ಇಂಜಿನಿಯರ್ ಗೆ ಕ್ಲಾಸ್ ತೆಗೆದುಕೊಂಡ ಸಚಿವ ಹಾಲಪ್ಪ ಆಚಾರ್
ಕಳಪೆ ಕಾಮಗಾರಿ ಕಂಡು ಮಹಿಳಾ ಮಕ್ಕಳ ಕಲ್ಯಾಣ ಸಚಿವ ಹಾಲಪ್ಪ ಆಚಾರ್ ಅವರು ನೀನೇನಾ ಇಂಜಿನಿಯರ್, ಹೀಗೆನಾ ಕೆಲಸ ಮಾಡೋದು ಎಂದು ಇಂಜಿನಿಯರ್ ಗೆ ಚಳಿ ಬಿಡಿಸಿದ್ದಾರೆ.
ನೂತನ ಶಾಲಾ ಕಟ್ಟಡದ ಉದ್ಘಾಟನೆ ವೇಳೆ ಕೆ ಆರ್ ಐ ಡಿ ಎಲ್ ಇಲಾಖೆಯ ಇಂಜಿನಿಯರ್ ಮೇಲೆ ಕಾಮಗಾರಿಯ ಗುಣಮಟ್ಟ ಕಂಡು ಸಚಿವ ಹಾಲಪ್ಪ ಆಚಾರ್ ಅವರು ಸಿಟ್ಟಾದರು.
ಅವೈಜ್ಞಾನಿಕ ಕಾಮಗಾರಿ ಕಂಡು ಸಚಿವ ಹಾಲಪ್ಪ ಆಚಾರ್ ನಿನ್ನ ಮನೆಯ ಕೆಲಸ ಆಗಿದ್ದರೆ ಹೀಗೆ ಮಾಡುತ್ತಿದ್ದೀಯಾ ಎಂದು ಕೇಳಿದ ಸಚಿವರ ಮಾತಿಗೆ ತಲೆ ತಗ್ಗಿಸಿದ ಇಂಜಿನಿಯರ್
ಯಲಬುರ್ಗಾ ಶಾಸಕ, ಸಚಿವ ಹಾಲಪ್ಪ ಆಚಾರ್ ಅವರಿಂದ ಕುಕನೂರು ಯಲಬುರ್ಗಾ ತಾಲೂಕಿನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿ ಉದ್ಘಾಟನೆ, ಭೂಮಿ ಪೂಜೆ ಕಾರ್ಯಕ್ರಮಗಳು ನಡೆದವು.
ವರದಿ : ಈರಯ್ಯ ಕುರ್ತಕೋಟಿ
Tags
ರಾಜಕೀಯ