Kushtagi: ರಾಜಕೀಯ ಹಸ್ತಕ್ಷೇಪದಿಂದ ಹೋರಾಟ ಅತ್ತಿಕ್ಕುವಂತ ಕೆಲಸ ಹೈದರಾಬಾದ್ ಕರ್ನಾಟಕ ಯುವಶಕ್ತಿಸಂಘಟನೆ ಆರೋಪ

ರಾಜಕೀಯ ಹಸ್ತಕ್ಷೇಪದಿಂದ ಹೋರಾಟ ಅತ್ತಿಕ್ಕುವಂತ ಕೆಲಸ ಹೈದರಾಬಾದ್ ಕರ್ನಾಟಕ ಯುವಶಕ್ತಿಸಂಘಟನೆ ಆರೋಪ

ಕುಷ್ಟಗಿ ತಾಲೂಕಿನ ದೋಟಿಹಾಳ ಹಾಗೂ ಕೇಸೂರು ಹವಳಿ ಗ್ರಾಮಗಳ ರಸ್ತೆ ಅಭಿವೃದ್ಧಿಪಡಿಸಲು ಹೋರಾಟ ಮಾಡಿದ್ದಕ್ಕೆ ಹೋರಾಟವನ್ನು ಹತ್ತಿಕ್ಕಲು ಸಲುವಾಗಿ  ಪೊಲೀಸ್ ನೋಟಿಸ್ ನೀಡಿದ್ದಾರೆ ಎಂದು ಹೈದರಾಬಾದ್ ಕರ್ನಾಟಕ ಯುವಶಕ್ತಿ ಸಂಘಟನೆ ಸಂಸ್ಥಾಪಕ ಅಧ್ಯಕ್ಷ ಬಸವರಾಜ್ ಗಾಣಿಗೇರ್ ಆರೋಪಿಸಿದ್ದಾರೆ ಕುಷ್ಟಗಿ ನಗರದ ಪ್ರವಾಸ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಪ್ರಗತಿಪರ ಒಕ್ಕೂಟದ ಪದಕಾರಿಗಳು ಸುಮಾರು ದಿನಗಳಿಂದ ಅಭಿವೃದ್ಧಿ ಕಾಣದೆ ನೆನಗುದಿಗೆ ಬಿದ್ದಿದ್ದ ರಸ್ತೆ ಹಾಗೂ ಚರಂಡಿ ಮತ್ತು ದೋಟಿಹಾಳ ಕಂದಾಯ ಹೋಬಳಿ ಆರೋಗ್ಯ ಕೇಂದ್ರವನ್ನು  ಮೇಲ್ದರ್ಜೆಗೇರಿಸಲು  ಸಂಬಂಧಪಟ್ಟಂತೆ ಹೋರಾಟ ಮಾಡುವ ಸಂದರ್ಭದಲ್ಲಿ ಕೇಸೂರು  ಗ್ರಾಮಕ್ಕೆ ಆಗಮಿಸಿದ  ಹಾಲಿ ಶಾಸಕ ಅಮರೇಗೌಡ ಪಾಟೀಲ್ ಬಯ್ಯಾಪುರ ಮಾಜಿ ಶಾಸಕ ಹಸನಸಾಬ್ ದೋಟಿಹಾಳ ಅವರ ಕಾರನ್ನು ತಡೆದು ವಾಸ್ತವ್ಯ ವಂಶ ತಿಳಿಸುತ್ತಿರುವ ಸಂದರ್ಭದಲ್ಲಿ ಪ್ರಗತಿಪರ ಸಂಘಟನೆಗಳಿಂದ ಅವರಿಗೆ ಗೆರವು ಹಾಕಲಾಗಿತ್ತು.
ಹೋರಾಟದ ಬಗ್ಗೆ ಮುಂಚಿತವಾಗಿಯೂ ಪೊಲೀಸ್ ಇಲಾಖೆಯಿಂದ ಅನುಮತಿ ಪಡೆಯಲಾಗಿತ್ತು ಆದರೆ ಕೆಲವು ರಾಜಕೀಯ ವ್ಯಕ್ತಿಗಳು ಪೊಲೀಸರಿಗೆ ತಪ್ಪು ಮಾಹಿತಿ ನೀಡಿ ನಮ್ಮ ಮೇಲೆ ಸುಳ್ಳು ಆರೋಪ ಮಾಡಿ ಪ್ರಕರಣ ದಾಖಲಿಸಿಕೊಂಡು ಕಾಲಂ 107/109/110/ ಅಡಿಯಲ್ಲಿ 1 ಲಕ್ಷ ರುಪಾಯಿ ಬಾಂಡ್ ಮತ್ತು ಚಿರಸ್ತಿಯ ಜಮೀನು ಪಹಣಿ ಪತ್ರಿಕೆಗಳನ್ನು ಭದ್ರತೆ ಸಲುವಾಗಿ ಇಲಾಖೆಗೆ ಸಲ್ಲಿಸಬೇಕೆಂದು  ಮತ್ತು 6 ತಿಂಗಳ ವರೆಗೆ ಯಾವುದೇ ಹೋರಾಟದಲ್ಲಿ ಭಾಗಿ ಆಗಬಾರದೆಂದು ನೋಟಿಸ್ ಜಾರಿ ಮಾಡಿದ್ದಾರೆ ಈಗಿನ ವೈಜ್ಞಾನಿಕ ಕಾಲದಲ್ಲಿ ರಸ್ತೆಗಳು ಅಭಿವೃದ್ಧಿಯಾಗದೆ  ಹದಗೆಟ್ಟಿರುವುದು ನಾಚಿಕೆಗೇಡಿನ ಸಂಗತಿ  ಎಂದು ಜನಪ್ರತಿನಿಧಿಗಳ ವಿರುದ್ಧ ಕಿಡಿಕಾರಿದರು ಇಂಥ ನೋಟಿಸುಗಳಿಗೆ ಎದುರುವ ಪ್ರಶ್ನೆ ಇಲ್ಲ ಈಗಾಗಲೇ ಮುಖ್ಯಮಂತ್ರಿಗಳಿಗೆ  ಕಂದಾಯ ಇಲಾಖೆ ಅಧಿಕಾರಿಗಳಿಗೆ ಕಂದಾಯ ಇಲಾಖೆ ಅಧೀನ ಕಾರ್ಯದರ್ಶಿಗಳಿಗೆ ಜಿಲ್ಲಾಧಿಕಾರಿಗಳಿಗೆ ಶಾಸಕರಿಗೆ ಮನವಿ ಸಲ್ಲಿಸಲಾಗಿದೆ ಎಂದು ವಿವರಿಸಿದರೆ  ಮುಂಬರುವ ವಿಧಾನಸಭಾ ಚುನಾವಣೆಯ ಅಧಿಸೂಚನೆ ಹೊರಡಿಸುವ ಮುಂಚೆ ನಮ್ಮ ಈ ಮೂರು ಬೇಡಿಕೆಗಳಿಗೆ ಸ್ಪಂದಿಸಬೇಕು ಇಲ್ಲವಾದರೆ ತಾಲೂಕಿನ ಗೋತಿಗಿ ಗ್ರಾಮದಿಂದ ಕನ್ನಡ ಪರ ಮತ್ತು ಪ್ರಗತಿಪರ ಹಾಗೂ ಸಂಘಟನೆಗಳಿಂದ ಹಾಗೂ ಈ ಭಾಗದಲ್ಲಿ ಬರುವ ವಿವಿಧ ಗ್ರಾಮಗಳ ಸಾರ್ವಜನಿಕರೊಂದಿಗೆ  ಸ್ವತಂತ್ರ ಹೋರಾಟಗಾರರು ಮಾಜಿ ಶಾಸಕರು ಕಾಂತರಾವ್  ದೇಸಾಯಿ ಅವರ ಮನೆಯಿಂದ ದೋಟಿಹಾಳ ಸುಖಮನಿ ತಾತನ ದೇವಸ್ಥಾನ ಅವರಿಗೆ ಪಾದಯಾತ್ರೆ ಮಾಡಿ ಸಂಬಂಧಪಟ್ಟಂತ ಅಧಿಕಾರಿಗಳಿಗೆ ಮನವಿ ಸಲ್ಲಿಸುತ್ತೇವೆ ಒಂದು ವೇಳೆ ಇದಕ್ಕೂ ಕೂಡ ಪ್ರತಿಕ್ರಿಸದಿದ್ದರೆ ಧರಣಿ ಮತ್ತು ಉಪವಾಸ ಸತ್ಯಾಗ್ರಹವನ್ನು ಹಮ್ಮಿಕೊಳ್ಳುತ್ತವೆ ಎಂದು ಎಚ್ಚರಿಸಿದರು.
ಇದೇ ಸಂದರ್ಭದಲ್ಲಿ ಪ್ರಗತಿಪರ ಹೋರಾಟಗಾರರಾದ ಬಸವರಾಜ್ ಕಡಿವಾಲ ಪರಶುರಾಮ್ ಈಳಿಗೆರ್ ಪ್ರಕಾಶ್ ಪಟ್ಟೇದ  ಶ್ರೀನಿವಾಸ ಕಂಟ್ಲೆ ನಾಗನಗೌಡ ಪಾಟೀಲ್ ಆನಂದ್ ಆಗರಗಿ ಇನ್ನೂ ಅನೇಕ ಸಂಘಟನೆಗಳ ಪ್ರಮುಖರು ಪಾಲ್ಗೊಂಡಿದ್ದರು
ಮಲ್ಲಿಕಾರ್ಜುನ ದೋಟಿಹಾಳ, ಸಿದ್ದಿ ಟಿವಿ  




Previous Post Next Post

AD

 


Contact For News&Ads

Siddi TV

Contact Form

f="https://unpkg.com/video.js/dist/video-js.css" rel="stylesheet">