ವಿಜಯನಗರ ಸಾಮ್ರಾಜ್ಯದಂತೆ ಕಲ್ಯಾಣ ರಾಜ್ಯ ಪ್ರಗತಿ ಪಕ್ಷವು ದಿನದಿಂದ ದಿನಕ್ಕೆ ತನ್ನ ಸಂಘಟನೆ ಯನ್ನು ರಾಜ್ಯಾದ್ಯಂತ ಹಬ್ಬುತ್ತಿದೆ
ಕಲ್ಯಾಣ ರಾಜ್ಯ ಪ್ರಗತಿ ಪಕ್ಷವು ರಾಜ್ಯಾದ್ಯಂತ ತನ್ನ ಅಸ್ತಿತ್ವ ಪಡೆದು ಹಂತ ಹಂತವಾಗಿ ವಿಸ್ತಾರಗೊಳ್ಳುತ್ತಿದೆ, ಇದಕ್ಕೆ ಪೂರಕವಾಗಿ ಪಕ್ಷದ ಸಂಸ್ಥಾಪಕರಾದ ಗಾಲಿ ಜನಾರ್ಧನ ರೆಡ್ಡಿಯವರು *ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ವಿಜಯನಗರ ಜಿಲ್ಲೆಯ ಜಿಲ್ಲಾಧ್ಯಕ್ಷರನ್ನಾಗಿ ಸಿ.ರೇವಣ್ಣಸಿದ್ದಪ್ಪ ಮತ್ತು ರಾಯಚೂರು ಜಿಲ್ಲಾಧ್ಯಕ್ಷರನ್ನಾಗಿ ಪಿ ಶ್ರೀನಿವಾಸ್ ರೆಡ್ಡಿಯವರನ್ನು ನೇಮಕ ಮಾಡಿ ಪಕ್ಷ ಸಂಘನೆಯ ಜವಾಬ್ದಾರಿಯನ್ನು ನೀಡಿದೆ.
ಕಳೆದ 30 ವರ್ಷಗಳಿಂದ ಭಾರತೀಯ ಜನತಾ ಪಕ್ಷದಲ್ಲಿ ಸೇವೆ ಸಲ್ಲಿಸಿ ಎರಡು ಬಾರಿ ಕೂಡ್ಲಗಿ ತಾಲೂಕು ಅಧ್ಯಕ್ಷರಾಗಿ ಹಾಗೂ ಬಳ್ಳಾರಿ ಜಿಲ್ಲಾ ಹಿರಿಯ ನಾಗರೀಕರ ಪ್ರಕೋಷ್ಠದ ಸಂಚಾಲಕರಾಗೆ ಸೇವೆ ಸಲ್ಲಿಸಿದ್ದ ಬಿಜೆಪಿಯ ಹಿರಿಯ ಮುಖಂಡರಾದ ಸಿ.ರೇವಣ್ಣಸಿದ್ದಪ್ಪ ರಿಗೆ ಪಕ್ಷದಲ್ಲಿ ಜಿಲ್ಲಾ ಮಟ್ಟದ ಉನ್ನತ ಸ್ಥಾನ ನೀಡಿ ಗೌರವಿಸಿದೆ.
ಇದೇ ಸಂದರ್ಭದಲ್ಲಿ ಪಕ್ಷದ ರಾಜ್ಯಮಟ್ಟದ ಮುಖಂಡ ದಮ್ಮೂರ್ ಶೇಖರ್ ಹಾಗೂ ಪಕ್ಷದ ಹಿರಿಯರು ಉಪಸ್ಥಿತಿಯಿದ್ದರು.
ವರದಿ : ಬಸವರಾಜ ಕಬಡ್ಡಿ
Tags
ರಾಜಕೀಯ