Kushtagi-ಧರಣಿ ನಿರತರ ಮನವೊಲಿಸಿದ ಕುಷ್ಟಗಿ ತಸಿಲ್ದಾರ್ ಹಾಗೂ ಸರ್ಕಲ್ ಇನ್ಸ್ಪೆಕ್ಟರ್

 

ಧರಣಿ ನಿರತರ ಮನವೊಲಿಸಿದ ಕುಷ್ಟಗಿ ತಸಿಲ್ದಾರ್ ಹಾಗೂ ಸರ್ಕಲ್ ಇನ್ಸ್ಪೆಕ್ಟರ್

 ಸುಮಾರು ತಿಂಗಳುಗಳಿಂದ ಅಭಿವೃದ್ಧಿ ಕಾಣದೆ ನೆನೆಗುದಿಗೆ ಬಿದ್ದಿರುವ ದೋಟಿಹಾಳ ಮತ್ತು ಕೇಸೂರು ಅವಳಿ ಗ್ರಾಮದ ಉತ್ತಮ ರಸ್ತೆಯನ್ನು ದುರಸ್ತಿಗೊಳಿಸುವುದು ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೆ ಹಾಗೂ ದೋಟಿಹಾಳ ಗ್ರಾಮವನ್ನು ಹೋಬಳಿ ಕೇಂದ್ರವನ್ನಾಗಿ ಮಾಡಲು ಈ ಮೂರು ಬೇಡಿಕೆಗಳ ಒತ್ತಾಯಿಸಿ ಸುಮಾರು 6 ದಿನಗಳಿಂದ  ಧರಣಿ ಸತ್ಯಾಗ್ರಹ ಕೈಗೊಂಡಿದ್ದ ಹೈದರಾಬಾದ್ ಕರ್ನಾಟಕ ಯುವಶಕ್ತಿ ಸಂಘ ಭಾರತೀಯ ಕೃಷಿಕ ಸಮಾಜ ರೈತ ಸಂಘ ಹಸಿರು ಸೇನೆ ದೋಟಿಹಾಳ ಹೋಬಳಿ ಹೋರಾಟ ಸಮಿತಿ ಗ್ರಾಮದ ಪ್ರಗತಿಪರ ಹೋರಾಟಗಾರರು ಧರಣಿ ಸತ್ಯಾಗ್ರಹ ನಡೆಸುತ್ತಿದ್ದ ಸ್ಥಳಕ್ಕೆ ಆಗಮಿಸಿದ ತಾಲೂಕು ದಂಡಾಧಿಕಾರಿ ರಾಘವೇಂದ್ರ ಕುಲಕರ್ಣಿ ಸರ್ಕಲ್ ಇನ್ಸ್ಪೆಕ್ಟರ್ ನಿಂಗಪ್ಪ ರುದ್ರಪ್ಪಗೋಳ ಪಟ್ಟು ಹಿಡಿದು ಕುಳಿತಿದ್ದವರನ್ನು ಭರವಸೆಗಳ ಪತ್ರದೊಂದಿಗೆ  ಮನವೊಲಿಸಿ ಧರಣಿಯನ್ನು ಹಿಂಬಡಿಸಿದ್ದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ ಜನಪ್ರತಿನಿಧಿಗಳ ಧರಣಿ ಸ್ಥಳಕ್ಕೆ  ಭೇಟಿ ನೀಡಿದೆ ಇರುವುದರಿಂದ ಧರಣಿ ನಡೆಸುತ್ತಿರುವ  ವಿವಿಧ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದ್ದರು.

 ಪಟ್ಟು ಬಿಡದೆ ಧರಣಿ ಮುಂದುವರಿಸಿದ್ದರು ಇದನ್ನು ಅರಿತ ತಾಲೂಕು ದಂಡಾಧಿಕಾರಿಗಳು ಸರ್ಕಲ್ ಇನ್ಸ್ಪೆಕ್ಟಗಳು  ಸಂಘಟನೆಯ ಮುಖಂಡರನ್ನು ತಮ್ಮ ವಿಶ್ವಾಸಕ್ಕೆ ತೆಗೆದುಕೊಂಡು ಧರಣಿಯನ್ನು ತೆರೆವುಗೊಳಿಸಿದ್ದು ಈ ಇಬ್ಬರ ಅಧಿಕಾರಿಗಳ ಆಡಳಿತವನ್ನು ಧರಣಿ ಕುಣಿತ ಸಂಘಟಕರಾದ ಹೈದರಾಬಾದ್ ಕರ್ನಾಟಕ ಯುವಶಕ್ತಿ ಸಂಘದ ಸಂಸ್ಥಾಪಕ ಅಧ್ಯಕ್ಷ ಬಸವರಾಜ್ ಗಾಣಿಗೇರ್ ಪ್ರಗತಿಪರ ಹೋರಾಟಗಾರರಾದ ಬಸವರಾಜ್ ಕಡಿವಾಲ ಪ್ರಕಾಶ್ ಪಟ್ಟೇದ  ಪರಶುರಾಮ್ ಇಳಿಗೇರಾ ಮುಂತಾದವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ  ಮಾತಿನಂತೆ ಈಗಾಗಲೇ ರಾಜ್ಯ ಹೆದ್ದಾರಿ 36 ಮಧ್ಯದಲ್ಲಿ ಬರುವ  ದೋಟಿಹಾಳ ಕೇಸೂರು ಅವಳಿ ಗ್ರಾಮದ ರಸ್ತೆ ಮತ್ತು ಚರಂಡಿ ಯನ್ನು ತಾತ್ಕಾಲಿಕ ಅಭಿವೃದ್ಧಿ ಆಧಾರಿತ  ಕಾಮಗಾರಿಯನ್ನು ಪಿಡಬ್ಲ್ಯೂಡಿ ಇಲಾಖೆಯ ಅಧಿಕಾರಿಗಳು ಕೈಯೆತ್ತಿಕೊಂಡಿದ್ದು ಕಾಮಗಾರಿ ಪ್ರಗತಿಯಲ್ಲಿದೆ ನಮ್ಮೆಲ್ಲಾ ಬೇಡಿಕೆಗಳು ಈಡೇರಿದಿದ್ದರೆ ಮುಂಬರುವ ವಿಧಾನಸಭಾ ಚುನಾವಣೆ ಮುಗಿದ ನಂತರ ಉಗ್ರ ಹೋರಾಟ ದರಣಿ ಸತ್ಯಾಗ್ರ ಮುಂದುವರೆಯಲಿದೆ ಎಂದು ಸಂಘಟಕರಾದ ಬಸವರಾಜ ಗಾಣಿಗೇರ್ ಎಚ್ಚರಿಸಿದ್ದಾರೆ


 ಮಲ್ಲಿಕಾರ್ಜುನ ದೋಟಿಹಾಳ ವರದಿಗಾರರು ಕುಷ್ಟಗಿ

Previous Post Next Post

AD

 


Contact For News&Ads

Siddi TV

Contact Form

f="https://unpkg.com/video.js/dist/video-js.css" rel="stylesheet">