KRS : ಕುಷ್ಟಗಿ ಕರ್ನಾಟಕ ರಾಷ್ಟ್ರ ಸಮಿತಿಯ ರಾಜ್ಯಾಧ್ಯಕ್ಷರಿಂದ ಅಭ್ಯರ್ಥಿ ಘೋಷಣೆ

ಕುಷ್ಟಗಿ ಕರ್ನಾಟಕ ರಾಷ್ಟ್ರ ಸಮಿತಿಯ ರಾಜ್ಯಾಧ್ಯಕ್ಷರಿಂದ ಅಭ್ಯರ್ಥಿ ಘೋಷಣೆ

ಕುಷ್ಟಗಿ :
 ರಾಜ್ಯದಲ್ಲಿ ವಿಧಾನಸಭಾ ಚುನಾವಣೆಯು ಸಮಿಪಿ ಸುತ್ತಿದ್ದು ಕುಷ್ಟಗಿ ವಿಧಾನಸಭಾ ಕ್ಷೇತ್ರದಲ್ಲಿ ದಿನದಿಂದ ದಿನಕ್ಕೆ ರಾಜಕೀಯ ಸಭೆ ಸಮಾರಂಭಗಳು ರಂಗೆ ರತೊಡಗಿವೆ  ಕ್ಷೇತ್ರದಲ್ಲಿ ಈಗಾಗಲೇ ಕಾಂಗ್ರೆಸ್ ಬಿಜೆಪಿ ಜೆಡಿಎಸ್ ಕಲ್ಯಾಣ ರಾಜ್ಯ ಪ್ರಗತಿಪಕ್ಷ ರೈತ ಸಂಘ ಹಸಿರು  ಸೇನೆ ಬಹುಜನ ಸಮಾಜವಾದಿ ಪಾರ್ಟಿ ಹಮ್ ಆದ್ಮಿ  ಪಾರ್ಟಿ ಇನ್ನೂ ಅನೇಕ ರಾಜಕೀಯ ಪಕ್ಷಗಳು ಚುನಾವಣೆಯ ರಣ ಕಹಳೆ ಉದುತ್ತಿದ್ದು
ಇದರ ಮಧ್ಯೆ ಗುರುವಾರ ಕುಷ್ಟಗಿ ನಗರಕ್ಕೆ ಆಗಮಿಸಿದ ಕೆ ಆರ್ ಎಸ್ ಪಕ್ಷದ ರಾಜ್ಯಾಧ್ಯಕ್ಷರಾದ ರವಿಕೃಷ್ಣ ರೆಡ್ಡಿ  ಅವರು  ತಮ್ಮ ಪಕ್ಷದ ಕುಷ್ಟಗಿ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಸುರೇಶ್ ಚಂದಪ್ಪ ಬಲಕುಂದಿ ಇವರನ್ನು ನಗರದ ಬಸವೇಶ್ವರ ವೃತ್ತದಲ್ಲಿ ಅಭ್ಯರ್ಥಿಯಾಗಿ ಘೋಷಣೆ ಮಾಡಿದ್ದು ಆ ಸ್ಥಳದಲ್ಲಿ ನೆರೆದ ಪ್ರಜ್ಞಾವಂತ ಸಾಮಾನ್ಯ ವ್ಯಕ್ತಿಗಳಿಗೆ ವಿಶೇಷ ಸಂಗತಿ ಆಯ್ತು ,ಸಾಲ ಮುಕ್ತ ರೈತ, ಬಡತನ ಮುಕ್ತ ಹಳ್ಳಿ , ಭ್ರಷ್ಟಮುಕ್ತ ರಾಜ್ಯ ಎಂಬ ಘೋಷವಾಕ್ಯಗಳೊಂದಿಗೆ ಘೋಷಣೆಗಳನ್ನು ಕೂಗುತ್ತಾ ಪಕ್ಷದ ಅಭ್ಯರ್ಥಿಯನ್ನು ಪರಿಚಿಸಿದರು ದೇಶದಲ್ಲಿ ರಾಜ್ಯದಲ್ಲಿ ಭ್ರಷ್ಟಾಚಾರ ಮಿತಿಮೀರಿದ್ದು ಚುನಾವಣೆ ಸಂದರ್ಭದಲ್ಲಿ ಕೆಲವು ರಾಜಕೀಯ ಪಕ್ಷಗಳು ಮತದಾರಿಗೆ ಹಣ ಹೆಂಡ ಕಂಡ ಹಾಗೂ ಜಾತಿಯ ವಿಷ ಬೀಜ ಬಿತ್ತಿ ಚುನಾವಣೆಯಲ್ಲಿ ಗೆದ್ದ ನಂತರ ಮಹಾರಾಜರಂತೆ ಆಳುತ್ತಿರುವ ಅಂತ ರಾಜಕೀಯ ಪಕ್ಷದ ಅಭ್ಯರ್ಥಿಗಳನ್ನು ದೂರ ವಿಟ್ಟು ನಮ್ಮ ಪಕ್ಷದ ಸಾಮಾನ್ಯ ವ್ಯಕ್ತಿ  ವಿದ್ಯಾವಂತ ಬುದ್ಧಿವಂತ ಸುರೇಶ್ ಚಂದಪ್ಪ ಬಲಕುಂದಿ ಅವರಿಗೆ ಮುಂಬರುವ ಚುನಾವಣೆಯಲ್ಲಿ ಆಶೀರ್ವದಿಸಬೇಕೆಂದು ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ಉಪಾಧ್ಯಕ್ಷರಾದ ನಿಂಗನಗೌಡ ಗೌಡ್ರು ಯುವ ಘಟಕದ ರಾಜ್ಯಾಧ್ಯಕ್ಷ ರಘು ಜಾನಗರ್ ಜಿಲ್ಲಾ ಯುವ ಘಟಕದ ಅಧ್ಯಕ್ಷ ಕುಮಾರ ಚವಾಣ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ತೋಟನಗೌಡ ಯಲಬುರ್ಗಾ    ಕುಷ್ಟಗಿ ತಾಲೂಕು ಅಧ್ಯಕ್ಷರಾದ ಸಗರಪ್ಪ ಕುಂಬಾರ್ ಯುವ ಘಟಕದ ಅಧ್ಯಕ್ಷರಾದ ರಾಹುಲ್ ದೇವ ಸಿಂಗ್ ಉಪಾಧ್ಯಕ್ಷ ಬಸವರಾಜ ಕೌಲೂರು ಹಾಗೂ ಮುತ್ತಪ್ಪ ಮಕಾಲಿ ಹನುಮಂತಪ್ಪ ಇನ್ನು ಅನೇಕ ನೂರಾರು ಪಕ್ಷದ ಕಾರ್ಯಕರ್ತರು ಭಾಗವಹಿಸಿದ್ದರು ನಗರದ ಪ್ರಮುಖ ರಸ್ತೆಗಳಲ್ಲಿ ಸುಮಾರು 30ಕ್ಕಿಂತ ಹೆಚ್ಚು ತಮ್ಮ ಪಕ್ಷದ ಚಿನ್ಹೆ ಧ್ವಜಗಳನ್ನು ಕಟ್ಟಿದ  ವಾಹನಗಳೊಂದಿಗೆ ಮೆರವಣಿಗೆ ಮೂಲಕ ಬಲ ಪ್ರದರ್ಶನ ಮಾಡಿದರು. 
 ವರದಿ : ಮಲ್ಲಿಕಾರ್ಜುನ್ ದೋಟಿಹಾಳ  

  Siddi Tv
"ಇದು ಕನ್ನಡಿಗರ ಧ್ವನಿ"

*Follow Us On Website*

*Follow Us On YouTube*

*Follow Us On Facebook*


*Follow Us On Instagram*
Previous Post Next Post

AD

 


Contact For News&Ads

Siddi TV

Contact Form

f="https://unpkg.com/video.js/dist/video-js.css" rel="stylesheet">