ಸೀರೆ ಹಂಚಿಕೆ ಸಮರ್ಥಿಸಿಕೊಂಡ ಸಚಿವ ಹಾಲಪ್ಪ ಆಚಾರ್
ಕಾರ್ಯಕರ್ತರು, ಅಭಿಮಾನಿಗಳು ಖುಷಿ, ಪ್ರೀತಿ, ಅಭಿಮಾನದಿಂದ ಸೀರೆ ಹಂಚಿದರೆ ತಪ್ಪೇನು? ಎನ್ನುವ ಮೂಲಕ ಸೀರೆ ಹಂಚಿಕೆಯನ್ನು ಸಚಿವ ಹಾಲಪ್ಪ ಆಚಾರ್ ಸಮರ್ಥಿಸಿಕೊಂಡಿದ್ದಾರೆ.
ಯಲಬುರ್ಗಾ ಕ್ಷೇತ್ರದಲ್ಲಿ ಕಳೆದ ಒಂದು ವಾರದಿಂದ ಬಿಜೆಪಿ ಕಾರ್ಯಕರ್ತರು ಇಡೀ ತಾಲೂಕಿನ ಹಳ್ಳಿ ಹಳ್ಳಿಯಲ್ಲಿ ಸೀರೆ ಹಂಚುತ್ತಿದ್ದಾರೆ, ಇದಕ್ಕೆ ನಿಮ್ಮ ಪ್ರತಿಕ್ರಿಯೆ ಏನು ಎಂಬ ಮಾಧ್ಯಮದವರ ಪ್ರಶ್ನೆಗೆ ಸೋಲುವ ಭಯದಿಂದ ಸೀರೆ ಹಂಚಿಲ್ಲ, ಪಕ್ಷದ ಅಭಿಮಾನಿಗಳು ಹುಟ್ಟುಹಬ್ಬ, ಶುಭ ಸಂದರ್ಭಕ್ಕಾಗಿ ಸೀರೆ ಹಂಚಿದ್ದಾರೆ
ಪಕ್ಷದ ಮೇಲಿನಪ್ರೀತಿ,ಅಭಿಮಾನಕ್ಕೆ ಸೀರೆ ಕೊಟ್ಟಿರಬಹುದು, ಚುನಾವಣೆಗೂ ಸೀರೆ ಹಂಚಿಕೆಗೂ ಸಂಬಂಧ ಇಲ್ಲಾ.
ಎನ್ನುವ ಮೂಲಕ ಯಲಬುರ್ಗಾ ಕ್ಷೇತ್ರದಲ್ಲಿ ಬಿಜೆಪಿ ಕಾರ್ಯಕರ್ತರು ಸೀರೆ ಹಂಚಿಕೆ ಮಾಡಿದ್ದನ್ನು ಸಚಿವ ಹಾಲಪ್ಪ ಆಚಾರ್ ಅವರು ಸಮರ್ಥಿಸಿಕೊಂಡಿದ್ದಾರೆ.
ಕುಕನೂರು ತಾಲೂಕಿನ ಬೆವೂರು ಗ್ರಾಮದಲ್ಲಿ ನೂತನ ಗೋಶಾಲೆ ಉದ್ಘಾಟನೆ ಮಾಡಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಹಾಲಪ್ಪ ಆಚಾರ್
ಪಕ್ಷದ ಅಭಿಮಾನಿಗಳು, ಕಾರ್ಯಕರ್ತರು ಕೊರೋನ ಕಾಲದಿಂದಲೂ ಕಿಟ್, ಉಡುಗೊರೆ ಕೊಡುವ ಮೂಲಕ ಕ್ಷೇತ್ರದಲ್ಲಿ ಜನರಿಗೆ ಸಹಾಯ ಮಾಡಿದ್ದಾರೆ
ಅದೇ ತರಹದ ಪ್ರೀತಿ ಅಭಿಮಾನದಿಂದ ಸೀರೆ ಹಂಚಿದ್ದಾರೆ, ಎಂದು ಹೇಳಿದ ಗಣಿ ಮತ್ತು ಭೂ ವಿಜ್ಞಾನ ಸಚಿವ ಹಾಲಪ್ಪ ಆಚಾರ್ ಹುಟ್ಟುಹಬ್ಬಕ್ಕಾಗಿ ಸೀರೆ ಹಂಚಿದ್ದಾರೆ ಎಂದ ಸಚಿವರು, ಯಾರ ಹುಟ್ಟುಹಬ್ಬಕ್ಕೆ ಸೀರೆ ಹಂಚಿದ್ದಾರೆ ಎಂಬ ಮಾಧ್ಯಮದವರ ಪ್ರಶ್ನೆಗೆ ಹಾರಿಕೆ ಉತ್ತರ ನೀಡಿ ಜಾರಿಕೊಂಡ ಸಚಿವ ಹಾಲಪ್ಪ ಆಚಾರ್.
ವರದಿ : ಈರಯ್ಯ ಕುರ್ತಕೋಟಿ
Tags
ರಾಜಕೀಯ