koppla, ಕುಷ್ಟಗಿ ತಾಲೂಕು ದೋಟಿಹಾಳ ಗ್ರಾಮದಲ್ಲಿ ವಿವಿಧ ಬೇಡಿಕೆಗೆ ಒತ್ತಾಯಿಸಿ ಪ್ರತಿಭಟನೆ*

*ಕುಷ್ಟಗಿ ತಾಲೂಕು ದೋಟಿಹಾಳ ಗ್ರಾಮದಲ್ಲಿ ವಿವಿಧ ಬೇಡಿಕೆಗೆ ಒತ್ತಾಯಿಸಿ ಪ್ರತಿಭಟನೆ*

ದಶಕಗಳಿಂದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ನಿರ್ಲಕ್ಷಕ್ಕೆ ಒಳಗಾಗಿರುವ ಕೇಸೂರ ಮತ್ತು ದೂಟಿಹಾಳ ಅವಳಿ ಗ್ರಾಮಗಳ ರಸ್ತೆ ದುರಸ್ತಿ ಕಾಣದೆ ಪ್ರಯಾಣಿಕರಿಗೆ ಹಾಗೂ ವಾಹನ ಸಂಚಾಲಕರಿಗೆ ತುಂಬಾ ತೊಂದರೆ ಅನುಭವಿಸುತ್ತಿದ್ದು ಈ ಒಂದು ವಿಷಯದ ಬಗ್ಗೆ ರಸ್ತೆಯನ್ನು ದುರಸ್ತಿಗೊಳಿಸಿ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕೆಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ಸಾಕಷ್ಟು ಬಾರಿ ಮನವಿ ಪತ್ರ ಸಲ್ಲಿಸಿದ್ದರು ನಿರ್ಲಕ್ಷಕ್ಕೆ ಒಳಗಾಗಿದ್ದು ಇದೊಂದು ನಾಚಿಕೆಗೇಡಿ ಸಂಗತಿ ಎಂದು ಹೈದರಾಬಾದ್ ಕರ್ನಾಟಕ ಯುವಶಕ್ತಿ ಸಂಘಟನೆ ಸಂಸ್ಥಾಪಕ ಅಧ್ಯಕ್ಷ ಬಸವರಾಜ್ ಗಾಣಿಗೇರ್ ಆಕ್ರೋಶ ವ್ಯಕ್ತಪಡಿಸಿದರು



 ಕುಷ್ಟಗಿ ತಾಲೂಕಿನ ದೋಟಿ ಹಾಳ ಗ್ರಾಮದಲ್ಲಿ ಪ್ರಮುಖ ಮೂರು ಬೇಡಿಕೆಗಳ ಅಕ್ಕೊತ್ತಾಯವನ್ನು ಈಡೇರಿಸುವಂತೆ ಹೈದರಾಬಾದ್ ಕರ್ನಾಟಕ ಯುವಶಕ್ತಿ ಹಾಗೂ ಕೃಷಿಕ ಸಮಾಜ ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆ ರೈತ ಸಂಘ ಹಸಿರು ಸೇನೆ ಪ್ರಗತಿಪರ ಸಂಘಟನೆಗಳ ನೇತೃತ್ವದಲ್ಲಿ ನಡೆದ ಪ್ರತಿಭಟನೆಯ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತಿದ್ದರು

 ದೋಟಿಹಾಳ ಗ್ರಾಮವು ಶೈಕ್ಷಣಿಕವಾಗಿ ಆರ್ಥಿಕವಾಗಿ ಭೌಗೋಳಿಕವಾಗಿ ಅಭಿವೃದ್ಧಿ ಹೊಂದುತ್ತಿರುವ ಬಹುದೊಡ್ಡ ಗ್ರಾಮವಾಗಿದ್ದು ದೋಟಿಹಾಳ ಕೇಸರು ನಡುವೆ ರಸ್ತೆ ಕಾಮಗಾರಿ ಅರ್ಧಕ್ಕೆ ನಿಂತು ಗಠಾರದಂತೆ ರಸ್ತೆ ಮಧ್ಯ ನೀರು ನಿಂತು ಎದ್ದು ಕಾಣುತ್ತಿದ್ದು ನಿತ್ಯ ಸಾವಿರಾರು ಜನರು ಈ ರಸ್ತೆ ಮಾರ್ಗವಾಗಿ ತೆರಳುತ್ತಿದ್ದು ತುಂಬಾ ತೊಂದರೆ ಅನುಭವಿಸುತ್ತಿದ್ದಾರೆ ಇದರ ಬೇಡಿಕೆಗಾಗಿ
ಮತ್ತು ದೋಟಿಹಾಳ ಗ್ರಾಮವನ್ನು ಹೋಬಳಿ ಕೇಂದ್ರವಾಗಿ ಘೋಷಣೆಗಾಗಿ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಮೇಲ್ದರ್ಜೆಗೇರಿಸಲು ಸಾಕಷ್ಟು ಬಾರಿ ಮನವಿ ಪತ್ರ ಸಲ್ಲಿಸಿದರು ಜನಪ್ರತಿನಿಧಿಗಳು ಅಧಿಕಾರಿಗಳು ಇನ್ನು ನಮ್ಮ ಬೇಡಿಕೆಗಳನ್ನು ಈಡೇರಿಸಿಲ್ಲ ಅದಕ್ಕಾಗಿ ವಿವಿಧ ಸಂಘಟನೆಗಳೊಂದಿಗೆ ತಾಲೂಕಿನ ಗೋತಗಿ ಗ್ರಾಮದ ಮಾಜಿ ಶಾಸಕ ದಿವಂಗತ ಕಾಂತರಾವ ದೇಸಾಯಿ ಅವರ ಮನೆಯಿಂದ ದೋಟಿಹಾಳದ ಅವಧೂತ ಸುಖಮನಿ ತಾತನವರ ದೇವಸ್ಥಾನದವರೆಗೂ ಸುಮಾರು 10 ಕಿ.ಮೀ ಪಾದಯಾತ್ರೆಯನ್ನು ಮಾಡುವ ಮೂಲಕ ವಿಶೇಷ ಪೂಜೆಯನ್ನು ಸಲ್ಲಿಸಿ ಗ್ರಾಮದಲ್ಲಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆವರಣದಲ್ಲಿ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ ಎರಡು ದಿನದಿಂದ ನಡೆದ ಪ್ರತಿಭಟನೆ ಕಾರ್ಯವು ಇನ್ನು ಮುಂದುವರೆದಿದ್ದು ಕೆಲವು ಅಧಿಕಾರಿಗಳಿಗೆ ನುಂಗಲಾರದ ತುತ್ತಾಗಿದೆ

