Kudligi : ಸೂರವ್ವನಹಳ್ಳಿ ಕ್ರಾಸ್:ಕಾರ್ ಬೈಕ್ ಗೆ ಡಿಕ್ಕಿ ಓರ್ವ ಸಾವು-BREAKING NEWS


ಸೂರವ್ವನಹಳ್ಳಿ ಕ್ರಾಸ್:ಕಾರ್ ಬೈಕ್ ಗೆ ಡಿಕ್ಕಿ ಓರ್ವ ಸಾವು

ವಿಜಯನಗರ  ಜಿಲ್ಲೆ ಕೂಡ್ಲಿಗಿ ತಾಲೂಕು ರಾಷ್ಟ್ರೀಯ ಹೆದ್ದಾರಿ50ರಲ್ಲಿ, ಸೂರವ್ವನಹಳ್ಳಿ ಕ್ರ‍ಾಸ್ ಹತ್ತಿರ ಬೈಕ್ ಗೆ ಕಾರ್ ಡಿಕ್ಕಿ ಹೊಡೆದ ಪರಿಣಾಮ. ಬೈಕ್ ಸವಾರ ಸ್ಥಳದಲ್ಲಿಯೇ ಅಸುನೀಗಿದ್ದು, ಓರ್ವ ಗಾಯಗೊಂಡಿರುವ ಘಟನೆ, ಮಾ21 ಸೊಮವಾರ ರಾತ್ರಿ  ಜರುಗಿರುವುದಾಗಿ ತಿಳಿದು ಬಂದಿದೆ. ಮೊರಬ ಗ್ರಾಮದ ತಿರಿಕಪ್ಪರ ಭದ್ರಿ(25) ಮೃತ ದುರ್ಧೈವಿಯಾಗಿದ್ದಾನೆ,ಮತ್ತೋರ್ವ ಗಾಯಗೊಂಡಿದ್ದಾನೆ. ಗಾಯಾಳುವನ್ನು ಕೂಡ್ಲಿಗಿ ಸಾರ್ವಜನಿಕ ಅಸ್ಪತ್ರೆಗೆ ದಾಖಲಿಸಲಾಗಿದೆ. ಇವರಿಬ್ಬರು ರಾತ್ರಿ  ರಾ.ಹೆ.ಪಕ್ಕದ ಡಾಬಾ ಹೋಟೆಲ್ ನಲ್ಲಿ, ಊಟ ಮಾಡಿದನಂತರ ತಮ್ಮ ಬೈಕ್ ನಲ್ಲಿ. ತಮ್ಮೂರು ಮೊರಬ ಗ್ರಾಮದೆಡೆಗೆ ಬೈಕ್ ನಲ್ಲಿ ತೆರಳುತ್ತಿರುವಾಗ, ಬೆಂಗಳೂರಿನಿಂದ ಹೊಸಪೇಟೆ ಕಡೆಗೆ ಹೊರಟಿದ್ದ ಕಾರ್. ಬೈಕ್ ಹಿಂಬದಿಗೆ ಬಂದು ಕಾರು ಡಿಕ್ಕಿ ಹೊಡೆದಿದೆ. ಪರಿಣಾಮ ಬೈಕ್ ನಲ್ಲಿದ್ದ ತಿರುಕಪ್ಪರ ಭದ್ರಿ ಸ್ಥಳದಲ್ಲಿಯೇ ಅಸುನೀಗಿದ್ದಾನೆ, ಮತ್ತೋರ್ವ ಬೈಕ್ ಸವಾರ ಮೊರಬ ಗ್ರಾಮದ ವೀರೇಶ ಗಾಯಗೊಂಡಿದ್ದಾನೆ. ಬೈಕ್ ಗೆ ಡಿಕ್ಕಿ ಹೊಡೆದ ಕಾರ್ ಘಟನಾ ಸ್ಥಳದಿಂದ ಪಲಾಯನಗೈದಿದ್ದು, ವಿಷಯ ತಿಳಿದ ಕೂಡ್ಲಿಗಿಯ ಹೈವೇ ಪೆಟ್ರೋಲ್, ಹಾಗೂ ತುರ್ತು ಸಹಾಯ ವಾಹನ ಸಿಬ್ಬಂದಿ. ಸ್ಥಳಕ್ಕಾಗಮಿಸಿ ಗಾಯಾಳುಗಳಿಗೆ ನೆರವಾಗಿದ್ದಾರೆ. ಮೊದಲು ತಿಮ್ಮಲಾಪುರ ಗ್ರಾಮದ ಹತ್ತಿರ ಇರೋ ಟೋಲ್ ಗೇಟ್ ಗೆ, ಹೈವೇ ಪೆಟ್ರೋಲ್  ಸಿಬ್ಬಂದಿಯವರಾದ ಎ.ಎಸೈ.ಬಸವರಾಜ ಶೆಟ್ಟಿ ಹಾಗೂ ಚಾಲಕ ಪೊಲೀಸ್ ಪೇದೆ ಸಣ್ಣಯ್ಯರವರು ಮಾಹಿತಿ ರವಾನಿಸಿದ್ದಾರೆ. ಈ ಮೂಲಕ ಅಪಘಾತಕ್ಕೆ ಕಾರಣವಾದ ಕಾರ್ ನ್ನು, ತಡೆದು ನಿಲ್ಲಿಸುವಲ್ಲಿ ಹೈವೇಪೆಟ್ರೋಲ್ ಹಾಗೂ ಕೂಡ್ಲಿಗಿ ಪೊಲೀಸ್ ರು ಯಶಸ್ವಿಯಾಗಿದ್ದಾರೆ. ಕೂಡ್ಲಿಗಿ 108 ಸಿಬ್ಬಂದಿ ಸ್ಥಳಕ್ಕಾಗಮಿಸಿ,ಗಾಯಾಳು ವೀರೇಶನನ್ನು ಕೂಡ್ಲಿಗಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದಾರೆ. ಘಟನಾ ಸ್ಥಳಕ್ಕೆ ತರ್ತಾಗಿ ದಾವಿಸಿದ ಕೂಡ್ಲಿಗಿ ಪಿಎಸೈ ಧನುಂಜಯಕುಮಾರ, ಮೊದಲು ಗಾಯಾಳುನ್ನು ಆಸ್ಪತ್ರೆಗೆ ದಾಖಲಿಸುವಲ್ಲಿ ನೆರವಾದರು. ಅವರು ಅಪಘಾತ ಸ್ಥಳವನ್ನು ಪರಿಶೀಲಿಸಿದರು ಹಾಗೂ ಅಪಘಾತ ಸ್ಥಳದಲ್ಲಿ ವಾಹನ ದಟ್ಟನೆಯ‍ಾಗದಂತೆ ಕ್ರಮ ಜರುಗಿಸಿದ್ದರು.

 ವರದಿ :  ವಿ.ಜಿ.ವೃಷಭೇಂದ್ರ 

Previous Post Next Post

AD

 


Contact For News&Ads

Siddi TV

Contact Form

f="https://unpkg.com/video.js/dist/video-js.css" rel="stylesheet">