಶಿಖಾಮಣಿಯಂತಹ ಮಹಾನ್ ಗ್ರಂಥವನ್ನು ಕೊಡುಗೆಯಾಗಿ ನೀಡಿದ್ದಾರೆ. ಸಾಮರಸ್ಯ, ಸಹಬಾಳ್ವೆ, ಸೌಹಾರ್ದತೆ ಬದುಕನ್ನು ಅವರು ಬೋಧಿಸಿದ್ದಾರೆ. ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದಾದ್ಯಂತ ಇವರು ಲಕ್ಷಾಂತರ ಭಕ್ತ ಸಮೂಹವನ್ನು ಹೊಂದಿದ್ದಾರೆ. ಸೌಹಾರ್ದ, ಸಹಬಾಳ್ವೆಯ ಮಹತ್ವವನ್ನು ನಾಡಿನ ಜನತೆಗೆ ಸಾರಿದವರು ಜಗದ್ಗುರು ರೇಣುಕಾಚಾರ್ಯರು ಎಂದರು.
ಗಿರೀಶ್ ಹಿರೇಮಠ, ವೀರಭದ್ರಯ್ಯ ಭೂಸನೂರ್ ಮಠ, ವಿಶ್ವನಾಥ್ ಹಿರೇಮಠ, ನಾಗಬಸಯ್ಯ,
ಮುಖಂಡರಾದ ಗವಿಸಿದ್ದಪ್ಪ ಕರಡಿ,
ಟಿ.ಜನಾರ್ಧನ ಹುಲಿಗಿ, ಹಂಪಯ್ಯಜ್ಜ, ಯಂಕಪ್ಪ ಹೊಸಳ್ಳಿ, ಈರಣ್ಣ ಹುಲಿಗಿ, ಶಿವು ಹುಲಿಗಿ, ಶಂಕರ್ ಪೂಜಾರ್, ಪಕೀರಸ್ವಾಮಿ ಕರ್ಕಿಹಳ್ಳಿ, ಸೇರಿದಂತೆ ಸಮಾಜದ ಮುಖಂಡರು, ಗುರು ಹಿರಿಯರು ಭಾಗವಹಿಸಿದ್ದರು.
ವರದಿ : ಶಿವಕುಮಾರ ಹಿರೇಮಠ
Tags
ಟಾಪ್ ನ್ಯೂಸ್