ಸಿರುಗುಪ್ಪ : ನಗರದ ದೇಶನೂರು ರಸ್ತೆಯಲ್ಲಿ ಬರುವ ಮಹಮ್ಮದ್ ಶಾ ಖಾದ್ರಿ ತಾತ ನವರ ಉರಸ್ ಕಾರ್ಯಕ್ರಮದಲ್ಲಿ ಭಾಗವಹಿಸಿದ ಜನಾರ್ದನ ರೆಡ್ಡಿ ಆತ್ಮೀಯರಾದ ಮಹಮ್ಮದ್ ಅಲಿಖಾನ್ ಹಾಗೂ ಕೆ ಆರ್ ಪಿ ಪಿ ಸಿರುಗುಪ್ಪ ವಿಧಾನ ಸಭಾ ಕ್ಷೇತ್ರದ ಅಭ್ಯರ್ಥಿ ದರಪ್ಪ ನಾಯಕ ಮಹಮ್ಮದ್ ಶಾ ಖಾದ್ರಿ ತಾತ ನವರಿಗೆ ಗೌರವ ಸಲ್ಲಿಸಿದರು ಕಾರ್ಯಕ್ರಮದಲ್ಲಿ ನೆರೆದಿರುವ ಸುಮುದಾಯದ ಬಾಂದವರನ್ನು ಉದ್ದೇಶಿಷಿ ಮಾತನಾಡಿದ ಮಹಮ್ಮದ್ ಅಲಿಖಾನ್ ದರಪ್ಪ ನಾಯಕ ಉತ್ತಮ ಕೆಲಸ ಮಾಡುವಂತರಾಗಿದ್ದು ಮುಸ್ಲಿಂ ಸಮುದಾಯದವರು ದರಪ್ಪ ನಾಯಕರಿಗೆ ಮತವನ್ನ ನೀಡಿ ಗೆಲ್ಲಿಸಬೇಕು ಎಂದರು. ಪಕ್ಷದ ಅಭ್ಯರ್ಥಿ ದರಪ್ಪ ನಾಯಕ ಮಾತನಾಡಿ ಅಜರತ್ ಉಮರ್ (ಆರ್ ಎ) ಅವರು ಉತ್ತಮ ಆಡಲಿತಾತ್ಮಕರಾಗಿ ಗುರುತಿಸಿಕೊಂಡರು, ಬರುವ ಚುನಾವಣೆಯಲ್ಲಿ ನನ್ನನ್ನು ಆರಿಸಿ ಗೆಲ್ಲಿಸಿದರೆ ಅವರ ಮಾದರಿಯಂತೆ ಆಡಳಿತ ನಡೆಸುತ್ತೇನೆ ಎಂದರು. ಈ ಸಂದರ್ಭದಲ್ಲಿ ಪಕ್ಷದ ತಾಲೂಕು ಅಧ್ಯಕ್ಷರಾದ ಹಚ್ಚೊಳ್ಳಿ ಸಿದ್ದಯ್ಯ ಸ್ವಾಮಿ. ಜಿಲ್ಲ ಉಪಾಧ್ಯಕ್ಷರಾದ ಸಂಪತ್ ಕುಮಾರ ಗೌಡ. ತಾಲೂಕ ಪ್ರದಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಂಡ್ರಾಳ. ಕಾರ್ಯದರ್ಶಿ ಬಾಗವಾಡಿ ನಾಗರಾಜ್. ಎಸ್ ಟಿ ಯುವ ಘಟಕ ಅಧ್ಯಕ್ಷ ಹೊನ್ನೂರಪ್ಪ ಕಣೆಕಲ್ ತಾತ, ಸೇರಿದಂತೆ ಪಕ್ಷದ ಕಾರ್ಯಕರ್ತರು ಭಾಗವಹಿಸಿದ್ದರು.
ಡಿ ಆಲಂಬಾಶ, ಸಿರುಗುಪ್ಪ
Tags
ರಾಜಕೀಯ