Kushtagi :ಪ್ರಥಮ ಬಾರಿಗೆ ಮತ ಚಲಾಯಿಸುವವರಿಗೆ ಇವಿಎಂ, ವಿವಿ ಪ್ಯಾಟ್‌ ಬಳಕೆ ಕುರಿತು ಜಾಗೃತಿ

ಪ್ರಥಮ ಬಾರಿಗೆ ಮತ ಚಲಾಯಿಸುವವರಿಗೆ ಇವಿಎಂ, ವಿವಿ ಪ್ಯಾಟ್‌ ಬಳಕೆ ಕುರಿತು ಜಾಗೃತಿ

 ಕುಷ್ಟಗಿ ಪಟ್ಟಣದ ಮೆಟ್ರಿಕ್‌ ನಂತರದ ಬಾಲಕರ ವಸತಿ ನಿಲಯದಲ್ಲಿ ಜರುಗಿದ ಸ್ವೀಪ್‌ ಕಾರ್ಯಕ್ರಮ

 ಕುಷ್ಟಗಿ : ಯುವಕರು ದೇಶದ ಭವಿಷ್ಯ ರೂಪಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತಾರೆಂದು *ಇವಿಎಂ, ವಿವಿ ಪ್ಯಾಟ್‌ ಬಳಕೆ ಮಾಸ್ಟರ್‌ ಟ್ರೈನರ್‌ ಶರಣಪ್ಪ ತೆಮ್ಮಿನಾಳ ಕರೆ ನೀಡಿದರು.
 ದಿನಾಂಕ:03-03-2023ರಂದು ಕುಷ್ಟಗಿ ಪಟ್ಟಣದ ಹಿಂದುಳಿದ ವರ್ಗಗಳ ಮೆಟ್ರಿಕ್‌ ನಂತರದ ಬಾಲಕರ ವಸತಿ ನಿಲಯದಲ್ಲಿ ತಾಲೂಕ ಸ್ವೀಪ್‌ ಸಮಿತಿ ಕುಷ್ಟಗಿ ವತಿಯಿಂದ ಜರುಗಿದ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು. 
18 ವರ್ಷ ಮೀರಿದ ನಾಗರೀಕರಿಗೆ ಮತದಾನ ಮಾಡಲು ಅವಕಾಶ ಕಲ್ಪಿಸಿರುವದರಿಂದ ಯುವ ಮತದಾರರು ಕಡ್ಡಾಯವಾಗಿ ಮತ ಚಲಾಯಿಸಬೇಕೆಂದು ಕರೆ ನೀಡಿದರು. ಭಾರತ ದೇಶ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿದ್ದು ನೈತಿಕ ಮತದಾನ ಮಾಡುವದಕ್ಕೆ ಅವಕಾಶ ಕಲ್ಪಿಸಿದೆ. ಇದರಿಂದ ಪ್ರತಿಯೊಬ್ಬ ವ್ಯಕ್ತಿ ತನ್ನ ಮತವನ್ನು ನಿರ್ಭಯದಿಂದ ಚಲಾಯಿಸಬಹುದಾಗಿದೆ ಎಂದರು.  
ಮನೆಯಲ್ಲಿ 18 ವರ್ಷ ಆದವರು ಹೊಸದಾಗಿ ಮತದಾರರ ನೊಂದಣಿ ಮಾಡಿಸಿಕೊಳ್ಳಲು ಅವಕಾಶ ಇದೆ. ಮತಗಟ್ಟೆ ನೊಂದಣಿ ಅಧಿಕಾರಿಗಳಿಗೆ ಸಂಪರ್ಕಿಸಿ ಜನ್ಮ ದಿನಾಂಕ, ಆಧಾರ ಕಾರ್ಡ ಪ್ರತಿ, ಪಾಸಪೋರ್ಟ ಸೈಜ್‌ ಪೊಟೊಗಳನ್ನು ಸಲ್ಲಿಸಿ ನೊಂದಾಯಿಸಲು ಕರೆ ನೀಡಿದರು. ಇದೇ ಸಂದರ್ಭದಲ್ಲಿ ಮತದಾನ ಜಾಗೃತಿ ಸಲುವಾಗಿ ಪ್ರತಿಜ್ಞಾ ವಿಧಿ ಬೋಧಿಸಿದರು. ವಸತಿ ನಿಲಯದಲ್ಲಿದ್ದ 40 ವಿದ್ಯಾರ್ಥಿಗಳು ಮತ ಚಲಾಯಿಸಿದರು. ಇವಿಎಂ ಮತ್ತು ವಿವಿ ಪ್ಯಾಟ್‌ ಬಳಕೆ ವಿಧಾನ ಕುರಿತು ಮಾಸ್ಟರ್‌ ಟ್ರೈನರ್‌ ನಟರಾಜ ಸೋನಾರ ಮಾಹಿತಿ ನೀಡಿದರು. 

ಸದರಿ ಕಾರ್ಯಕ್ರಮದಲ್ಲಿ ತಾಲೂಕ ಐಇಸಿ ಸಂಯೋಜಕ ದೇವರಾಜ ಪತ್ತಾರ, ತಾಲೂಕ ಪಂಚಾಯತಿಯ ವಿಷಯ ನಿರ್ವಾಹಕರುಗಳಾದ ಸಂಗಪ್ಪ ನಂದಾಪುರ,ರುದ್ರಪ್ಪ ಉಂಕಿ, ಎಸ್‌ ಐಆರ್‌ ಡಿ ಸಂಪನ್ಮೂಲ ವ್ಯಕ್ತಿ ಈರಣ್ಣ ತೋಟದ ಹಾಗು ವಸತಿ ನಿಲಯದ ಸಿಬ್ಬಂದಿಗಳು ಹಾಜರಿದ್ದರು.

ವರದಿ : ಮಲ್ಲಿಕಾರ್ಜುನ ದೋಟಿಹಾಳ 
Previous Post Next Post

AD

 


Contact For News&Ads

Siddi TV

Contact Form

f="https://unpkg.com/video.js/dist/video-js.css" rel="stylesheet">