 ಪ್ರತಿಭಟನೆಯ ಸುದ್ದಿ ತಿಳಿದ ಕುಷ್ಟಗಿ ತಾಲೂಕು ತಹಸಿಲ್ದಾರ್ ರಾಘವೇಂದ್ರ ಕುಲಕರ್ಣಿ ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿದ ಅವರು ಈಗಾಗಲೇ ದೋಟಿಹಾಳ ಕಂದಾಯ ಹೋಬಳಿ ರಚನಾ ಆದೇಶ ಯಾರಿಗೆ ಸಂಬಂಧಪಟ್ಟಂತೆ ಹೋಬಳಿ ಕೇಂದ್ರವನ್ನಾಗಿ ಘೋಷಣೆ ಮಾಡಲು ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿದ್ದು ಆರೋಗ್ಯ ಕೇಂದ್ರ ಮೇಲ್ದರ್ಜೆಗೇರಿಸಲು ಸರ್ಕಾರದ ಗಮನಕ್ಕೆ ತಂದಿದ್ದು ಕ್ರಮ ಕೈಗೊಳ್ಳುವ ಭರವಸೆಯ ಇದೆಯೆಂದು ಪ್ರತಿಭಟನಾ ನಿರತ ಸಂಘಟನೆಗಳ ಮನ ಹೊಲಿಸಲು ಪ್ರಯತ್ನಿಸಿದರು ಆದರೆ ಪಟ್ಟು ಬಿಡದ ಪ್ರತಿಭಟನೆಗಾರರು ಚುನಾವಣೆ ಅಧಿಸೂಚನೆ ಹೊರ ಬೀಳುವ ಮೊದಲೇ ಈ ಮೂರು ಬೇಡಿಕೆಗಳನ್ನು ಆದೇಶ ಪ್ರತಿ ನಮ್ಮ ಕೈ ಸೇರುವರಿಗೂ ತಮ್ಮ ಪ್ರತಿಭಟನೆ ಬಿಡುವುದಿಲ್ಲ ಎಂದು ಮುಂದುವರಿಸಿದರು ಮತ್ತು ಲೋಕೋಪ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಬೇಡಿಕೆ ಈಡೇರಿಸಬೇಕು ಎಂದು ಪಟ್ಟು ಹಿಡಿದರು ಇದೇ ವೇಳೆ ಪೊಲೀಸ್ ಇಲಾಖೆಯ ಸರ್ಕಲ್ ಇನ್ಸ್ಪೆಕ್ಟರ್ ನಿಂಗಪ್ಪ. ರುದ್ರಪ್ಪುಗೋಳ್ ಕಂದಾಯ ನಿರೀಕ್ಷಕರಾದ ಉಮೇಶ್ಗೌಡ ಪಾಟೀಲ್ ಹೈದರಾಬಾದ್ ಯುವ ಶಕ್ತಿ ಸಂಘಟನೆ ರಾಜ್ಯ ಕಾರ್ಯಧ್ಯಕ್ಷರಾದ ಕಿರಣ್ ಜ್ಯೋತಿ ಶ್ರೀನಿವಾಸ್ ಕಂಟ್ಲಿ ಪ್ರಗತಿಪರ ಹೋರಾಟಗಾರಾದ ಬಸವರಾಜ್ ಕಡಿವಾಲ ಪ್ರಕಾಶ್ ಅಂಗಡಿ ಪರಶುರಾಮ್ ಇಳಿಗೇರಾ ಮಂಜೂರು ಅಲಿ,ಬನ್ನು ಹಾಗು ದೋಟಿ ಹಾಳ ಹೋಬಳಿ ಹೋರಾಟ ಸಮಿತಿ ಇನ್ನು ಅನೇಕ ಸಂಘಟನಾಕಾರರು ಭಾಗವಹಿಸಿದ್ದರು

ಇದಕ್ಕೂ ಮೊದಲು ಮಹಾತ್ಮ ಗಾಂಧೀಜಿ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಅವರ ಭಾವಚಿತ್ರಗಳಿಗೆ ಪೂಜಿಸುವ ಮೂಲಕ ಪ್ರತಿಭಟನೆಯನ್ನು ಪ್ರಾರಂಭಿಸಿದರು 

 *ಮಲ್ಲಿಕಾರ್ಜುನ್ ದೋಟಿಹಾಳ ವರದಿಗಾರರು ಕುಷ್ಟಗಿ*
Previous Post Next Post

AD

 


Contact For News&Ads

Siddi TV

Contact Form

f="https://unpkg.com/video.js/dist/video-js.css" rel="stylesheet">