ಕುಷ್ಟಗಿ ವಿಧಾನಸಭಾ ಕ್ಷೇತ್ರ-60ರ ವ್ಯಾಪ್ತಿಯಲ್ಲಿ ಮಾದರಿ ಚುನಾವಣಾ ನೀತಿ ಸಂಹಿತೆ ಅನುಷ್ಠಾನದ ಕುರಿತು ಪೂರ್ವಭಾವಿ ಸಭೆ
ತಹಶಿಲ್ದಾರರ ನೇತೃತ್ವದಲ್ಲಿ ಜರುಗಿದ ನಿಯೋಜಿತ ತಂಡಗಳ ಸಭೆ
ಕುಷ್ಟಗಿ -ಶೀಘ್ರದಲ್ಲಿ ಸಾರ್ವತ್ರಿಕ ವಿಧಾನಸಭೆ ಚುನಾವಣೆ ಜರುಗಲಿದ್ದು ಕುಷ್ಟಗಿ ವಿಧಾನಸಭೆ ಕ್ಷೇತ್ರದಲ್ಲಿ ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ನಿಯೋಜಿಸಿದ ಅಧಿಕಾರಿಗಳು ಕ್ರಮವಹಿಸಲು *ಕುಷ್ಟಗಿ ತಹಶೀಲ್ದಾರ ಕೆ.ರಾಘವೇಂದ್ರರಾವ್* ಕಟ್ಟು ನಿಟ್ಟಾಗಿ ಸೂಚಿಸಿದರು.
*ದಿನಾಂಕ:13-03-2023ರಂದು ಕುಷ್ಟಗಿ ತಾಲೂಕ ಪಂಚಾಯತಿಯ ಸಭಾಂಗಣದಲ್ಲಿ* ಜರುಗಿದ ಪೂರ್ವಭಾವಿ ಸಭೆಯ ಅಧ್ಯಕ್ಷತೆಯನ್ನು ವಹಿಸಿಕೊಂಡು ಮಾತನಾಡಿದರು.
ತಂಡಗಳನ್ನು ಈಗಾಗಲೇ ನಿಯೋಜಿಸಿದ್ದು ಪ್ರತಿಯೊಂದು ತಂಡ ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸತಕ್ಕದ್ದು. ಚುನಾವಣೆ ಸಂದರ್ಭದಲ್ಲಿ ಪ್ರತಿಯೊಬ್ಬರು ಸರಿಯಾದ ಸಮಯದಲ್ಲಿ, ಸರಿಯಾದ ನಿರ್ಧಾರ ಕೈಗೊಳ್ಳಲು ಯಾವುದೇ ಹಿಂದೆಟು ಹಾಕಬಾರದು.ಚುನಾವಣೆ ಮುಕ್ತಾಯವಾಗುವವರೆಗೆ 24X7 ಕಾರ್ಯನಿರ್ವಹಿಸಲು ಎಲ್ಲರೂ ಸಿದ್ದರಾಗಿರಿ. ಕೆಳಹಂತದಿಂದ ಮೇಲಿನ ಹಂತದವರೆಗೆ ಪ್ರತಿಯೊಬ್ಬರು ಕರ್ತವ್ಯ ಪ್ರಜ್ಞೆಯಿಂದ ಕಾರ್ಯನಿರ್ವಹಿಸಬೇಕು. ಚುನಾವಣೆ ಮಾದರಿ ನೀತಿ ಸಂಹಿತೆ ಮಾರ್ಗಸೂಚಿಗಳು ಪ್ರತಿಯೊಬ್ಬರು ಸರಿಯಾದ ಓದಿ ತಿಳಿದುಕೊಂಡು ಅನುಷ್ಠಾನಿಸಿರಿ. ಕೊಪ್ಪಳ ಜಿಲ್ಲೆಯಲ್ಲಿ ಕುಷ್ಟಗಿ ವಿಧಾನಸಭಾ ಚುನಾವಣೆ ಯಶಸ್ವಿಯಾಗಿ ಜರುಗಲು ತಾವೆಲ್ಲರೂ ನಿರತರಾಗಬೇಕೆಂದು ಸೂಚಿಸಿದರು. ಚೆಕ್ ಪೋಸ್ಟ್ ಸ್ಥಾಪಿಸಲಾಗುತ್ತಿದ್ದು ವಾಹನಗಳನ್ನು ಸರಿಯಾಗಿ ಪರಿಶೀಲನೆ ಮಾಡತಕ್ಕದ್ದು. ಯಾವುದೇ ಒತ್ತಡಕ್ಕೆ ಒಳಗಾಗಬಾರದು ಎಂದರು.
ಚುನಾವಣೆಯಲ್ಲಿ ಅನುಸರಿಸಬೇಕಾದ ಕ್ರಮಗಳ ಕುರಿತು ಉಪತಹಶೀಲ್ದಾರ ವಿಜಯಕುಮಾರ ಗುಂಡೂರು ಮಾಹಿತಿ ನೀಡಿದರು.
ಸಭೆಯಲ್ಲಿ ಮಾದರಿ ನೀತಿ ಸಂಹಿತೆ ತಾಲೂಕ ನೋಡಲ್ ಅಧಿಕಾರಿ ಹಾಗು ತಾಲೂಕ ಸ್ವೀಪ್ ಸಮಿತಿ ಅಧ್ಯಕ್ಷರಾದ ಶಿವಪ್ಪ ಸುಬೇದಾರ್ ಹಾಗು ನಿಯೋಜಿಸಿದ ಅಧಿಕಾರಿಗಳು, ತಹಶೀಲ್ ಕಾರ್ಯಾಲಯದ ಚುನಾವಣೆ ಸಿಬ್ಬಂದಿ ಅಜೀತ್, vu ಸುಂದರ್‌ರಾಜ್, ಶರಣಪ್ಪ ಹುಡೇದ, ತಾಲೂಕ ಸ್ವೀಪ್ ತಂಡದ ಸಿಬ್ಬಂದಿಗಳಾದ ದೇವರಾಜ ಪತ್ತಾರ, ಸಂಗಪ್ಪ ನಂದಾಪುರ ಹಾಜರಿದ್ದರು*
ಮಲ್ಲಿಕಾರ್ಜುನ ದೋಟಿಹಾಳ ವರದಿಗಾರರು ಕುಷ್ಟಗಿ
Tags
ರಾಜಕೀಯ